ತಂದೆಯನ್ನು ಮರಕ್ಕೆ ಕಟ್ಟಿ ಚಾಕುವಿನಿಂದ ಇರಿದು ಹತ್ಯೆಗೈದ ಮಗ

Public TV
1 Min Read

-ಪತಿಯ ಕೃತ್ಯಕ್ಕೆ ಪತ್ನಿ ಸಾಥ್

ಲಖನೌ: ಅಪ್ಪನನ್ನು ಮರಕ್ಕೆ ಕಟ್ಟಿ ಮಗ ಮತ್ತು ಸೊಸೆ ಬರ್ಬರಬವಾಗಿ ಹತ್ಯೆ ಮಾಡಿದ ಘಟನೆ ಉತ್ತರಪ್ರದೇಶದ ಬರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

ಮೃತ ದುರ್ದವೈವಿಯನ್ನು ಶ್ರೀರಾಮ್ ಗೌತಮ್(55) ಎಂದು ಗುರುತಿಸಲಾಗಿದೆ. ಆರೋಪಿ ಮನೋಜ್ ಪತ್ನಿ ಜೊತೆ ಸೇರಿ ತಂದೆಯನ್ನ ಕೊಲೆಗೈದಿದ್ದಾನೆ.

ಶ್ರೀರಾಮ್, ಮಗ ಮನೋಜ್ ಮತ್ತು ಆತನ ಹೆಂಡತಿ ಮೂವರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಶ್ರೀರಾಮ್ ಕಷ್ಟಪಟ್ಟು ಒಂದಿಷ್ಟು ಆಸ್ತಿಯನ್ನು ಮಾಡಿದ್ದನು. ಇವರ ಕುಟುಂಬದಲ್ಲಿ ಆಸ್ತಿ ವಿಚಾರಕ್ಕಾಗಿ ಆಗಾಗ ಜಗಳವಾಗುತ್ತಿತ್ತು. ಮನೋಜ್ ಆಸ್ತಿಯನ್ನು ತನ್ನ ಹೆಸರಿಗೆ ಬರೆಯುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಆದರೆ ಶ್ರೀರಾಮ್ ಇದಕ್ಕೆ ಒಪ್ಪುತ್ತಿರಲಿಲ್ಲ. ಇದೇ ವಿಷಯವಾಗಿ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು.

 

ಆಸ್ತಿ ವಿಷಯಕ್ಕೆ ಜಗಳ ಪ್ರಾರಂಭವಾಗಿದೆ. ಮಗ ಸಿಟ್ಟಿನಿಂದ ಅಪ್ಪನನ್ನು ಮನೆಯಿಂದ ಹೊರಗೆ ಎಳೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿದ್ದಾನೆ. ಅಪ್ಪ ಆಸ್ತಿಕೊಡಲು ಒಪ್ಪಿಲ್ಲ. ಆಗ ಮಗನು ಕೋಪದಿಂದ ಶ್ರೀರಾಮ್‍ನ ಕುತ್ತಿಗೆಗೆ ಚಾಕು ಇರಿದು ಕೊಲೆ ಮಾಡಿದ್ದಾನೆ. ನೆರೆಹೊರೆಯವರು ತಡೆಯಲು ಹೋದಾಗ ಅವರನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ.

ತಂದೆಯನ್ನು ಕೊಲೆ ಮಾಡಿದ ಮನೋಜ್ ಹೆಂಡತಿ ಜೊತೆ ಸ್ಥಳದಿಂದ ಪರಾರಿಯಾಗಿದ್ದನು. ಇತ್ತ ಪೊಲೀಸರು ಸ್ಥಳಕ್ಕೆ ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ. ಇತ್ತ ಎಸ್ಕೇಪ್ ಆಗಿದ್ದ ಮಗ ಮತ್ತು ಸೊಸೆಯನ್ನ ಬಂಧಿಸಿರುವ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *