ದಿವ್ಯಾ ಸುರೇಶ್‍ಗೆ ಗೊಂದಲ – ಕಾರಣವೇನು?

Public TV
2 Min Read

ಮೊದಲ ಬಾರಿಗೆ ಬಿಗ್‍ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಿದ್ದಾರೆ ದಿವ್ಯಾ ಸುರೇಶ್. ಕ್ಯಾಪ್ಟನ್ ಆದ ಮಹಿಳೆಯಲ್ಲಿ ಇವರು 2ನೆಯವರು ಆಗಿದ್ದಾರೆ. ಆದರೆ ಅದೊಂದು ವಿಚಾರ ಕ್ಯಾಪ್ಟನ್ ದಿವ್ಯಾ ಸುರೇಶ್‍ಗೆ ಸಿಕ್ಕಾಪಟ್ಟೆ ಗೊಂದಲ ಉಂಟು ಮಾಡಿದೆ.

ಒಂದು ಟಾಸ್ಕ್ ಅಡುವಾಗ ಎಂಟು ಜನರಲ್ಲಿ ಐವರು ಆಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಆದರೆ ಎಂಟು ಜನರು ಕೂಡ ಟಾಸ್ಕ್ ಆಡುವುದಕ್ಕೆ ಮುಂದೆ ಬಂದರು. ಯಾರಿಗೂ ಹಿಂದಕ್ಕೆ ಹೋಗಬೇಕು ಎಂಬ ಮನಸ್ಸಿರಲಿಲ್ಲ. ಅದರಲ್ಲೂ ಮಂಜು ಪಾವಗಡ ಮತ್ತು ಅರವಿಂದ್ ಕೆ.ಪಿ. ಅಂತೂ ನಾವು ಟಾಸ್ಕ್ ಆಡಿಯೇ ಸಿದ್ಧ ಎಂದು ಖಡಕ್ ಆಗಿಯೇ ಹೇಳಿದರು. ಈ ಮಧ್ಯೆ ಮಾತಿನ ಚಕಮಕಿಯೂ ಆಗಿತ್ತು. ಕೊನೆಗೆ ಐವರನ್ನು ಆಯ್ಕೆ ಮಾಡುವ ಜವಾಬ್ದಾರಿ ಕ್ಯಾಪ್ಟನ್‍ಗೇ ಸಿಕ್ಕಿತ್ತು. ಇದನ್ನೂ ಓದಿ: ನೀವೂ ಮಾಡಿ ಬೀಟ್‍ರೂಟ್ ಪುಲಾವ್

ಹೀಗೆ ಇನ್ನೊಂದು ಟಾಸ್ಕ್ ನೀಡಿದರು. ಜೋಳದ ಕಣಜ ಎಂಬ ಟಾಸ್ಕ್ ಅನ್ನು ಇಬ್ಬರು ಆಡಬೇಕಿತ್ತು. ಆ ಇಬ್ಬರನ್ನು ಕ್ಯಾಪ್ಟನ್ ಆಯ್ಕೆ ಮಾಡಿ ಕಳಿಸಬೇಕಿತ್ತು. ಆದರೆ ಪ್ರಶಾಂತ್, ಮಂಜು, ಅರವಿಂದ್ ನಾವು ಆಡುತ್ತೇವೆ ಎಂದು ನಿರ್ಧಾರ ಮಾಡಿದರು. ಮಂಜು ಮತ್ತು ಅರವಿಂದ್ ಆಡಲಿ ಎಂದು ಕ್ಯಾಪ್ಟನ್ ದಿವ್ಯಾ ಹೇಳಿದ್ದಕ್ಕೆ ಪ್ರಶಾಂತ್ ಗರಂ ಆದರು. ಅಲ್ಲಿಯೂ ಇನ್ನೊಮ್ಮೆ ವಾಗ್ವಾದ ಉಂಟಾಯಿತು. ಕೊನೆಗೆ ಮಂಜು ಮತ್ತು ಅರವಿಂದ್ ಅವರೇ ಜೋಳದ ಕಣಜ ಟಾಸ್ಕ್ ಆಡಿದರು.

ಸದಸ್ಯರಿಗೆ ಪಾಯಿಂಟ್‍ಗಳನ್ನು ಹೆಚ್ಚಿಸಿಕೊಳ್ಳಲು ಬಿಗ್ ಬಾಸ್ ಕಾಲಾಯ ತಸ್ಮೈ ನಮಃ ಎಂಬ ಟಾಸ್ಕ್ ನೀಡಿದರು. ಅದನ್ನು ನಾಲ್ವರು ಆಡಬೇಕಿತ್ತು. ಈ ಬಾರಿಯೂ ಎಂಟು ಜನ ಕೂಡ ಆಡುವುದಕ್ಕೆ ಸಿದ್ಧವಾದರು. ಮತ್ತೊಮ್ಮೆ ಕ್ಯಾಪ್ಟನ್ ದಿವ್ಯಾ ಸುರೇಶ್‍ಗೆ ಗೊಂದಲ ಶುರುವಾಯ್ತು. ಈ ಬಾರಿ ದಿವ್ಯಾ ಉರುಡುಗ ಬಗ್ಗೆ ಪ್ರಶಾಂತ್ ಮಾತನಾಡಿದರು. ಅದಕ್ಕೂ ಕೂಡ ವಾಗ್ವಾದ ಶುರುವಾಯಿತು. ತುಂಬ ಚರ್ಚೆಗಳು, ಗೊಂದಲ, ಮಾತಿನ ಸಮರಗಳ ನಂತರ ದಿವ್ಯಾ ಸುರೇಶ್, ನಾಲ್ವರ ಹೆಸರನ್ನು ಹೇಳಿದರು. ವೈಷ್ಣವಿ, ದಿವ್ಯಾ ಉರುಡುಗ, ಚಕ್ರವರ್ತಿ ಚಂದ್ರಚೂಡ್, ಶುಭಾ ಪೂಂಜಾರನ್ನು ಆಯ್ಕೆ ಮಾಡಿದರು. ಒಟ್ಟಿನಲ್ಲಿ ಟಾಸ್ಕ್‌ಗಳಿಗೆ ಸದಸ್ಯರನ್ನು ಆಯ್ಕೆ ಮಾಡುವ ವಿಚಾರಕ್ಕೆ ಸಾಕಷ್ಟು ಗೊಂದಲ, ವಾಗ್ವಾದ, ಚರ್ಚೆಗಳನ್ನು ಕ್ಯಾಪ್ಟನ್ ದಿವ್ಯಾ ಸುರೇಶ್ ಎದುರಿಸಬೇಕಾಯ್ತು.

ದಿವ್ಯಾ ಸುರೇಶ್ ವಾರಪೂರ್ತಿಯಾಗಿ ಗೊಂದಲವನ್ನೇ ಹೆಚ್ಚಾಗಿ ಎದುರಿಸಬೇಕಾಯಿತ್ತು. ಕೆಲವೊಮ್ಮೆ ಟಾಸ್ಕ್‌ಗೆ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳುವಾಗ ಗೊಂದಲ ಉಂಟಾದಾಗ ಮನೆಯವರ ಅಭಿಪ್ರಯಾವನ್ನು ಸಂಗ್ರಹಿಸಿ ಜಡ್ಜ್ ಮಾಡತೊಡಗಿದರು. ಈವಾರದ ಕಥೆ ಕಿಚ್ಚನ ಜೊತೆಯಲ್ಲಿ ಸುದೀಪ್ ಏನ್ ಹೇಳುತ್ತಾರೆ. ದಿವ್ಯಾ ಹೇಗೆ ಗೊಂದಲ ಮಾಡಿಕೊಂಡರಾ? ಏನೆಲ್ಲಾತಪ್ಪುಗಳು ಮನೆಯಲ್ಲಿ ಆಗಿದೆ ಎನ್ನುವುದರ ಸುದೀಪ್ ಮಾತನಾಡುತ್ತಾರ ಎನ್ನುವುದನ್ನು ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *