ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15 ಸಾವಿರದ ಗಡಿಯತ್ತ ಸಾಗಿದ್ದು, ಇಂದು ದಾಖಲೆಯ 14,859 ಜನರಿಗೆ ಕೊರೊನಾ ಸೋಂಕು ತಗುಲಿದೆ. ಮಹಾಮಾರಿಗೆ ಬರೋಬ್ಬರಿ 78 ಮಂದಿ ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿಯೇ 9,917 ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,07,315ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 11,24,509ಕ್ಕೆ ಹೆಚ್ಚಳವಾಗಿದೆ. ರಾಜ್ಯದಲ್ಲಿ ಇಂದು 4,031 ಜನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವರೆಗೆ ಒಟ್ಟು 10,03,985 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಈ ವರೆಗೆ ಒಟ್ಟು 13,190 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಸದ್ಯ 577 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು 13,509 ಆಂಟಿಜನ್ ಟೆಸ್ಟ್, 1,20,228 ಆರ್ ಟಿಪಿಸಿಆರ್ ಸೇರಿದಂತೆ ಒಟ್ಟು 1,33,737 ಕೊರೊನಾ ಪರೀಕ್ಷೆ ಮಾಡಲಾಗಿದೆ. ಇಂದು ರಾಜ್ಯದಲ್ಲಿ ಒಟ್ಟು 57,773 ಮಂದಿಗೆ ಲಸಿಕೆ ನೀಡಲಾಗಿದೆ.
ಇಂದಿನ 16/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/AbvwnPAeOl @mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @BangaloreBuzz @RCBTweets @NammaKarnataka_ pic.twitter.com/b8qj8d25nz
— K’taka Health Dept (@DHFWKA) April 16, 2021
ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 71, ಬಳ್ಳಾರಿ 279, ಬೆಳಗಾವಿ 120, ಬೆಂಗಳೂರು ಗ್ರಾಮಾಂತರ 358, ಬೆಂಗಳೂರು ನಗರ 9,917, ಬೀದರ್ 326, ಚಾಮರಾಜನಗರ 68, ಚಿಕ್ಕಬಳ್ಳಾಪುರ 180, ಚಿಕ್ಕಮಗಳೂರು 73, ಚಿತ್ರದುರ್ಗ 57, ದಕ್ಷಿಣ ಕನ್ನಡ 256, ದಾವಣಗೆರೆ 85, ಧಾರವಾಡ 176, ಗದಗ 34, ಹಾಸನ 244, ಹಾವೇರಿ 35, ಕಲಬುರಗಿ 488, ಕೊಡಗು 33, ಕೋಲಾರ 109, ಕೊಪ್ಪಳ 158, ಮಂಡ್ಯ 137, ಮೈಸೂರು 415, ರಾಯಚೂರು 108, ರಾಮನಗರ 100, ಶಿವಮೊಗ್ಗ 67, ತುಮಕೂರು 432, ಉಡುಪಿ 101, ಉತ್ತರ ಕನ್ನಡ 72, ವಿಜಯಪುರ 207 ಹಾಗೂ ಯಾದಗಿರಿಯಲ್ಲಿ 153 ಪ್ರಕರಣಗಳು ವರದಿಯಾಗಿವೆ.
ಬೆಂಗಳೂರು ನಗರ 181, ಕಲಬುರಗಿ 81, ಕೋಲಾರ 43, ಮೈಸೂರು 31, ಧಾರವಾಡ 25, ಬೀದರ್ 23 ಹಾಗೂ ತುಮಕೂರಿನಲ್ಲಿ 21 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.