ನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವುಗೊಳಿಸುವಂತೆ ಶಿವಸೇನೆ ಉದ್ಧಟತನ

Public TV
1 Min Read

– ಧ್ವಜಸ್ತಂಭ ತೆರವುಗೊಳಿಸಿ, ಇಲ್ಲವೇ ಭಗವಾಧ್ವಜ ಸ್ಥಾಪಿಸಿ ಎಂದು ಪುಂಡಾಟ

ಬೆಳಗಾವಿ: ಶಿವಸೇನೆ ಮತ್ತೆ ಪುಂಡಾಟಿಕೆ ತೋರುತ್ತಿದ್ದು, ಮಹಾನಗರ ಪಾಲಿಕೆ ಮುಂಭಾಗದಲ್ಲಿ ಸ್ಥಾಪಿಸಿರುವ ಕನ್ನಡ ಧ್ವಜಸ್ತಂಭವನ್ನು ತೆರವುಗೊಳಿಸುವಂತೆ ಉದ್ಧತಟತನ ತೋರುತ್ತಿದೆ. ಧ್ವಜ ತೆರವುಗೊಳಿಸಿ ಇಲ್ಲವೇ ಭಗವಾಧ್ವಜ ಸ್ಥಾಪಿಸಲು ಅವಕಾಶ ಕೊಡಿ ಎಂದು ಶಿವಸೇನೆ ಪುಂಡಾಟಿಕೆ ಮೆರೆಯುತ್ತಿದೆ.

ಶಿವಸೇನೆ ಪುಂಡರು ಕೊಲ್ಲಾಪುರದಿಂದ ಆಗಮಿಸುತ್ತಿದ್ದು, ಬೆಳಗಾವಿಯ ಗಡಿ ಭಾಗದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಬೆಳಗಾವಿ ಶಿನ್ನೋಳ್ಳಿ ಚೆಕ್ ಪೋಸ್ಟ್, ಕೊಗನೊಳ್ಳಿ ಚೆಕ್ ಪೋಸ್ಟ್ ನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಎರಡೂ ಚೆಕ್ ಪೋಸ್ಟ್ ನಲ್ಲಿ ಇನ್ನೂರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಬೆಳಗಾವಿ ಪೊಲೀಸರು ಬ್ಯಾರಿಕೆಡ್ ಹಾಕಿ, ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ. ಹೀಗಾಗಿ ಬೆಳಗಾವಿ ಗಡಿ ಪ್ರದೇಶ ಬೂದಿ ಮುಚ್ಚಿದ ಕೆಂಡದಂತಿದೆ.

ಶಿವಸೇನೆ ಪುಂಡರು ಭಗವಾಧ್ವಜ ಸಮೇತ ಶಿನ್ನೋಳ್ಳಿ ಚೆಕ್ ಪೋಸ್ಟ್ ಗೆ ಆಗಮಿಸುತ್ತಿದ್ದು, ಭಗವಾಧ್ವಜ ಹಿಡಿದುಕೊಂಡು ರಾಜ್ಯದ ಗಡಿ ಪ್ರವೇಶ ಮಾಡುತ್ತಿದ್ದಾರೆ. ನಾಡದ್ರೋಹಿ ಘೋಷಣೆ ಕೂಗುತ್ತಾ ಮಹಾರಾಷ್ಟ್ರ-ಕರ್ನಾಟಕ ಗಡಿ ಮಧ್ಯೆ ಆಗಮಿಸಿದ್ದಾರೆ. ಬೆಳಗಾವಿ, ಕಾರವಾರ, ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ನಾಡದ್ರೋಹಿ ಘೋಷಣೆ ಕೂಗುತ್ತಿದ್ದಾರೆ. ಬಾಜಾ ಭಜಂತ್ರಿ ಸಮೇತ ಆಗಮಿಸುತ್ತಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಬೆಳಗಾವಿ ಮಹಾನಗದಿಂದ ಸಿನೋಳಿ ರಾಜ್ಯದ ಗಡಿ ಕೇವಲ ಹತ್ತು ಕಿ.ಮೀ. ದೂರದಲ್ಲಿದೆ. ಶಿವಸೇನೆ ಪುಂಡರು ಮೆರವಣಿಗೆ ಮೂಲಕ ರಾಜ್ಯದ ಗಡಿಗೆ ಬಂದು ತಲುಪಿದ್ದು, ರಾಜ್ಯದ ಗಡಿಯಲ್ಲಿ ನಿಂತು ನಾಡದ್ರೋಹಿ ಘೋಷಣೆ ಕೂಗುತ್ತಿದ್ದಾರೆ. ಬೆಳಗಾವಿಯ ಗಡಿಯಲ್ಲಿ ಶಿವಸೇನೆ ಪುಂಡಾಟ ನಡೆಸಿದರೂ ಮಹಾರಾಷ್ಟ್ರ ಪೊಲೀಸರು ಕೈ ಕಟ್ಟಿ ನಿಂತಿದ್ದಾರೆ. ಈ ಮೂಲಕ ಶಿವಸೇನೆ ಪುಂಡಾಟಕ್ಕೆ ಪೊಲೀಸರು ಸಾಥ್ ನೀಡಿದ್ದಾರೆ. ಗಲಾಟೆಯಿಂದಾಗಿ ಗಡಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳು ಸಾಲುಗಟ್ಟಿ ನಿಂತಿವೆ. ಒಂದು ಗಂಟೆಯಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *