ದಲಿತರು ಮಾತ್ರವಲ್ಲ, ಡಿಕೆಶಿಯವರನ್ನೂ ಮುಗಿಸುವ ಷಡ್ಯಂತ್ರ ಕಾಂಗ್ರೆಸ್‍ನಲ್ಲಿ ನಡೆದಿದೆ: ಕಟೀಲ್

Public TV
1 Min Read

ಚಿತ್ರದುರ್ಗ: ಕಾಂಗ್ರೆಸ್‍ನಲ್ಲಿ ದಲಿತರು ಮಾತ್ರವಲ್ಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ಮುಗಿಸುವ ಷಡ್ಯಂತ್ರ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ನಗರದಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ನಾವು ಅಧಿಕಾರಕ್ಕೆ ಬರಲಿದ್ದೇವೆಂಬ ಕನಸನ್ನು ಸಿದ್ದರಾಮಯ್ಯ ಕಾಣುತಿದ್ದಾರೆ. ಆದರೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯ ಹಾಗೂ ಬಿಜೆಪಿ ಚಿಂತನೆಗೆ ಯಶಸ್ಸು ಸಿಗಲಿದೆ. ಆದ್ದರಿಂದ ಸಿದ್ದರಾಮಯ್ಯನವರು ಸಿಎಂ ಆಗುವ ಕನಸನ್ನು ಬಿಡಲಿ ಎಂದರು.

ಮುಂದಿನ ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್ ನಲ್ಲಿ ಈಗಾಗಲೇ ಡಿಕೆಶಿ ಮುಗಿಸುವ ತಂತ್ರವನ್ನು ಸಿದ್ದರಾಮಯ್ಯ ಆರಂಭಿಸಿದ್ದು, ಅದನ್ನು ಮೊದಲು ನಿಲ್ಲಿಸಲಿ. ನತಂರ ಪಕ್ಷವನ್ನು ಅಧಿಕಾರಕ್ಕೆ ತರುವ ಕನಸು ಕಾಣಲಿ ಎಂದರು.

ಸಿದ್ದರಾಮಯ್ಯನವರಿಗೆ ಕಟೀಲ್ ಸವಾಲು
ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಬಾದಾಮಿ ಕ್ಷೇತ್ರಕ್ಕೆ ಬಂದರು. ಈಗ ಬಾದಾಮಿ ಕ್ಷೇತ್ರ ಬಿಡುವ ಹಂತದಲ್ಲಿದ್ದಾರೆ. ಅಲ್ಲದೆ ಡಿಕೆಶಿ ಹಾಗೂ ಸಿದ್ದರಾಮಯ್ಯರಿಂದ ಸಿಎಂ ಸ್ಥಾನಕ್ಕಾಗಿ ಭಾರೀ ಹೋರಾಟ ನಡೆಯುತ್ತಿದೆ. ಇವರಿಗೆ ದಲಿತರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಮುಂದಿನ ಸಿಎಂ ಮಲ್ಲಿಕಾರ್ಜುನ್ ಖರ್ಗೆ ಎಂದು ಘೋಷಿಸಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು.

ಕಾಂಗ್ರೆಸ್ ಸೇರಿದಾಕ್ಷಣ ಸಿದ್ದರಾಮಯ್ಯ ಸಿಎಂ ಆದರು, ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಇತಿಹಾಸ ತಿಳಿಯಲು ಪುರಸೊತ್ತಿಲ್ಲ. ಅವರೆಲ್ಲ ಜೆಡಿಎಸ್‍ನ ಪಾಠ ಓದಿದವರು ಕಾಂಗ್ರೆಸ್ ಸೇರಿದಾಕ್ಷಣ ಸಿಎಂ ಆದರು. ಸಿದ್ದರಾಮಯ್ಯನವರು ನನಗೆ ಒಳ್ಳೆಯವರು, ಶ್ರೇಷ್ಠ ನಾಯಕರು. ಆದರೆ ಮಾಧ್ಯಮಗಳಲ್ಲಿ ಬಂದ ವರದಿ ಹೇಳುತ್ತೇನೆ, ಸಿದ್ದರಾಮಯ್ಯ ಸ್ವಜಾತಿಯವರನ್ನು ಬಳಸಿಕೊಂಡು ಪರಮೇಶ್ವರ್ ಸೋಲಿಸಿದ್ದು, ಅವರ ಸಿಎಂ ಸ್ಥಾನಕ್ಕೆ ಪರಮೇಶ್ವರ್ ಅಡ್ಡಿಯಾಗುವ ಕಾರಣದಿಂದಾಗಿ ಸೋಲಿಸಿದರು. ಅಲ್ಲದೆ ಸಿದ್ದರಾಮಯ್ಯ ಅವರ ಶಿಷ್ಯ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಬಿದ್ದಿತ್ತು. ಈವರೆಗೆ ಅಖಂಡ ಶ್ರೀನಿವಾಸ್ ಅವರಿಗೆ ಕಾಂಗ್ರೆಸ್ ನ್ಯಾಯ ಕೊಟ್ಟಿಲ್ಲ. ಇಂತಹ ನಾಯಕರು ರಾಜ್ಯದ ಜನತೆಗೆ ಏನು ನ್ಯಾಯ ಕೊಡಿಸುತ್ತಾರೆಂದು ಕುಟುಕಿದರು.

Share This Article
Leave a Comment

Leave a Reply

Your email address will not be published. Required fields are marked *