ತೋತಾಪುರಿ ಸವಿಯಲು ಸಿದ್ಧರಾಗಿ: ಜಗ್ಗೇಶ್

Public TV
1 Min Read

ಬೆಂಗಳೂರು: ಬಹುನಿರೀಕ್ಷಿತ ಸಿನಿಮಾ ತೋತಾಪುರಿ ತೆರೆಮೇಲೆ ಬರಲು ಸಿದ್ಧವಾಗಿದೆ ಎನ್ನುವ ವಿಚಾರವನ್ನು ಸ್ಯಾಂಡಲ್‍ವುಡ್ ನಟ ಜಗ್ಗೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಲಾಕ್‍ಡೌನ್ ತೆರವುಗೊಂಡ ನಂತರ ಅಂದರೆ ಈಗ ಈ ಸಿನಿಮಾದ ಡಬ್ಬಿಂಗ್ ಮತ್ತೆ ಆರಂಭವಾಗಿದೆ. ತೋತಾಪುರಿ ಸಿನಿಮಾ ಅತಿಶೀಘ್ರದಲ್ಲಿ ನಿಮ್ಮ ಮುಂದೆ ಬರಲು ಸಿದ್ಧತೆ ನಡೆದಿದೆ. ನೀರ್ ದೋಸೆ ನಿರ್ದೇಶಕ ವಿಜಯ್ ಜೊತೆ ಎರಡನೇ ಚಿತ್ರಪಯಣ ನಗುವಿನ ರಸದೌತಣ ಎಂದು ಜಗ್ಗೇಶ್ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

ಚಿತ್ರದ ಚಿತ್ರೀಕರಣದ ಕೆಲವು ಫೋಟೋಗಳನ್ನು ನೋಡುತ್ತಿದ್ದರೆ ತೋತಾಪುರಿ ಅಂತರ್ ಧರ್ಮೀಯ ಪ್ರೇಮ ಕತೆ ಇರಬಹುದಾ ಎಂಬ ಅನುಮಾನ ಮೂಡಿಸುತ್ತದೆ. ಯಾಕೆಂದರೆ, ನಾಯಕ ಜಗ್ಗೇಶ್ ಹಣೆಗೆ ಕುಂಕುಮ ಇಟ್ಟುಕೊಂಡಿದ್ದರೆ, ನಾಯಕಿ ಅದಿತಿ ಬುರ್ಖಾ ಧರಿಸಿ ಮುಸ್ಲಿಂ ಹುಡುಗಿಯಾಗಿ ಹಾಗೂ ಸುಮನ್ ರಂಗನಾಥ್ ಕ್ರೈಸ್ತ ಸಿಸ್ಟರ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರ ತೆರೆಯ ಮೇಲೆ ಬಂದರೆ ಚಿತ್ರದ ಕಥಾಹಂದರವೇನು ಎಂಬುದನ್ನು ತಿಳಿಯ ಬಹುದಾಗಿದೆ.

ನೀರ್ ದೋಸೆ ಚಿತ್ರದ ಬಳಿಕ ನಿರ್ದೇಶಕ ವಿಜಯ ಪ್ರಸಾದ್ ತೋತಾಪುರಿ ಸಿನಿಮಾ ಮೂಲಕವಾಗಿ ಮತ್ತೊಮ್ಮೆ ನವರಸನಾಯಕನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾದಲ್ಲಿ ಧನಂಜಯ್, ಅಧಿತಿ ಪ್ರಭುದೇವ, ಸುಮನ್ ರಂಗನಾಥ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ಸಿನಿಮಾ ಇನ್ನೇನು ತೆರೆಗಪ್ಪಳಿಸಲಿದೆ. ಈ ಕುರಿತಾಗಿಯೇ ಸಿಹಿ ಸುದ್ದಿ ಕೊಟ್ಟಿದ್ದಾರೆ ನವರಸ ನಾಯಕ ಜಗ್ಗೇಶ್ ನೀಡಿದ್ದಾರೆ.

ವಿಶೇಷ ಅಂದರೆ ಡಾಲಿ ಧನಂಜಯ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ವಿಜಯ ಪ್ರಸಾದ್ ನಿರ್ದೇಶಿಸಿದ್ದ ಸಿದ್ಲಿಂಗು ಹಾಗೂ ನೀರ್ ದೋಸೆ ಚಿತ್ರಗಳನ್ನು ನೋಡಿ ಇಷ್ಟಪಟ್ಟಿದ್ದ ಧನಂಜಯ, ನವರಸ ನಾಯಕ ಜಗ್ಗೇಶ್ ಅವರ ಜತೆ ನಟಿಸುವ ಅವಕಾಶ ಸಿಕ್ಕಿದ್ದೇ ಸಂಭ್ರಮಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *