ದಿನ ಭವಿಷ್ಯ: 09-07-2020

Public TV
2 Min Read

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಆಷಾಢ ಮಾಸ,
ಕೃಷ್ಣ ಪಕ್ಷ, ಚತುರ್ಥಿ,
ಬೆಳಗ್ಗೆ 10:12 ನಂತರ ಪಂಚಮಿ ತಿಥಿ,
ಗುರುವಾರ, ಶತಭಿಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 2:04 ರಿಂದ 3:40
ಗುಳಿಕಕಾಲ: ಬೆಳಗ್ಗೆ 9:16 ರಿಂದ 10:52
ಯಮಗಂಡಕಾಲ: ಬೆಳಗ್ಗೆ 6:04 ರಿಂದ 7:40

ಮೇಷ: ಮಕ್ಕಳ ವಿಚಾರದಲ್ಲಿ ಮನಃಸ್ತಾಪ, ಸಂಗಾತಿಯನ್ನು ನಿಂದಿಸುವಿರಿ, ಸ್ನೇಹಿತರಿಂದ ಬೇಸರ, ಒಬ್ಬಂಟಿಯಾಗಿರಲು ಆಲೋಚನೆ, ಕೃಷಿಕರಿಗೆ ಲಾಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಉದ್ಯೋಗಸ್ಥರಿಗೆ ಧನಾಗಮನ.

ವೃಷಭ: ಸೈಟ್-ವಾಹನ ಖರೀದಿಗೆ ಯೋಚನೆ, ಸಾಲದ ಸಹಾಯ ಲಭಿಸುವುದು, ಶೀತ ಸಂಬಂಧಿತ ಸಮಸ್ಯೆ, ಆರೋಗ್ಯದಲ್ಲಿ ವಯತ್ಯಾಸ, ಮಹಿಳಾ ಶತ್ರುಗಳಿಂದ ಕಿರಿಕಿರಿ, ಮಾನಸಿಕ ವೇದನೆ.

ಮಿಥುನ: ಮೋಜು ಮಸ್ತಿಯಲ್ಲಿ ತೊಡಗುವಿರಿ, ಕಲಾ ಚಟುವಟಿಕೆಗಳಿಗೆ ಪ್ರಯಾಣ, ಪ್ರೇಮ ವಿಚಾರ ಕುಟುಂಬದಲ್ಲಿ ಪ್ರಸ್ತಾಪ, ಆಸೆ ಆಕಾಂಕ್ಷೆ ಭಾವನೆಗಳಲ್ಲಿ ವಿಹಾರ, ಸೌಂದರ್ಯ ವರ್ಧಕ ವಸ್ತು ಖರೀದಿಗಾಗಿ ಖರ್ಚು, ಹಣಕಾಸು ಖರ್ಚಿನ ಬಗ್ಗೆ ನಿಗಾವಹಿಸಿ.

ಕಟಕ: ಸ್ನೇಹಿತರ ಮಧ್ಯೆ ಮನಃಸ್ತಾಪ, ಭೂ ವ್ಯವಹಾರದಲ್ಲಿ ಮೋಸ, ವಾಹನ ಖರೀದಿಯಲ್ಲಿ ಎಚ್ಚರ, ನಂಬಿಕಸ್ಥರಿಂದ ಹಣ ಮೋಸದ ಆತಂಕ, ಮಿತ್ರರ ಜೀವನದಲ್ಲಿ ಏರುಪೇರು.

ಸಿಂಹ: ಉದ್ಯೋಗ ಸ್ಥಳದಲ್ಲಿ ಅನುಮಾನ, ಗೌರವಕ್ಕೆ ಚ್ಯುತಿ, ವಿಕೃತ ಆಸೆಗಳಿಗೆ ಮನಸ್ಸು, ದೈಹಿಕ-ಮಾನಸಿಕ ಸ್ಥಿತಿ ವಿಚಲಿತ, ಕುಟುಂಬಸ್ಥರಿಂದ ಕಿರಿಕಿರಿ, ಸಂಗಾತಿಯಿಂದ ಮಾನಸಿಕ ಹಿಂಸೆ.

ಕನ್ಯಾ: ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ದುಶ್ಚಟ-ಮೋಜು ಮಸ್ತಿ ಹೆಚ್ಚಾಗುವುದು, ಐಷಾರಾಮಿ ಜೀವನಕ್ಕೆ ಮನಸ್ಸು, ಬಂದ ಲಾಭವನ್ನು ಖರ್ಚು ಮಾಡುವಿರಿ, ಪತ್ರ ವ್ಯವಹಾರಗಳಿಂದ ನಷ್ಟ-ಸಂಕಷ್ಟ.

ತುಲಾ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ-ವ್ಯವಹಾರದಲ್ಲಿ ಅಧಿಕ ಲಾಭ, ಕಲಾವಿದರಿಗೆ ಅವಕಾಶ ಲಭಿಸುವ ಸಾಧ್ಯತೆ, ಉದ್ಯೋಗಾವಕಾಶ ಪ್ರಾಪ್ತಿ, ಅನಿರೀಕ್ಷಿತ ಶುಭ ಫಲ ಯೋಗ.

ವೃಶ್ಚಿಕ: ಸಂಗಾತಿ ನಡವಳಿಕೆ ಸಂಶಯಾತ್ಮಕ, ಉದ್ಯೋಗ ಸ್ಥಳದಲ್ಲಿ ಮೋಸ, ಗೌರವಕ್ಕೆ ಧಕ್ಕೆ, ನಿಂದನೆ, ವಸ್ತ್ರಾಭರಣ ಖರೀದಿಯಲ್ಲಿ ನಷ್ಟ.

ಧನಸ್ಸು: ಆತ್ಮೀಯರು-ಬಂಧುಗಳಿಂದ ಸಹಾಯ ಕೇಳುವಿರಿ, ಶೀತ ಸಂಬಂಧಿತ ಸಮಸ್ಯೆ, ಅತೀ ಕುಡಿತದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸ್ನೇಹಿತರ ನಡವಳಿಕೆಯಿಂದ ಕಿರಿಕಿರಿ, ಮನಸ್ಸಿಗೆ ಬೇಸರ.

ಮಕರ: ಆಕಸ್ಮಿಕ ಪ್ರೇಮದ ಬಲೆಗೆ ಸಿಲುಕುವಿರಿ, ಸಂಗಾತಿ ಆಯ್ಕೆಯಲ್ಲಿ ಎಚ್ಚರಿಕೆ, ಆಸೆ, ಭಾವೆನಗಳಿಗೆ ಧಕ್ಕೆ, ಉದ್ಯೋಗ ಸ್ಥಳದಲ್ಲಿ ಸಮಸ್ಯೆ.

ಕುಂಭ: ಸ್ಥಿರಾಸ್ತಿ-ಚಿನ್ನಾಭರಣ ಮೇಲೆ ಸಾಲ ಸಾಧ್ಯತೆ, ಭವಿಷ್ಯದ ಬಗ್ಗೆ ಚಿಂತನೆ, ಆತಂಕದಲ್ಲಿ ದಿನ ಕಳೆಯುವಿರಿ, ಮಾಟ-ಮಂತ್ರ ತಂತ್ರದ ಭೀತಿ, ಶಕ್ತಿ ದೇವತೆಗಳ ದರ್ಶನಕ್ಕೆ ಮುಂದಾಗುವಿರಿ.

ಮೀನ: ಸ್ವಲ್ಪ ಎಚ್ಚರ ತಪ್ಪಿದ್ರೂ ತೊಂದರೆ, ಪೊಲೀಸ್ ಸ್ಟೇಷನ್ ಮೆಟ್ಟಿಲೇರುವ ಸಾಧ್ಯತೆ, ಅನ್ಯರ ತಪ್ಪಿನಿಂದ ಶಿಕ್ಷೆಗೊಳಗಾಗುವಿರಿ, ಬಂಧುಗಳೇ ಶತ್ರುಗಳಾಗುವರು, ಉದರ, ಪಿತ್ತ, ಕಫ ಬಾಧೆ, ಗರ್ಭಕ್ಕೆ ಸಂಬಂಧಿತ ಸಮಸ್ಯೆ, ಸಂತಾನ ವಿಚಾರದಲ್ಲಿ ಓಡಾಟ.

Share This Article
Leave a Comment

Leave a Reply

Your email address will not be published. Required fields are marked *