ನನಗೆ ಎರಡು ಡೈವೋರ್ಸ್ ಆಗಿದೆ: ಚಕ್ರವರ್ತಿ ಚಂದ್ರಚೂಡ್

Public TV
2 Min Read

ಬಿಗ್‍ಬಾಸ್ ಮನೆಯಲ್ಲಿ ಚಕ್ರವರ್ತಿ ಚಂದ್ರ ಚೂಡ್ ಹಾಗೂ ಮಂಜು ಮಧ್ಯೆ ಕಿಚ್ಚಿನ ಕಾವೇರಿದೆ. ಸದ್ಯ ಮಂಜು ಹಾಗೂ ದಿವ್ಯಾ ಸುರೇಶ್ ಇಬ್ಬರದ್ದು ಕೃತಕ ಸಂಬಂಧ ಎಂದು ಚಕ್ರವರ್ತಿ ಚಂದ್ರಚೂಡ್ ಖಂಡಿಸಿ ತೀಕ್ಷ್ಣವಾದ ಮಾತುಗಳಿಂದ ಚುಚ್ಚಿದ್ದಾರೆ.

ಚಕ್ರವರ್ತಿಯವರ ಹೇಳಿಕೆ ಹಾಗೂ ಅಭಿಪ್ರಾಯವನ್ನು ವಿರೋಧಿಸಿದ ಮಂಜು, ನಾವಿಬ್ಬರೂ ನಾಟಕ ಆಡುತ್ತಿದ್ದೇವೆ ಎಂದಿದ್ದಾರೆ. ಅದು ಎಲ್ಲರಿಗೂ ಗೊತ್ತಿತ್ತು. ಆಗ ಎಲ್ಲರೂ ತಮಾಷೆ ಮಾಡುತ್ತಿದ್ದರು, ರೇಗಿಸುತ್ತಿದ್ದರು, ಮಾತನಾಡುತ್ತಿದ್ದರು, ನಾವು ನಾಟಕ ಆಡುತ್ತಿದ್ದೇವು ಎಂಬುವುದು ನಮ್ಮಿಬ್ಬರಿಗೆ ಮಾತ್ರವಲ್ಲದೇ ಇಡೀ ಮನೆಗೆ ತಿಳಿದಿತ್ತು. ನಾವು ಸಿರಿಯಸ್ ಆಗಿ ಎಂದಿಗೂ ಮದುವೆ ಆಗುತ್ತೇವೆ ಎಂದು ಹೇಳಿಲ್ಲ. ನಾನು ಮಾತನಾಡಬೇಕಾದರೆ ತೃತೀಯ ಜೋಕ್‍ಗಳು ಎಂದು ಇಂದು ಹೇಳುತ್ತಿದ್ದಾರೆ. ಇದೇ ಜೋಕ್‍ಗಳಿಗೆ ನೀವು ಯಾಕೆ ನಕ್ಕಿದ್ರಿ? ಚೆನ್ನಾಗಿದ್ದಾಗ ಒಂದು ರೀತಿ ಮಾತನಾಡಿ, ಚೆನ್ನಾಗಿಲ್ಲದೇ ಇದ್ದಾಗ ಇದು ತೃತೀಯ ಜೋಕ್, ಅಧಿಕ ಪ್ರಸಂಗಿ ಎಂದು ಮಾತನಾಡುವುದರಲ್ಲಿ ಏನಿದೆ? ಪತ್ತರವಳ್ಳಿ ಎಂಬ ಪದಕ್ಕೆ ಇಷ್ಟು ಅರ್ಥ ಇದೆ ಎಂದು ಗೊತ್ತಿರಲಿಲ್ಲ. ನಾನು ಇವರಷ್ಟು ಓದಿಲ್ಲ. ಇವರಷ್ಟು ತಿಳಿದುಕೊಂಡಿಲ್ಲ. ಅಷ್ಟಲ್ಲಾ ತಮಾಷೆ ಮಾಡುವಾಗ, ಈ ವಿಷಯವನ್ನು ಅಂದೇ ಹೇಳಬೇಕಾಗಿತ್ತು. ಹೆಣ್ಣು ಮಗು, ಹೆಣ್ಣು ಮಗು ಎಂದು ಮಾತನಾಡುತ್ತಿದ್ದಾರೆ, ಇವರು ಹೇಗಿದ್ದಾರೆ? ಹೇಗೆ ಬಂದಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

ಈ ವೇಳೆ ರೊಚ್ಚಿಗೆದ್ದ ಚಕ್ರವರ್ತಿ ಚಂದ್ರಚೂಡ್ ಹೇಗೆ ಬಂದಿದ್ದೇನೆ. ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಕ್ಕೆ ಇವನ್ಯಾರು? ಈ ಮನುಷ್ಯ ನನ್ನ ಜೀವನವನ್ನು ಏನು ನೋಡಿದ್ದಾನೆ? ನನ್ನ ಸಾಧನೆ ತೆಗೆದು ಇಡುತ್ತೇನೆ. ನಾನು 11 ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದೇನೆ. ನನಗೆ ಎರಡು ಡೈವೋರ್ಸ್ ಆಗಿದೆ. ಒಬ್ಬ ಖ್ಯಾತ ನಟಿಗೆ ಡೈವೋರ್ಸ್ ಮಾಡಿದ್ದೇನೆ. ಅದು ಇವರ ಮಜಾಭಾರತದಲ್ಲಿದ್ದರು. ಈ ಮನುಷ್ಯ ಏನು ಮಾಡುತ್ತಾನೆ? ಈ ಮನಷ್ಯನಿಗೆ ನನ್ನ ಜೀವನ ಏನು ಗೊತ್ತು? ಏನು ಮಾಡಿದ್ದೇನೆ ನಾನು ಹೆಣ್ಣು ಮಕ್ಕಳಿಗೆ, ಭಾರತದ ಸಂವಿಧಾನದ ಪ್ರಕಾರ ಡೈವೋರ್ಸ್ ತೆಗೆದುಕೊಂಡಿದ್ದೇನೆ ಎಂದು ಹೇಳುತ್ತಾರೆ.

ಈ ಜಗಳದ ಮಧ್ಯೆ ಪ್ರವೇಶಿಸಿದ ಕಿಚ್ಚ ಸುದೀಪ್, ಮಂಜುರವರೇ ನೀವು ಮಾತನಾಡಿದ ಒಂದು ಲೈನ್‍ನಿಂದ ಈ ಮಾತುಗಳು ಬರುತ್ತಿದೆ. ಇವರು ಹೇಗೆ ಬಂದರೂ ಎಂಬುವುದು ಎಲ್ಲರಿಗೂ ಗೊತ್ತು ಅಂತ ಹೇಳಿದ್ರಿ. ಈ ಮಾತನ್ನು ತಲೆಯಲ್ಲಿ ಏನಿಟ್ಟುಕೊಂಡು ಹೇಳಿದ್ರಿ ಎಂದು ಪ್ರಶ್ನಿಸುತ್ತಾರೆ.

ಆಗ ಮಂಜುರವರು ನನಗೆ ಐಡೆಂಟಿಟಿ ಬಂದಿದ್ದು, ಇವರನ್ನು ಮದುವೆಯಾದ ವ್ಯಕ್ತಿಯಿಂದ ನನಗೆ ಇವರ ಐಡೆಟಿಂಟಿ ಗೊತ್ತು. ಅದೇ ಉದ್ದೇಶದಿಂದ ಇವರು ಹೇಗೆ ಬಂದರು ಎಂದು ಹೇಳಿದ್ದೇನೆ. ಇನ್ನೊಂದು ಮದುವೆಯಾಗಿದ್ದರು, ಹೀಗಾಯಿತು ಅಷ್ಟೇ ನನಗೂ ಗೊತ್ತಿರುವುದು ಎಂದು ಉತ್ತರಿಸುತ್ತಾರೆ.

ಈ ವೇಳೆ ಸಿಡಿದೆದ್ದ ಚಕ್ರವರ್ತಿಯವರು ನನಗೆ ಎರಡು ಡೈವೋರ್ಸ್ ಆಗಿದೆ. ಭಾರತದ ಸಂವಿಧಾನ ಒಪ್ಪಿಕೊಂಡಿದೆ. ನಾನು ಪತ್ತರವಳ್ಳಿ ನಾಟಕ ಆಡಿ ಡೈವೋರ್ಸ್ ಆಗಿಲ್ಲ. ಆದರೆ ಮಂಜು ಪಾವಗಡ ಭಾರತದ ಸಂವಿಧಾನಕ್ಕಿಂತ ದೊಡ್ಡವನಲ್ಲ. ಇದಕ್ಕೆ ನಾನು ಬೇರೆ, ಬೇರೆ ಕಡೆ ನಾನು ಉತ್ತರ ನೀಡುತ್ತೇನೆ ಎಂದು ಹೇಳಿ ತಮ್ಮ ಮಾತನ್ನು ಮುಗಿಸಿದರು. ಇದನ್ನೂ ಓದಿ:ಪತ್ತರವಳ್ಳಿ ಅಂದರೆ ಬೇಲಿ ಸಂದಿಯಲ್ಲಿ ನಡೆಯುವ ಕಾಮ: ಮಂಜು ವಿರುದ್ಧ ಚಕ್ರವರ್ತಿ ಗರಂ

Share This Article
Leave a Comment

Leave a Reply

Your email address will not be published. Required fields are marked *