ಹಾಸನ: ಕೈಯಲ್ಲಿ ಡ್ರಿಪ್ಸ್, ಸಿರಿಂಜ್ ಹಾಕಿದ್ದ ವ್ಯಕ್ತಿ ನಡು ರಸ್ತೆಯಲ್ಲೇ ನಿತ್ರಾಣನಾಗಿ ಬಿದ್ದು, ನಗರದ ಜನತೆ ಕಂಗಾಲಾಗಿದ್ದಾರೆ.
ಈ ಘಟನೆಯಿಂದಾಗಿ ನಗರದಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಕೈಯಲ್ಲಿ ಡ್ರಿಪ್ಸ್, ಸಿರಿಂಜ್ ಹಾಕಿದ್ದ ವ್ಯಕ್ತಿ ನಗರದ ಹೊಸ ಬಸ್ ನಿಲ್ದಾಣದ ಹಿಂಭಾಗ ನಡುರಸ್ತೆಯಲ್ಲೇ ನಿತ್ರಾಣನಾಗಿ ಬಿದ್ದಿದ್ದಾನೆ. ಆತನ ಸ್ಥಿತಿ ನೋಡಿದ ಸ್ಥಳೀಯರು ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದಿರಬಹುದು ಎಂದು ಹತ್ತಿರ ಹೋಗದೆ, ಅಂಬುಲೆನ್ಸ್‍ಗೆ ಕರೆ ಮಾಡಿದ್ದಾರೆ.
ಸ್ಥಳಕ್ಕೆ ಬಂದ ಅಂಬುಲೆನ್ಸ್ ಸಿಬ್ಬಂದಿ ಕೂಡ ಕೊರೊನಾ ಭಯದಿಂದ ಆತನನ್ನು ಮುಟ್ಟಲು ಹಿಂಜರಿದಿದ್ದಾರೆ. ಇದನ್ನು ಗಮನಿಸಿದ ಅದೇ ಏರಿಯಾದಲ್ಲಿ ವಾಸವಿದ್ದ ವೈದ್ಯರೊಬ್ಬರು, ಪಿಪಿ ಇ ಕಿಟ್ ಧರಿಸಿಕೊಂಡು ಅಪರಿಚಿತ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದ್ದಾರೆ. ಕೊರೊನಾ ಸಮಯದಲ್ಲಿ ನಡುರಸ್ತೆಯಲ್ಲಿ ನಡೆದ ಈ ಘಟನೆ ಹಾಸನ ಜನರನ್ನು ಬೆಚ್ಚಿ ಬೀಳಿಸಿದೆ.