ದಟ್ಟಕಾನನದ ನಡುವೆ ಕಿಚ್ಚನ ‘ಫ್ಯಾಂಟಮ್’

Public TV
1 Min Read

ಬೆಂಗಳೂರು: ದಟ್ಟ ಕಾನನನದ ನಡುವೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫ್ಯಾಂಟನ್ ನಿರ್ಮಾಣವಾಗುತ್ತಿದೆ. ಈ ದಟ್ಟ ಕಾನನಕ್ಕಾಗಿ ಫ್ಯಾಂಟಮ್ ಅಖಾಡದಲ್ಲಿ ರಾಜಮಂಡ್ರಿಯಿಂದ ಗಿಡ-ಮರಗಳನ್ನು ತುಂಬಿಕೊಂಡ 22 ಲಾರಿಗಳು ಆಗಮಿಸಿವೆ.

ಫ್ಯಾಂಟಮ್ ನಿರ್ಮಾಪಕರು ಸುಮಾರು 30 ರಿಂದ 40 ಲಕ್ಷ ಬಂಡವಾಳ ಹಾಕಿ ಈ ಗಿಡಮರಗಳನ್ನು ಖರೀದಿಸಿದ್ದಾರಂತೆ. ಲಾಕ್‍ಡೌನ್ ಮುನ್ನ ಈ ಗಿಡಗಳನ್ನು ತರಿಸಲಾಗಿತ್ತು. ಶೇಕಡ 70ರಷ್ಟು ಸೆಟ್ ವರ್ಕ್ ಕೂಡ ನಡೆದಿತ್ತು. ಈ ನಡುವೆ ಲಾಕ್‍ಡೌನ್ ಆಗಿದ್ರಿಂದ ಶೂಟಿಂಗ್ ಕ್ಯಾನ್ಸಲ್ ಆಯ್ತು. ಹಾಗಾಗಿ ಸೆಟ್ ನಲ್ಲಿ ಗಿಡಗಳಿಗೆ ಬಿಸಿಲು ತಾಗದಂತೆ ಚಿತ್ರತಂಡ ನೆರಳಿನ ವ್ಯವಸ್ಥೆಯನ್ನು ಸಹ ಮಾಡಿದೆ. ಇದೀಗ ಚಿತ್ರೀಕರಣಕ್ಕೆ ಆಂಧ್ರ-ತೆಲಂಗಾಣ ಸರ್ಕಾರ ಅನುಮತಿ ನೀಡಿದ್ದು, ‘ಫ್ಯಾಂಟಮ್’ ಅಂಗಳದಲ್ಲಿ ಸೆಟ್ ವರ್ಕ್ ಕೆಲಸ ಭರದಿಂದ ಸಾಗುತ್ತಿದೆ.

ಹೈದ್ರಾಬಾದ್‍ನ ಅನ್ನಪೂರ್ಣೇಶ್ವರಿ ಸ್ಟುಡಿಯೋದಲ್ಲಿ ಸೆಟ್‍ವರ್ಕ್ ಕೆಲಸದಲ್ಲಿ ನಿರತವಾಗಿದೆ. ಸೆಟ್‍ನಲ್ಲಿ ವೈದ್ಯಕೀಯ ತಂಡವನ್ನು ನಿಯೋಜನೆ ಮಾಡಲಾಗಿದ್ದು, ಸಿನಿಕಾರ್ಮಿಕರ ಬಗ್ಗೆ ಕಾಳಜಿ ವಹಿಸಲಾಗಿದೆ. ಸರ್ಕಾರದ ನೀತಿ-ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸೋದರ ಜೊತೆಗೆ ಸೆಟ್‍ನಲ್ಲಿ ವೈದ್ಯಕೀಯ ಸಿಬ್ಬಂದಿಯನ್ನು ಚಿತ್ರತಂಡ ನೇಮಕ ಮಾಡಿದೆ. ಸೆಟ್‍ಗೆ ಸಿನಿಕಾರ್ಮಿಕರನ್ನು ಬಿಡುವ ಮುನ್ನವೇ ಪ್ರತಿದಿನ ಪ್ರತಿಯೊಬ್ಬರನ್ನು ತಪಾಸಣೆ ಮಾಡಲಾಗುತ್ತಿದೆ.

ಫ್ಯಾಂಟಮ್’ ಕಿಚ್ಚ ಸುದೀಪ್ ಹಾಗೂ ರಂಗಿತರಂಗ ಸಾರಥಿ ಅನೂಪ್ ಭಂಡಾರಿ ಕಾಂಬಿನೇಷನ್‍ನಲ್ಲಿ ತಯಾರಾಗ್ತಿರೋ ಮೊದಲ ಸಿನಿಮಾ. ಸಿನಿಮಾ ಟೈಟಲ್ ಹಾಗೂ ಕಿಚ್ಚನ ವಿಕ್ರಾಂತ್ ರೋಣಾ ಪಾತ್ರ ಈಗಾಗಲೇ ಗಾಂಧಿನಗರದಲ್ಲಿ ಸುನಾಮಿ ಎಬ್ಬಿಸಿರುವ ಚಿತ್ರ. ಪೋಸ್ಟರ್‍ನಲ್ಲಿ ಕಿಚ್ಚನ ಅರ್ಧ ಫೇಸ್ ನೋಡಿ, ಮೊನಚು ಮೀಸೆ ಮೋಡಿಗೆ ಕಳೆದುಹೋಗಿರುವ ಫ್ಯಾನ್ಸ್, ‘ವಿಕ್ರಾಂತ್ ರೋಣ’ನ ಖಡಕ್ ಲುಕ್‍ನ ನೋಡೋದಕ್ಕೆ ಕಾಯುತ್ತಿದ್ದಾರೆ.

ಚಿತ್ರಕ್ಕಾಗಿ ನಿರ್ಮಾಪಕರಾದ ಜಾಕ್‍ಮಂಜು ಮತ್ತು ಶಾಲಿನಿ ಮಂಜುನಾಥ್ ಕೋಟಿಕೋಟಿ ಸುರಿಯೋದಕ್ಕೆ ರೆಡಿಯಾಗಿದ್ದಾರೆ. ರಾಜಮಂಡ್ರಿಯಿಂದ ಗಿಡಗಳನ್ನು ಇಂಪೋರ್ಟ್ ಮಾಡಿಕೊಂಡು ಹೈದ್ರಬಾದ್‍ನಲ್ಲಿ ಫಾರೆಸ್ಟ್ ಸೆಟ್ ನಿರ್ಮಿಸಲಾಗ್ತಿದೆ. ಇದಕ್ಕಾಗಿ ಕೋಟಿಗಟ್ಟಲೇ ಬಂಡವಾಳ ಸುರಿಯಲಾಗಿದ್ದು, ಕಣ್ಣಿಗೆ ಹಬ್ಬ ನೀಡುವ ಕಾಡಿನ ದೃಶ್ಯಾವಳಿಗಳು ಕ್ಯಾಮೆರಾದಲ್ಲಿ ಸೆರೆಯಾಗಲಿವೆ. ಫ್ಯಾಂಟಮ್ ಸಿನಿಮಾ ಮೂಲಕ ಬೆಳ್ಳಿತೆರೆ ಬೆಳಗಲಿವೆ.

Share This Article
Leave a Comment

Leave a Reply

Your email address will not be published. Required fields are marked *