ದಿವ್ಯಾ ಪಕ್ಕಕ್ಕೆ ಇರುತ್ತಿದ್ದದ್ದು ನೆನೆದು ಮತ್ತೆ ಕಣ್ಣೀರು ಹಾಕಿದ ಅರವಿಂದ್

Public TV
2 Min Read

ರವಿಂದ್ ಅವರಿಗೆ ದಿವ್ಯಾ ಉರುಡುಗ ಪದೇ ಪದೇ ನೆನಪಾಗುತ್ತಿದ್ದು, ಪ್ರತಿಯೊಂದು ವಿಚಾರದಲ್ಲೂ ಅವರನ್ನು ಊಹಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂದು ಬಿಗ್ ಬಾಸ್ ಮನೆಯಲ್ಲಿ ಕೊನೇಯದಾಗಿ ಮಾತನಾಡುವಾಗ ಸಹ ಅವರ ಸ್ನೇಹ, ಬಾಂಧವ್ಯದ ಕುರಿತು ಹೇಳಿ ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಸೀಸನ್ 8 ಮೊಟಕುಗೊಳ್ಳುತ್ತಿರುವ ಹಿನ್ನೆಲೆ ಇಂದು ಕೊನೆಯ ದಿನವಾಗಿದ್ದು, ಬಿಗ್ ಮನೆಯ ಅನುಭವದ ಕುರಿತು ಕೊನೆಯ ಮಾತು ಹೇಳುವಂತೆ ಸ್ಪರ್ಧಿಗಳಲ್ಲಿ ಕಣ್ಮಣಿ ಕೇಳಿದ್ದಾರೆ. ಎಲ್ಲರೂ ತಮ್ಮ ಅನಿಸಕೆಯನ್ನು ಹಂಚಿಕೊಂಡಿದ್ದಾರೆ. ಅದೇ ರೀತಿ ಅರವಿಂದ ಮಾತನಾಡುತ್ತಲೇ ಭಾವುಕರಾದರು. ಅಲ್ಲದೆ ದಿವ್ಯಾ ಉರುಡುಗ ಅವರನ್ನು ನೆನೆದು ಕಣ್ಣೀರನ್ನು ಸಹ ಹಾಕಿದ್ದಾರೆ.

ನಾನು ಕ್ರೀಡಾ ವಲಯದಿಂದ ಬಂದವನು, ಬಿಗ್ ಬಾಸ್ ಮನೆಯಲ್ಲಿ ಎಲ್ಲರೂ ಮನರಂಜನಾ ಕ್ಷೇತ್ರದವರಾಗಿದ್ದಾರೆ. ಹೇಗೆ ಬೆರೆಯುವುದು, ಕನೆಕ್ಟ್ ಆಗುತ್ತಾರಾ ಎಂಬ ಚಿಂತೆ ಮನೆಗೆ ಬರುವುದಕ್ಕೂ ಮುನ್ನ ಕಾಡಿತ್ತು. ತುಂಬಾ ಡೌಟ್‍ಫುಲ್ ಆಗೇ ಬಂದೆ. ಆದರೆ ದಿನ ಕಳೆದಂತೆ ತಿಳಿಯಿತು, ಯಾರೀಗೂ ಆ ರೀತಿಯ ಆಟಿಟ್ಯೂಡ್ ಇರಲ್ಲ, ಎಲ್ಲರೂ ನಮ್ಮ ರೀತಿಯೇ ಸ್ವಲ್ಪ ಜೀವನ ನೋಡಿರುತ್ತಾರೆ ಎನ್ನುವುದು.

ಈ ರೀತಿಯ ಅನುಭವ ನೋಡಿ ಸುಮಾರು 15 ವರ್ಷಗಳೇ ಕಳೆಯಿತು. ಬೈಕ್ ರೇಸ್‍ನಲ್ಲಿ ಭಾಗವಹಿಸುವುದರಿಂದ ಕುಟುಂಬಸ್ಥರಿಂದ ದೂರ ಇರುತ್ತೇನೆ. ಟ್ರಾವೆಲ್ ಮಾಡುತ್ತಲೇ ಇರುತ್ತೇನೆ. ಹೀಗಾಗಿ ಸ್ನೇಹಿತರಿಗೂ ಸಿಗುವುದು ಅಪರೂಪ. ಆದರೆ 15 ವರ್ಷಗಳ ಬಳಿಕ ಈ ರೀತಿ 17 ಸ್ನೇಹಿತರು, ದಿನ ನಿತ್ಯ ಅವರೊಟಿಗೆ ಕಾಲ ಕಳೆಯುವುದು, ಟಾಸ್ಕ್ ಮಾಡುವುದು, ಅವರ ಜೊತೆಗೆ ಗುದ್ದಾಡುವುದು, ಮಾತನಾಡುವುದು, ಮತ್ತೆ ಅವರಿಂದಲೇ ಮೆಚ್ಚುಗೆ ಪಡೆಯುವುದು, ತಪ್ಪಾದಲ್ಲಿ ಸರಿ ಮಾಡಿಕೊಳ್ಳುವುದು ತುಂಬಾ ಖುಷಿ ಆಯಿತು ಎಂದು ಭಾವುಕರಾದರು.

ನನ್ನ ಫೀಲ್ಡ್ ಅವರಿಗೆ ಅರ್ಥವಾಗದಿದ್ದರೂ, ಮಾನವೀಯತೆಯ ದೃಷ್ಟಿಯಿಂದ ನನ್ನ ಮಟ್ಟಕ್ಕೆ ಇಳಿದು ನನ್ನನ್ನು ಒಪ್ಪಿಕೊಂಡರು. ಒಳ್ಳೆಯ ಸ್ನೇಹಿತನನ್ನಾಗಿ ತೆಗೆದುಕೊಂಡು, ಎಲ್ಲದರಲ್ಲೂ ಸರಿಸಮಾನವಾಗಿ ತೆಗೆದುಕೊಂಡರು. ಡೌಟ್ ಇದ್ದಾಗ ನನ್ನ ಬಳಿ ಬಂದಿದ್ದಾರೆ, ನನಗೆ ಡೌಟ್ ಇದ್ದಾಗ ಅವರ ಬಳಿ ಹೋಗಿದ್ದೇನೆ. ಇದೇ ಗ್ಯಾಪ್‍ನಲ್ಲಿ ದಿವ್ಯಾ ಉರುಡುಗ ಕ್ಲೋಸ್ ಆದರು, ಇಂದು ಅವಳಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಯಾವಾಗಲೂ ನನ್ನ ಪಕ್ಕದಲ್ಲೇ ಕುಳಿತುಕೊಳ್ಳುತ್ತಿದ್ದಳು. ಒಳ್ಳೆ ಫ್ರಂಡ್ ಸಿಕ್ಕಿದಾರೆ ಇಲ್ಲಿ, ಅಲ್ಲದೆ ಎಕ್ಸ್ಟೆಂಡೆಡ್ ಫ್ಯಾಮಿಲಿ, ಒಳ್ಳೆಯ ಅನುಭವ ನನ್ನ ಜೀವನದಲ್ಲಿ ಇಷ್ಟು ಸಿಲ್ಲಿಯಾಗಿರೋಕೆ, ಇಷ್ಟು ನಗಲು ಆಗಿರಲಿಲ್ಲ. ಆರಂಭದಲ್ಲಿ ಮನೆಗೆ ಬಂದಾಗ ಎರಡು ವಾರ ನಕ್ಕು, ನಕ್ಕು ನನ್ನ ಧ್ವನಿಯೇ ಹೋಗಿತ್ತು. ಮಾತನಾಡಲು ಆಗುತ್ತಕಲೇ ಇರಲಿಲ್ಲ, ಅಷ್ಟು ನಕ್ಕಿದ್ದೇನೆ. ನನ್ನ ಜೀವನದ ಅದ್ಭುತ ಭಾಗ ಇದು. ಇಲ್ಲಿಂದ ದೊಡ್ಡ ಎಕ್ಸ್ಟೆಂಡೆಟ್ ಫ್ಯಾಮಿಲಿ ಕೊಂಡೊಯ್ಯುತ್ತೇನೆ. ಇದೊಂದು ರಿಲೇಶನ್‍ಶಿಪ್ ಫಾರ್ ಲೈಫ್ ಎಂದು ಭಾವಿಸುತ್ತೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *