ತಾಳಿ ಕಟ್ಟೋ ಕೊನೆ ಕ್ಷಣದಲ್ಲಿ ಮದ್ವೆ ಬೇಡ ಎಂದ ವಧು- ಸಿನಿಮಾ ಸ್ಟೈಲ್‍ನಲ್ಲಿ ಯುವತಿಯ ಡೈಲಾಗ್

By
1 Min Read

ಚೆನ್ನೈ: ಹಸೆಮಣೆ ಮೇಲೆ ಕುಳಿತ್ತಿದ್ದ ವರ ಇನ್ನೇನು ಕೆಲವೇ ಕ್ಷಣಗಳಲ್ಲಿ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಎಲ್ಲರಿಗೂ ಶಾಕ್ ನೀಡಿದ್ದ ವಧು, ತನಗೆ ಈ ಮದುವೆ ಬೇಡ ಎಂದು ಸಿನಿಮಾ ಸ್ಟ್ರೈಲ್ ಡೈಲಾಗ್ ಹೊಡೆದು ಮದುವೆ ನಿಲ್ಲಿಸಿರುವ ಘಟನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

ನೀಲಗಿರಿ ಜಿಲ್ಲೆಯ ಉದಗ ಗ್ರಾಮದಲ್ಲಿ ಘಟನೆ ನಡೆದಿದ್ದು, ತಾನು ಪ್ರೀತಿಸಿದ್ದ ಯುವಕನನ್ನೇ ಮದುವೆಯಾಗಲು ಯುವತಿ ಅಂತಿಮ ಕ್ಷಣದಲ್ಲಿ ಮದುವೆಗೆ ಬ್ರೇಕ್ ಹಾಕಿ ಕುಟುಂಬಸ್ಥರಿಗೆ ಶಾಕ್ ನೀಡಿದ್ದಳು.

ತಾನು ಪ್ರೀತಿಸಿದ ಯುವಕ ಅರ್ಧ ಗಂಟೆಯಲ್ಲಿ ಮದುವೆ ಮನೆಗೆ ಬರುತ್ತಾನೆ. ತಾನು ಅವನನ್ನೇ ಮದುವೆಯಾಗುವುದಾಗಿ ಹೇಳಿ ಯುವತಿ ತಾಳಿ ಕಟ್ಟಲು ಬಂದ ವರನನ್ನು ತಡೆದಿದ್ದಳು. ಇತ್ತ ಕುಟುಂಬಸ್ಥರು ನೋಡಿ ನಿರ್ಧಾರ ಮಾಡಿದ್ದ ಯುವತಿಯನ್ನು ಮದುವೆಯಾಗಿ ಹೊಸ ಜೀವನವನ್ನು ಆರಂಭಿಸಲು ಕನಸು ಕಂಡಿದ್ದ ಯುವಕ ಕ್ಷಣ ಕಾಲ ಏನಾಗುತ್ತಿದೆ ಎಂದು ತಿಳಿಯದೆ ಸುಮ್ಮನೆ ಕುಳಿತ್ತಿದ್ದ.

ಯುವತಿ ಮದುವೆ ನಿರಾಕರಿಸುತ್ತಿದಂತೆ ಆಕ್ರೋಶಗೊಂಡ ಕುಟುಂಬಸ್ಥರು ಆಕೆಗೆ ಬುದ್ಧಿ ಮಾತು ಹೇಳಿ ಮದುವೆ ಮಾಡಿಕೊಳ್ಳುವಂತೆ ತಿಳಿ ಹೇಳುವ ಕೆಲಸ ಮಾಡಿದ್ದರು. ಆದರೂ ಆಕೆ ಒಪ್ಪಿಕೊಳ್ಳದ ಕಾರಣ ಪ್ರೀತಿಯ ವಿಚಾರವನ್ನು ಮೊದಲೇ ಏಕೆ ಹೇಳಿಲ್ಲ ಎಂದು ಗರಂ ಆಗಿ ಯುವತಿಯ ಮೇಲೆ ಕೈ ಮಾಡುವುದಕ್ಕೂ ಮುಂದಾದರು. ಆದರೆ ಈ ವೇಳೆ ಮಧ್ಯ ಪ್ರವೇಶಿಸಿದ ಸಂಬಂಧಿಗಳು ಕುಟುಂಬಸ್ಥರನ್ನು ತಡೆದು ನಿಲ್ಲಿಸಿದ್ದರು.

ಇದನ್ನೆಲ್ಲಾ ನೋಡುತ್ತಾ ಕುಳಿತ್ತಿದ್ದ ಯುವಕ ನಿರಾಸೆಯಿಂದ ಹಸೆಮಣೆಯಿಂದ ಎದ್ದು ಮದುವೆ ಮಂಟಪದಿಂದ ಹೊಸ ನಡೆದಿದ್ದ. ಆದರೆ ಯುವತಿಯನ್ನು ಪ್ರೀತಿಸಿದ್ದ ಯುವಕ ಮದುವೆ ನಿಂತು ಒಂದು ಗಂಟೆಯಾದರೂ ಮಂಟಪಕ್ಕೆ ಆಗಮಿಸಲಿಲ್ಲ. ಇದರಿಂದ ಮತ್ತಷ್ಟು ಕೋಪಗೊಂಡ ಯುವತಿಯ ಪೋಷಕರು ಆಕೆಯನ್ನು ಮದುವೆ ಮಂಟಪದಲ್ಲೇ ಬಿಟ್ಟು ವಾಪಸ್ ತೆರಳಿದ್ದರು. ಮದುವೆಯಲ್ಲಿ ನಡೆದ ಎಲ್ಲಾ ಹೈಡ್ರಾಮಾ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *