ನಟ ಚೇತನ್ ವಿರುದ್ಧ FIR ದಾಖಲು

Public TV
1 Min Read

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚೇತನ್ ಅಹಿಂಸಾ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಕನ್ನಡದ ಖ್ಯಾತ ನಟ ಚೇತನ್ ರಾಜ್ಯಾದ್ಯಂತ ಕೊರೊನಾ ಸೋಂಕಿತರು, ಕೊರೊನಾ ವಾರಿಯರ್ಸ್, ಲಾಕ್ ಡೌನ್ ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಕಾರ್ಯದಲ್ಲಿ ನಿರತರಾಗಿದ್ದರು. ಈ ವೇಳೆ ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಆಹಾರ ವಿತರಣೆ ಮಾಡಿದ ನಟರೊಬ್ಬರ ಬಗ್ಗೆ ಮನುಷ್ಯ ಸಹಜವಾಗಿ ಚೇತನ್ ಟೀಕಿಸಿದ್ದರು.

ಹೀಗಾಗಿ ನಟ ಚೇತನ್ ಹೇಳಿಕೆಗೆ ಕೆಂಡಾಮಂಡಲವಾಗಿದ್ದ ಬ್ರಾಹ್ಮಣ ಸಮುದಾಯ ಇದೀಗ ಸಿಡಿದೆದ್ದು ದೂರು ಕೊಟ್ಟಿದೆ. ಸನಾತನ ಹಿಂದೂ ಸಮುದಾಯದ ಭದ್ರ ಬುನಾದಿಗೆ ಅಪಮಾನ ಉಂಟು ಮಾಡಿ , ಸಮಾಜದಲ್ಲಿ ಸ್ವಾಸ್ಥ್ಯವನ್ನು ಹಾಳುಮಾಡಿ, ಜನರನ್ನು ಎತ್ತಿಕಟ್ಟುವ ರೀತಿ ಚೇತನ್ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳು ಯು ಟ್ಯೂಬ್‍ನನಲ್ಲಿ ಪ್ರಸಾರವಾಗಿವೆ.

ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯದ ಕುರಿತು ಹೇಳಿಕೆ ನೀಡಿದ್ದು, ಬ್ರಾಹ್ಮಣರ ಕುರಿತು ವ್ಯಂಗ್ಯವಾಗಿ ಮಾತಾಡಿದ್ದಾರೆ. ಇಂಥ ವಿಡಿಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ಬ್ರಾಹ್ಮಣರು ಭಯೋತ್ಪಾದಕರು ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವಿಪ್ರ ಯುವ ವೇದಿಕೆಯಿಂದ ಬಸವನಗುಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ. ಸದ್ಯ ದೂರಿನ ಆಧಾರದ ಮೇಲೆ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ನಟ ಚೇತನ್ ವಿರುದ್ದ ಎಫ್ ಐ ಆರ್ ದಾಖಲಾಗಿದ್ದು, ಐಪಿಸಿ 153(ಬಿ) 295(ಎ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನು ಓದಿ: ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್ ಸೇಠ್

 

View this post on Instagram

 

A post shared by Chetan Ahimsa (@chetanahimsa)

Share This Article
Leave a Comment

Leave a Reply

Your email address will not be published. Required fields are marked *