ನವದೆಹಲಿ: ದೇಶದ್ಯಾಂತ ಕೊರೊನಾ ಪರೀಕ್ಷೆಗೆ ಏಕರೂಪದ ದರ ನಿಗದಿ ಪಡಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ, ಮೃತ ದೇಹಗಳನ್ನು ವ್ಯವಸ್ಥಿತ ಅಂತ್ಯ ಸಂಸ್ಕಾರ ನಡೆಸುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸ್ವಯಂ ದೂರು ದಾಖಲಿಸಿಕೊಂಡಿತ್ತು. ನ್ಯಾ.ಅಶೋಕ್ ಭೂಷಣ್ ನೇತೃತ್ವದ ಪೀಠ ಈ ಅರ್ಜಿ ವಿಚಾರಣೆ ನಡೆಸಿತು.
ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಉತ್ತಮ ಚಿಕಿತ್ಸೆ ದೊರೆಯುತಿದೆಯೇ ಇಲ್ವೇ ಎನ್ನುವುದು ಪರಿಶೀಲಿಸಲು ಸರ್ಕಾರ ತಜ್ಞರ ತಂಡ ರಚಿಸಬೇಕು. ಈ ತಜ್ಞರ ತಂಡಗಳು ಆಸ್ಪತ್ರೆಗಳಿಗೆ ಆಗ್ಗಾಗ್ಗೆ ಭೇಟಿ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಲ್ಲಾ ಕೊರೊನಾ ವಾರ್ಡ್ ಗಳಲ್ಲಿ ಸಿಸಿಟಿವಿ ಅಳವಡಿಬೇಕು ಎಂದು ಪೀಠ ಸೂಚಿಸಿದೆ.
ಜೊತೆಗೆ ತಜ್ಞರ ತಂಡ, ಮೃತ ದೇಹಗಳ ಅಂತ್ಯ ಸಂಸ್ಕಾರದಲ್ಲಿರುವ ದೋಷಗಳನ್ನು ಸರಿಪಡಿಸಬೇಕು ಅಲ್ಲದೇ ದೇಶದ ವಿವಿಧ ರಾಜ್ಯಗಳಲ್ಲಿ ಕೊರೊನಾ ಪರೀಕ್ಷೆ ವಿಭಿನ್ನ ದರಗಳನ್ನು ನಿಗದಿ ಪಡಿಸಿದೆ, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಲ್ಲಿ ಒಂದೇ ದರ ನಿಗದಿಪಡಿಸಬೇಕು ಎಂದು ಆದೇಶಿಸಿದೆ.