ತೆಲಂಗಾಣ, ಮುಂಬೈನಿಂದ ಧಾರವಾಡಕ್ಕೆ ಬಂದಿರೋ ಪಾಸಿಟಿವ್ ಪ್ರಕರಣಗಳ ಟ್ರಾವೆಲ್ ಹಿಸ್ಟರಿ

Public TV
1 Min Read

ಧಾರವಾಡ: ಹೊರ ರಾಜ್ಯಗಳಿಂದ ಧಾರವಾಡ ಜಿಲ್ಲೆಗೆ ಆಗಮಿಸಿದ ಐವರಲ್ಲಿ ಕೊರೊನಾ ಸೋಂಕು ಇರುವುದು ಇಂದು ದೃಢಪಟ್ಟಿದ್ದು, ಅವರನ್ನು ರೋಗಿ ಸಂಖ್ಯೆ-1505, ರೋಗಿ ಸಂಖ್ಯೆ-1506, ರೋಗಿ ಸಂಖ್ಯೆ-1507, ರೋಗಿ ಸಂಖ್ಯೆ-1508 ಹಾಗೂ ರೋಗಿ ಸಂಖ್ಯೆ-1509 ಎಂದು ಗುರುತಿಸಲಾಗಿದೆ. ಈ ಐದು ಜನರ ಪ್ರಯಾಣದ ವಿವರವನ್ನು ಜಿಲ್ಲಾಡಳಿತ ಪ್ರಕಟಿಸಿದೆ.

ರೋಗಿ ಸಂಖ್ಯೆ-1505 ಹಾಗೂ ರೋಗಿ ಸಂಖ್ಯೆ-1506 ಸಂಖ್ಯೆ ರೋಗಿಗಳು ಹುಬ್ಬಳ್ಳಿ ಶಹರದ ಹಳೆ ಹುಬ್ಬಳ್ಳಿಯ ನಿವಾಸಿಗಳಾಗಿದ್ದಾರೆ. ಇವರು ಕಳೆದ ಮಾರ್ಚ್‍ನಲ್ಲಿ ಹುಬ್ಬಳ್ಳಿಯಿಂದ ವಿಜಯವಾಡ ರೈಲು ಮೂಲಕ ಕರ್ನೂಲ್‍ನಲ್ಲಿಯ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ್ದರು. ಬಳಿಕ ಮೇ 17ರ ಸಂಜೆ 5 ಗಂಟೆಗೆ ಕುಟುಂಬದ ಒಟ್ಟು 4 ಜನ ಸದಸ್ಯರು ಸ್ಥಳೀಯ ಆಟೋ ಮೂಲಕ ಕರ್ನೂಲ್‍ನಲ್ಲಿಯ ತಮ್ಮ ಸಂಬಂಧಿಕರ ಮನೆಯಿಂದ ಹೊರಟು ಸಂಜೆ 06.30ಕ್ಕೆ ಅಲ್ಲಪೂರಂ ಚೌರಾಷ್ಟ್ರ ತಲುಪಿ ಅಲ್ಲಿಂದ ಬಾಡಿಗೆ ಕಾರಿನ ಮೂಲಕ ರಾಯಚೂರು, ಮಾನ್ವಿ, ಗಂಗಾವತಿ ಮಾರ್ಗವಾಗಿ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಚೆಕ್ ಪೋಸ್ಟ್ ನಲ್ಲಿ ದಾಟಿ ಹುಬ್ಬಳ್ಳಿ ತಲುಪಿದ್ದರು. ಹುಬ್ಬಳ್ಳಿಗೆ ಆಗಮಿಸಿದ ಕುಟುಂಬ ಸದಸ್ಯರ ಎಲ್ಲಾ ಸದಸ್ಯರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಇದರಲ್ಲಿ ರೋಗಿ ಸಂಖ್ಯೆ-1505 ಹಾಗೂ ರೋಗಿ ಸಂಖ್ಯೆ-1506 ಇವರು ಕೋವಿಡ್-19 ಸೋಂಕಿತರೆಂದು ದೃಢಪಟ್ಟಿದೆ.

ರೋಗಿ ಸಂಖ್ಯೆ-1507, ರೋಗಿ ಸಂಖ್ಯೆ-1508 ಹಾಗೂ ರೋಗಿ ಸಂಖ್ಯೆ-1509 ಇವರು ಮಹಾರಾಷ್ಟ್ರದ ಮುಂಬೈನ ಶಹರದ ಶಿವಾಜಿ ನಗರದ ನಿವಾಸಿಗಳಾಗಿರುತ್ತಾರೆ. ಮೇ 16ರಂದು ಬಾಡಿಗೆ ಇನ್ನೊವಾದಲ್ಲಿ ಕುಟುಂಬದ 11 ಜನ ಸದಸ್ಯರು ಮುಂಬೈಯಿಂದ ಹೊರಟು ಮೇ 18ರಂದು ಮುಂಜಾನೆ 5 ಗಂಟೆಗೆ ಧಾರವಾಡ ತಲುಪಿದ್ದಾರೆ. ಅದೇ ದಿನ ಕುಟುಂಬದ ಎಲ್ಲಾ 11 ಜನರನ್ನು ಗಂಟಲು ದ್ರವ ಪರೀಕ್ಷೆಗೊಳಪಡಿಸಿ ಕ್ವಾರಂಟೈನ್ ಮಾಡಲಾಗಿತ್ತು. ಸದ್ಯ ಇವರ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವುದರಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *