ಡ್ರೈ ಫ್ರುಟ್ಸ್ ಖರೀದಿ ನೆಪದಲ್ಲಿ 200 ಕೋಟಿ ವಂಚನೆ- ಫ್ರೀಡಂ 251 ಫೋನ್ ಕಂಪನಿ ಸಂಸ್ಥಾಪಕ ಅರೆಸ್ಟ್

Public TV
1 Min Read

– 3 ಮೂವರು ವಿದೇಶಿಗರ ಬಂಧನ

ನವದೆಹಲಿ: ಡ್ರೈ ಫ್ರುಟ್ಸ್ ಖರೀದಿ ಮಾಡುವ ನೆಪದಲ್ಲಿ 200 ಕೋಟಿ ರೂಪಾಯಿ ವಂಚಿಸಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಮೋಹಿತ್ ಗೋಯಲ್ ಎಂದು ಗುರುತಿಸಲಾಗಿದೆ. ಈತನ ಜೊತೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಈತನಿಂದ 60 ಕೆಜಿ ಡ್ರೈ ಫ್ರುಟ್ಸ್ ಹಾಗೂ ಒಂದು ಆಡಿ ಕಾರು ಹಾಗೂ ಕೆಲವಷ್ಟು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮೋಹಿತ್ ನೋಯ್ಡಾದಲ್ಲಿ ಬಾಡಿಗೆ ಕಟ್ಟಡವೊಂದರಲ್ಲಿ ತನ್ನ ಕಚೇರಿಯನ್ನು ತೆರೆದಿದ್ದನು. ಈ ಮೂಲಕವಾಗಿ ತನ್ನ ವ್ಯವಹಾರವನ್ನು ಮಾಡುತ್ತಿದ್ದನು. ಈ ಕಚೇರಿಗೆ ಡ್ರೈ ಫ್ರುಟ್ಸ್ ಆ್ಯಂಡ್ ಸ್ಪೆಸಸ್ ಹಬ್ ಎಂದು ಹೆಸರನ್ನು ಇಟ್ಟಿದ್ದನು. ಈತ 2017 ರಲ್ಲಿ ಕಡಿಮೆ ಬೆಲೆ ಫ್ರೀಡಂ ಎಂಬ ಮೊಬೈಲ್‍ನ್ನು 251 ರೂಪಾಯಿಗೆ ನೀಡುತ್ತೇನೆ ಎಂದು ವಂಚಿಸಿದ್ದಾನೆ. ಮೊಬೈಲ್, ಸ್ಮಾರ್ಟ್‍ಫೋನ್, ಎಲ್‍ಸಿಡಿ ಟಿವಿ ನೀಡುತ್ತೇನೆ ಎಂದು ಆಫರ್ ಇಡುತ್ತಿದ್ದನು.

 

ಈ ಮೂಲಕವಾಗಿ ಜನರನ್ನು ಮರಳು ಮಾಡಿ ಹಣವನ್ನು ದೋಚುತ್ತಿದ್ದನು. ಡ್ರೈ ಫ್ರುಟ್ಸ್ ಖರೀದಿ ಮಾಡುತ್ತಿದ್ದನು. ಈ ಮೂಲಕವಾಗಿ ಅವರ ವಿಶ್ವಾಸವನ್ನು ಗಳಿಸುತ್ತಿದ್ದನು. ಮುಂಗಡ ಸ್ವಲ್ಪ ಪ್ರಮಾಣದಲ್ಲಿ ಹಣವನ್ನು ನೀಡುತ್ತಿದ್ದನು, ನಂತರ ಇವರು ನೀಡುವ ಚಕ್ ಬೌನ್ಸ್ ಆಗುತ್ತಿದ್ದವು. ಅವರಿಗೆ ವಿಶೇಷವಾದ ಆಫರ್‍ಗಳನ್ನು ನೀಡುತ್ತೇವೆ ಎಂದೆ ನಯವಾದ ಮಾತುಗಳಿಂದ ಹಣವನ್ನು ದೋಚಿ ವಂಚನೆ ಮಾಡುತ್ತಿದ್ದನು.

ಕರ್ನಾಟಕ ಸೇರಿದಂತೆ ಹಲವು ಭಾಗಗಳಿಂದ 40 ಕ್ಕೂ ಹೆಚ್ಚು ದೂರುಗಳು ಈತನ ವಿರುದ್ಧವಾಗಿ ಬಂದಿದೆ. ಈತನ ಜೊತೆಗೆ ಇನ್ನು ನಾಲ್ವರು ಈ ಕಾರ್ಯದಲ್ಲಿ ಕೈಜೋಡಿಸಿದ್ದಾರೆ. ಇದರಲ್ಲಿ ಮೂವರು ವಿದೇಶಿಗರಾಗಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಈತ ಡ್ರೈ ಫ್ರುಟ್ಸ್ ಖರೀದಿ ಮಾಡುತ್ತೇನೆ ಎಂದು ನಂಬಿಸಿ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *