ದಸರಾಗೆ ಯುವರತ್ನ ತಂಡದಿಂದ ಗಿಫ್ಟ್

Public TV
3 Min Read

ಬೆಂಗಳೂರು: ದಸರಾ ಹಬ್ಬದ ಖಷಿಯನ್ನು ಯುವರತ್ನ ಚಿತ್ರತಂಡ ಇಮ್ಮಡಿಗೊಳಿಸಿದ್ದು, ನಟ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳಿಗೆ ಉಡುಗೊರೆ ನೀಡಿದೆ.

ತುಂಬಾ ದಿನಗಳ ಬಳಿಕ ಯುವರತ್ನ ಸಿನಿಮಾದ ಕುರಿತು ಅಪ್‍ಡೇಟ್ ಲಭ್ಯವಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದ್ದು, ಪುನೀತ್ ರಾಜ್‍ಕುಮಾರ್ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಗಡ್ಡ ಧಾರಿಯಾಗಿ ಸರಪಳಿಗಳ ಮಧ್ಯೆ ಅಪ್ಪು ನಿಂತಿದ್ದು, ಮಾಸ್ ಲುಕ್ ನೀಡಿದ್ದಾರೆ. ಇದರಿಂದಾಗಿ ಸಿನಿಮಾ ಕುರಿತು ಅಭಿಮಾನಿಗಳ ನಿರೀಕ್ಷೆ ಇನ್ನೂ ಹೆಚ್ಚಿದೆ.

ಇತ್ತೀಚೆಗಷ್ಟೇ ಚಿತ್ರತಂಡ ಪುನೀತ್ ರಾಜ್‍ಕುಮಾರ್ ಅವರ ಬಿಯರ್ಡ್ ಲುಕ್ ವೈರಲ್ ಆಗಿತ್ತು. ಇದು ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿತ್ತು. ಇದನ್ನರಿತ ಚಿತ್ರತಂಡ ಇದೀಗ ಇದೀಗ ಗಡ್ಡಧಾರಿಯಾಗಿ ನಿಂತಿರುವ ಯುವರತ್ನನ ರಗಡ್ ಲುಕ್ ಪೋಸ್ಟರ್ ನ್ನೇ ಬಿಡುಗಡೆ ಮಾಡಿದ್ದಾರೆ. ಇದೀಗ ಇದನ್ನೂ ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ಪೋಸ್ಟರ್ ವೈರಲ್ ಆಗಿದೆ.

ದಸರಾ ಪೋಸ್ಟರ್ ಬಿಡುಗಡೆ ಕುರಿತು ಚಿತ್ರದ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಅವರು ಶುಕ್ರವಾರವೇ ತಿಳಿಸಿದ್ದರು. ಅದರಂತೆ ಪೋಸ್ಟರ್ ಬಿಡುಗಡೆಯಾಗಿದ್ದು, ಇದನ್ನು ಸಂತೋಷ್ ಆನಂದ್‍ರಾಮ್ ಹಂಚಿಕೊಂಡಿದ್ದಾರೆ. ಪವರ್ ರೀಡಿಫೈನ್‍ಡ್ ಸಮಸ್ತ ಕನ್ನಡ ಕುಲಕೋಟಿಗೆ ಆಯುಧ ಪೂಜೆ ಹಾಗೂ ವಿಜಯದಶಮಿಯ ಶುಭಾಶಯಗಳು ತಾಯಿ ಚಾಮುಂಡೇಶ್ವರಿ ಸದಾ ನಮ್ಮನ್ನು ಕಾಯಲಿ, ಮುನ್ನಡೆಸಲಿ ಎಂದು ಬರೆದು ಪೋಸ್ಟರ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ ಮಾಡುತ್ತಿದ್ದಂತೆ ಪೋಸ್ಟರ್ ವೈರಲ್ ಆಗಿದೆ.

ಯುವರತ್ನ ಚಿತ್ರೀಕರಣ ಸಂಪೂರ್ಣವಾಗಿ ಪೂರ್ಣಗೊಂಡಿದ್ದು, ಸಂತೋಷ್ ಆನಂದ್‍ರಾಮ್ ಅವರೇ ಈ ಹಿಂದೆ ಖಚಿತಪಡಿಸಿದ್ದರು. ಯುವರತ್ನ ಚಿತ್ರೀಕರಣ ಮುಕ್ತಾಯವಾಯಿತು. ನನ್ನ ಬೆನ್ನುತಟ್ಟಿ ಸಿನಿಮಾವನ್ನು ಯಶಸ್ವಿ ಆಗಿ ಮುಗಿಸಿಕೊಟ್ಟ ಪುನೀತ್ ಸರ್ ಗೆ,ವಿಜಯ್ ಸರ್ ಗೆ, ವೆಂಕಟ್ ಸರ್ ಗೆ, ಶಿವು ಸರ್ ಗೆ ನನ್ನ ಡೈರೆಕ್ಷನ್ ಟೀಮ್‍ಗೆ ಹಾಗೂ ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯಪೂರ್ವಕ ಧನ್ಯವಾದಗಳು ನನ್ನ ತಂಡ ನನ್ನ ಶಕ್ತಿ ಎಂದು ಬರೆದುಕೊಂಡಿದ್ದರು.

ಇತರ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಬೇಕು ಎಂಬ ಅಭಿಮಾನಿಗಳ ಒತ್ತಾಯದ ಕುರಿತು ಸಹ ಆನಂದ್‍ರಾಮ್ ಈ ಹಿಂದೆ ಟ್ವೀಟ್ ಮಾಡಿ, ಇತರ ಭಾಷೆಗಳಲ್ಲೂ ಯುವರತ್ನ ಸಿನಿಮಾ ಬಿಡುಗಡೆ ಮಾಡಬೇಕು ಎಂದು ಹೆಚ್ಚು ಜನ ಕೇಳುತ್ತಿದ್ದು, ಶೀಘ್ರವೇ ನಿರ್ಮಾಪಕರು ಈ ಬಗ್ಗೆ ಅಪ್‍ಡೇಟ್ ನೀಡುತ್ತಾರೆ. ಪಬ್ಲಿಸಿಟಿ ಓಪನ್ ಆಗುತ್ತಿದ್ದಂತೆ ಎಲ್ಲ ಮಾಹಿತಿ ರಿವೀಲ್ ಆಗಲಿದೆ. ಸಿನಿಮಾ ಭರ್ಜರಿಯಾಗಿಯೇ ಬಿಡುಗಡೆಯಾಗಲಿದೆ ಎಂಬುದರ ಕುರಿತು ನಾನು ಭರವಸೆ ನಿಡುತ್ತೇನೆ ಎಂದಿದ್ದಾರೆ.

ಕೊರೊನಾ ಭೀತಿ ಎದುರಾಗದಿದ್ದಲ್ಲಿ ಏಪ್ರಿಲ್ 3ಕ್ಕೆ ಯುವರತ್ನ ಸಿನಿಮಾ ಬಿಡುಗಡೆಯಾಗುತ್ತಿತ್ತು. ಸಿನಿಮಾ ಬಿಡುಗಡೆ ಕುರಿತು ನಿರ್ದೇಶಕ ಸಂತೋಷ್ ಆನಂದರಾಮ್ ಅವರು ಈ ಹಿಂದೆ ಸ್ಪಷ್ಟನೆ ನೀಡಿದ್ದರು. ಬಹುನಿರೀಕ್ಷಿತ ಯುವರತ್ನ ಸಿನಿಮಾ ಮೇ 21ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ನಮ್ಮ ಪವರ್ ಸ್ಟಾರ್ ಸ್ವಾಗತಿಸಲು ಸಜ್ಜಾಗಿ ಎಂದು ಟ್ವೀಟ್ ಮಾಡಿದ್ದರು. ಆದರೆ ಮತ್ತೆ ಲಾಕ್‍ಡೌನ್ ಆದ ಪರಿಣಾಮ ಮುಂದೂಡಲಾಗಿದ್ದು, ಇನ್ನೂ ರಿಲೀಸ್ ದಿನಾಂಕವನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *