ಮಂಗಳೂರು: ಕರ್ನಾಟಕದ ಪೊಲೀಸರಿಗೆ ಕೊರೊನಾ ಆತಂಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ಪೊಲೀಸರಿಗೆ ಕ್ವಾರಂಟೈನ್‍ಗೆ ಸೂಚನೆ ನೀಡಲಾಗಿದೆ.
ಪುತ್ತೂರು ಠಾಣೆಯ ನಾಲ್ವರು ಪೊಲೀಸರು, ಮಹಿಳಾ ಠಾಣೆಯ ಇಬ್ಬರು ಪೊಲೀಸರಿಗೆ ಕ್ವಾರಂಟೈನ್‍ಗೆ ಸೂಚಿಸಲಾಗಿದೆ. ಅಲ್ಲದೆ ಇಬ್ಬರು ಟ್ರಾಫಿಕ್ ಪೊಲೀಸರನ್ನೂ ಹೋಂ ಕ್ವಾರಂಟೈನ್ ಮಾಡಲಾಗಿದೆ. ಜ್ವರದ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಕ್ವಾರಂಟೈನ್‍ಗೆ ಆದೇಶ ನೀಡಲಾಗಿದೆ. ಈ ಪೊಲೀಸರು ಪುತ್ತೂರು ಗಡಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಈಗಾಗಲೇ ಕರ್ನಾಟಕದಲ್ಲಿ ಈ ತಿಂಗಳಲ್ಲಿ 9 ಮಂದಿ ಪೊಲೀಸರಿಗೆ ಕೊರೊನಾ ಸೋಂಕು ಹಬ್ಬಿದೆ. ಉಡುಪಿ ಜಿಲ್ಲೆಯಲ್ಲಿ ಇಬ್ಬರು ಕಾನ್ಸ್ ಸ್ಟೇಬಲ್‍ಗಳು ಮತ್ತು ಓರ್ವ ಎಎಸ್‍ಐ, ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಸಿಎಆರ್ ಕಾನ್ಸ್ ಸ್ಟೇಬಲ್ ನಲ್ಲಿ ಕೊರೊನಾ ಸೋಂಕು ಪತ್ತೆ ಆಗಿತ್ತು.
ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯಲ್ಲಿ ಇಬ್ಬರು ಪೊಲೀಸರು, ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಪೊಲೀಸ್‍ಗೆ ಮತ್ತು ಬೆಂಗಳೂರಲ್ಲಿ ಕರ್ತವ್ಯ ನಿರ್ವಹಿಸ್ತಿದ್ದ ಹಾಸನ ಮೂಲದ ಪೊಲೀಸ್‍ಗೆ ಕೊರೊನಾ ಸೋಂಕು ಹಬ್ಬಿದ್ದು ಆತಂಕಕ್ಕೀಡುಮಾಡಿದೆ.