ಡ್ರೆಸ್ಸಿಂಗ್ ರೂಮಿನಲ್ಲಿ ಟೀಂ ಇಂಡಿಯಾ ಸಂಭ್ರಮ – ಅದ್ಭುತ ಗೆಲುವು ಎಂದ ದ್ರಾವಿಡ್

Public TV
2 Min Read

ಕೊಲಂಬೋ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾದ ಜಯ ಅದ್ಭುತ ಗೆಲುವು ಎಂದು ಕೋಚ್ ರಾಹುಲ್ ದ್ರಾವಿಡ್ ಬಣ್ಣಿಸಿದ್ದಾರೆ.

3 ವಿಕೆಟ್‍ಗಳ ರೋಚಕ ಗೆಲುವಿನ ನಂತರ ಡ್ರೆಸ್ಸಿಂಗ್ ರೂಮಿನಲ್ಲಿ ಸಂಭ್ರಮ ಮನೆ ಮಾಡಿತ್ತು. ಈ ವೇಳೆ ಆಟಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಲಂಕಾ ಉತ್ತಮವಾಗಿ ಆಟವಾಡಿತು. ನಾವು ಅತ್ಯುತ್ತಮವಾಗಿ ಚಾಂಪಿಯನ್ ತಂಡದಂತೆ ಪ್ರತಿಕ್ರಿಯಿಸಿದ್ದೇವೆ. ನೀವೆಲ್ಲರೂ ಚೆನ್ನಾಗಿ ಆಡಿದ್ದೀರಿ. ಅದ್ಭುತ ಗೆಲುವು ಎಂದು ಹೇಳಿ ತಂಡವನ್ನು ಹೊಗಳಿದ್ದಾರೆ.

ಇನ್ನೂ ಒಂದು ಪಂದ್ಯ ಇರುವಂತೆ ಸರಣಿ ಗೆದ್ದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ದ್ರಾವಿಡ್ ಟ್ರೆಂಡಿಂಗ್ ಆಗಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ದ್ರಾವಿಡ್ ಅವರ ಕೋಚ್ ಶೈಲಿಯನ್ನು ಮೆಚ್ಚಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

2 ವಿಕೆಟ್ ತೆಗೆದು 69 ರನ್ ಹೊಡೆದು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ದೀಪಕ್ ಚಹರ್ ರಾಹುಲ್ ದ್ರಾವಿಡ್ ಅವರ ಬಗ್ಗೆ ಮಾತನಾಡಿ, ಭಾರತ ಎ ತಂಡದಲ್ಲಿ ಆಡುತ್ತಿದ್ದಾಗ ರಾಹುಲ್ ದ್ರಾವಿಡ್ ಏಳನೇ ಕ್ರಮಾಂಕದಲ್ಲಿ ನನ್ನ ಸಾಮಥ್ರ್ಯವನ್ನು ಗುರುತಿಸಿದ್ದರು ಎಂದು ಉಲ್ಲೇಖಿಸಿದ್ದರು. ಇದನ್ನೂ ಓದಿ : ಸಹ ಆಟಗಾರನ ಫುಟ್‍ಬಾಲ್ ಆಟಕಂಡು ನೆಲದಲ್ಲಿ ಹೊರಳಾಡಿ ನಕ್ಕ ಕೊಹ್ಲಿ

ಪಂದ್ಯದ ಸಮಯದಲ್ಲೇ ದೀಪಕ್ ಚಹರ್ ಅವರ ಸಹೋದರ ರಾಹುಲ್ ಚಹರ್ ಅವರಿಗೆ ದ್ರಾವಿಡ್ ಸಲಹೆ ನೀಡುತ್ತಿದ್ದ ಫೋಟೋಗಳು ಸಹ ವೈರಲ್ ಆಗುತ್ತಿದೆ. ಸಾವಿರ ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಹೇಳುತ್ತದೆ. ದ್ರಾವಿಡ್ ಟೀಂ ಇಂಡಿಯಾದ ಕೋಚ್ ಆಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಭಾರತ ತಂಡವನ್ನು ಯಾವುದೇ ಕಾರಣಕ್ಕೂ ಕಡಿಮೆ ಅಂದಾಜು ಮಾಡಬೇಡಿ ಎಂದು ಆಸ್ಟ್ರೇಲಿಯಾ ಮಾಜಿ ಆಟಗಾರ ಜಸ್ಟಿನ್ ಲ್ಯಾಂಗರ್ ಈ ಹಿಂದೆ ಹೇಳಿದ ಮಾತು ಮತ್ತೆ ನಿಜವಾಗಿದೆ ಎಂದು ಜನ ಹೇಳುತ್ತಿದ್ದಾರೆ

https://twitter.com/arun_vatsa12/status/1417755157127852033

ಗೆಲ್ಲಲು 276 ರನ್ ಗಳ ಗುರಿಯನ್ನು ಪಡೆದ ಭಾರತ ಸೂರ್ಯ ಕುಮಾರ್ ಯಾದವ್, ದೀಪಕ್ ಚಹರ್ ಅವರ ಅರ್ಧಶತಕದಿಂದ 49.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 277 ರನ್ ಹೊಡೆದು ಜಯಗಳಿಸಿತು.

193 ರನ್ ಗಳಿಸಿದ್ದಾಗ ಸೂರ್ಯಕುಮಾರ್ ಯಾದವ್ 7ನೇಯವರಾಗಿ ಔಟಾದಾಗ ಭಾರತ ಸೋಲಿನತ್ತ ಮುಖಮಾಡಿತ್ತು. ಆದರೆ ಮುರಿಯದ 8ನೇ ವಿಕೆಟಿಗೆ ದೀಪಕ್ ಚಹರ್ ಮತ್ತು ಭುವನೇಶ್ವರ್ ಕುಮಾರ್ 84 ಎಸೆತಗಳಲ್ಲಿ 84 ರನ್ ಜೊತೆಯಾಟವಾಡಿ ಭಾರತ ಸರಣಿ ಗೆಲ್ಲುವಂತೆ ಮಾಡಿದರು.

https://twitter.com/anshuman7345/status/1417742743485308928

ಇದಕ್ಕೂ ಮೊದಲು 6ನೇ ವಿಕೆಟಿಗೆ ಸೂರ್ಯಕುಮಾರ್ ಯಾದವ್ ಮತ್ತು ಕೃನಾಲ್ ಪಾಂಡ್ಯ 44 ರನ್ ನಂತರ 7ನೇ ವಿಕೆಟಿಗೆ ಕೃನಾಲ್ ಪಾಂಡ್ಯ ಮತ್ತು ಚಹರ್ 49 ರನ್ ಜೊತೆಯಾಟವಾಡಿ ಪಂದ್ಯವನ್ನು ಭಾರತದತ್ತ ತಿರುಗಿಸಿದರು.

Share This Article
Leave a Comment

Leave a Reply

Your email address will not be published. Required fields are marked *