ಬೆಂಗಳೂರು: ಅಂಗವಿಕಲ ಅಭಿಮಾನಿಯೊಬ್ಬ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರನ್ನು ಫಾಲೋ ಮಾಡಿದ್ದು, ಇದನ್ನು ಗಮನಿಸಿದ ಡಿ ಬಾಸ್ ಕಾರ್ ನಿಂದ ಇಳಿದು ಅಭಿಮಾನಿ ಜೊತೆ ಕೆಳಗೆ ಕುಳಿತು ಮಾತನಾಡುವ ಮೂಲಕ ಸೌಜನ್ಯ ತೋರಿದ್ದಾರೆ.
ಸಂಜೆ ಬೆಂಗಳೂರಿನಲ್ಲಿ ಘಟನೆ ನಡೆದಿದೆ. ಅಭಿಮಾನಿ ಆಟೋ ಚಾಲಕನಾಗಿದ್ದು, ಆಟೋ ಮೂಲಕ ಹಿಂಬಾಲಿಸುತ್ತಿದ್ದ. ಇದನ್ನು ಗಮನಿಸಿದ ದರ್ಶನ್ ತಕ್ಷಣವೇ ಕಾರ್ ನಿಲ್ಲಿಸಿ ಕೆಳಗಿಳಿದಿದ್ದು, ಅಭಿಮಾನಿ ಬಳಿ ಆಗಮಿಸಿ ಕೆಳಗೆ ಅವರ ಪಕ್ಕದಲ್ಲೇ ಕೂತು ಮಾತನಾಡಿಸಿದ್ದಾರೆ. ಅಲ್ಲದೆ ಆಟೋ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಅಭಿಮಾನಿ ಕೇಳಿದ್ದು, ಬಾ ಚಿನ್ನ ಎಂದು ಪ್ರೀತಿಯಿಂದ ಮಾತನಾಡಿಸುತ್ತಲೇ ತಾವೇ ಸೆಲ್ಫಿ ಕ್ಲಿಕ್ಕಿಸಿದ್ದಾರೆ.
ಕಾಲು ಸರಿ ಇಲ್ಲ ಹೇಗೆ ಆಟೋ ಓಡಿಸುತ್ತಿಯಾ ಚಿನ್ನ ಎಂದು ದರ್ಶನ್ ಪ್ರಶ್ನಿಸಿದ್ದು, ಆಗ ಅಭಿಮಾನಿ ಒಂದು ಕಾಲು ಸರಿ ಇದೆ ಸಾರ್ ಎಂದು ಹೇಳಿದ್ದಾರೆ. ಇಬ್ಬರ ಮಾತುಕತೆ ವೀಡಿಯೋ ಇದೀಗ ವೈರಲ್ ಆಗಿದೆ.
https://www.youtube.com/watch?v=EKp9rl-ihrY