ದಿನ ಭವಿಷ್ಯ: 04-06-2020

Public TV
2 Min Read

ಪಂಚಾಂಗ:
ಶ್ರೀ ಶಾರ್ವರಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ತ್ರಯೋದಶಿ ತಿಥಿ,
ಬೆಳಗ್ಗೆ 6:08 ನಂತರ ಚರ್ತುದಶಿ ತಿಥಿ,
ಗುರುವಾರ, ವಿಶಾಖ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 1:58 ರಿಂದ 3:34
ಗುಳಿಕಕಾಲ: ಬೆಳಗ್ಗೆ 9:10 ರಿಂದ 10:46
ಯಮಗಂಡಕಾಲ: ಬೆಳಗ್ಗೆ 5:57 ರಿಂದ 7:34

ಮೇಷ: ಮಕ್ಕಳಲ್ಲಿ ಚಟುವಟಿಕೆ ಅಧಿಕ, ಅಹಂಭಾವ, ಒರಟುತನ ಪ್ರದರ್ಶನ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಜಯ, ತಲೆ ನೋವು, ಅಧಿಕ ಉಷ್ಣ, ನರದೌರ್ಬಲ್ಯ, ಪಿತ್ತ ಬಾಧೆ, ರಕ್ತದೊತ್ತಡ ಹೆಚ್ಚಾಗುವುದು, ತಾಳ್ಮೆಯಿಂದ ಕಾರ್ಯ ಯಶಸ್ಸು.

ವೃಷಭ: ಪಿತ್ರಾರ್ಜಿತ ಆಸ್ತಿಗಾಗಿ ಖರ್ಚು, ಕೆಲಸ ಕಾರ್ಯ ಪ್ರಗತಿಗಾಗಿ ವೆಚ್ಚ, ಉದ್ಯೋಗ ನಿಮಿತ್ತ ಓಡಾಟ, ಪುಣ್ಯಕ್ಷೇತ್ರ ದರ್ಶನ, ದೂರ ಪ್ರಯಾಣ, ಬಂಧುಗಳಿಂದ ಕಿರಿಕಿರಿ, ಮೇಲಾಧಿಕಾರಿಗಳಿಂದ ಒತ್ತಡ.

ಮಿಥುನ: ಉದ್ಯಮ-ವ್ಯಾಪಾರಸ್ಥರಿಗೆ ಅಧಿಕ ಲಾಭ, ಮಿತ್ರರು-ತಂದೆಯ ಬಂಧುಗಳಿಂದ ಸಾಲ, ಅರ್ಥಿಕ ಸಮಸ್ಯೆ ಬಗೆಹರಿಯುವುದು, ಕುಟುಂಬ ಸಮೇತ ದೂರ ಪ್ರಯಾಣ.

ಕಟಕ: ಉದ್ಯೋಗದಲ್ಲಿ ಒತ್ತಡ, ನಾನಾ ಆಲೋಚನೆಗಳಿಂದ ನಿದ್ರಾಭಂಗ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ನಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ಉದ್ಯೋಗ ಬದಲಾವಣೆಗೆ ಮನಸ್ಸು.

ಸಿಂಹ: ಮಿತ್ರರೊಂದಿಗೆ ಪ್ರಯಾಣ, ಅಧಿಕವಾದ ಖರ್ಚು, ಅಹಂಭಾವದ ಮಾತುಗಳನ್ನಾಡುವಿರಿ, ಮಧ್ಯಾಹ್ನ ನಂತರ ದಾಂಪತ್ಯದಲ್ಲಿ ವಿರಸ, ಅನಗತ್ಯ ಮನಃಸ್ತಾಪ.

ಕನ್ಯಾ: ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಆತುರ ನಿರ್ಧಾರದಿಂದ ತೊಂದರೆ, ವ್ಯಾಪಾರ-ವ್ವಹಾರದಲ್ಲಿ ನಷ್ಟ, ಆಕಸ್ಮಿಕ ದುರ್ಘಟನೆ, ಅನಿರೀಕ್ಷಿತ ಕಾರಣಕ್ಕೆ ಪ್ರಯಾಣ, ಉದ್ಯೋಗ ಕಳೆದುಕೊಳ್ಳುವ ಭೀತಿ.

ತುಲಾ: ಉದ್ಯೋಗದಲ್ಲಿ ಲಾಭ, ನಿರುದ್ಯೋಗಿಗಳಿಗೆ ಕೆಲಸ ಲಭಿಸುವುದು, ಅಹಂಭಾವ, ಒತ್ತಡದ ಜೀವನ, ದಾಂಪತ್ಯದ ಮೇಲೆ ದುಷ್ಪರಿಣಾಮ, ಪ್ರಯಾಣದಲ್ಲಿ ಕಿರಿಕಿರಿ, ಆತ್ಮಗೌರವಕ್ಕೆ ಧಕ್ಕೆ.

ವೃಶ್ಚಿಕ: ಅನಿರೀಕ್ಷಿತ ಸೇವಾವೃತ್ತಿಯ ಉದ್ಯೋಗ ಪ್ರಾಪ್ತಿ, ಸರ್ಕಾರಿ ಕೆಲಸದಲ್ಲಿ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ತಂದೆಯೊಂದಿಗೆ ಕಲಹ, ಪ್ರಯಾಣಕ್ಕೆ ಅಡೆತಡೆ, ಮಿಶ್ರ ಫಲ ಯೋಗ.

ಧನಸ್ಸು: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಗೆ ಉತ್ತಮ ಅವಕಾಶ, ಶುಭ ಫಲ ಯೋಗ ಸಾಧ್ಯತೆ, ದುಶ್ಚಟಗಳಿಂದ ತೊಂದರೆ.

ಮಕರ: ಪಿತ್ರಾರ್ಜಿತ ಆಸ್ತಿ ತಗಾದೆ, ದಾಯಾದಿಗಳ ಕಲಹ, ಸಾಲಗಾರರೊಂದಿಗೆ ಕಿರಿಕಿರಿ, ಕಾರ್ಮಿಕರೊಂದಿಗೆ ಮನಃಸ್ತಾಪ, ವಾಹನ ಚಾಲನೆಯಲ್ಲಿ ಎಚ್ಚರ, ಅಪಘಾತವಾಗುವ ಸಾಧ್ಯತೆ.

ಕುಂಭ: ಉದ್ಯೋಗ ನಿಮಿತ್ತ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ಪ್ರಯಾಣ ರದ್ದಾಗುವ ಸಾಧ್ಯತೆ, ಕುಟುಂಬಸ್ಥರೊಂದಿಗೆ ಉತ್ತಮ ಬಾಂಧವ್ಯ, ಪ್ರೇಮ ವಿಚಾರದಲ್ಲಿ ಜಯ.

ಮೀನ: ಸ್ಥಿರಾಸ್ತಿ-ವಾಹನದ ಮೇಲ ಸಾಲ ಮಾಡುವ ಸಂದರ್ಭ, ನೀವಾಡುವ ಮಾತುಗಳಲ್ಲಿ ಎಚ್ಚರಿಕೆ, ಶತ್ರುತ್ವ ಅಧಿಕವಾಗುವುದು, ದಾಂಪತ್ಯದಲ್ಲಿ ವಿರಸ,ಅನಗತ್ಯ ಖರ್ಚು ಮಾಡುವಿರಿ.

Share This Article
Leave a Comment

Leave a Reply

Your email address will not be published. Required fields are marked *