ಡ್ರೆಸ್ಸಿಂಗ್ ರೂಮ್‍ನಲ್ಲಿ ಕುಲ್ದೀಪ್ ಕುತ್ತಿಗೆ ಹಿಡಿದ ಸಿರಾಜ್ – ವಿಡಿಯೋ ವೈರಲ್

Public TV
1 Min Read

ಚೆನ್ನೈ: ಭಾರತ – ಇಂಗ್ಲೆಂಡ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಡ್ರೆಸ್ಸಿಂಗ್ ರೂಂನಲ್ಲಿ ಬೌಲರ್ ಸಿರಾಜ್ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರ ಕುತ್ತಿಗೆಯನ್ನು ಹಿಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೊದಲ ಪಂದ್ಯದ ವೇಳೆ ವೇಗಿ ಸಿರಾಜ್ ಮತ್ತು ಸ್ಪಿನ್ನರ್ ಕುಲದೀಪ್ ಒಬ್ಬರೊನ್ನಬ್ಬರು ಗುರಾಸಿಕೊಂಡು ಸಂಭಾಷಣೆ ನಡೆಸುತ್ತಿರುವ ವಿಡಿಯೋ ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ದೃಶ್ಯದಲ್ಲಿ ಸಿರಾಜ್ ಅವರು ಕುಲದೀಪ್ ಅವರ ಕುತ್ತಿಗೆಯನ್ನು ಹಿಡಿದು ಹುಬ್ಬನ್ನು ಮೇಲೆ ಮಾಡಿ ಏನನ್ನೊ ಕೇಳುತ್ತಿರುವ ದೃಶ್ಯವು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಗಿದೆ.

ಈ ಪುಟ್ಟ ವಿಡಿಯೋ ತುಣುಕಿನಲ್ಲಿ ಕೋಚ್ ರವಿಶಾಸ್ತ್ರಿ ಮುಂಭಾಗದಲ್ಲಿ ನಿಂತಿರುವುದು ಕಂಡುಬಂದಿದೆ. ಭಾರತದ ಡ್ರೆಸ್ಸಿಂಗ್ ರೂಮ್‍ನಲ್ಲಿ ಆಟಗಾರರ ನಡುವೆ ಶೀತಲ ಸಮರ ನಡೆಯುತ್ತಿದ್ದೆಯಾ ಎಂಬ ಅನುಮಾನ ಇದೀಗ ಕಾಡುತ್ತಿದೆ. ಮೊಹಮ್ಮದ್ ಸಿರಾಜ್ ಮತ್ತು ಕುಲದೀಪ್ ಯಾದವ್ ಇಬ್ಬರು ಒಬ್ಬರೊನ್ನಬ್ಬರೂ ಗುರಾಯಿಸುತ್ತಿರುವ ವಿಡಿಯೋ ಇದಕ್ಕೆ ಸಾಕ್ಷಿಯಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಈ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಕೊಹ್ಲಿ ಕುಲದೀಪ್ ಮತ್ತು ಸಿರಾಜ್ ಆತ್ಮೀಯ ಸ್ನೇಹಿತರು ತಮಾಷೆಗಾಗಿ ಈ ರೀತಿ ನಡೆದುಕೊಂಡಿರಬಹುದೆಂದು ಉತ್ತರಿಸಿದ್ದಾರೆ.

ಕುಲದೀಪ್ ಯಾದವ್ ಮತ್ತು ಸಿರಾಜ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯದ ಆಡುವ 11ರ ಬಳಗದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *