ಡ್ರಗ್ಸ್ ಕೇಸ್ – ಸುಶಾಂತ್ ಗೆಳೆಯ ಸಿದ್ಧಾರ್ಥ್ ಪಠಾಣಿ ಅರೆಸ್ಟ್

Public TV
1 Min Read

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಎನ್‍ಸಿಬಿ (Narcotics Control Bureau) ನಟ ಸುಶಾಂತ್ ಸಿಂಗ್ ರಜಪೂತ್ ಗೆಳೆಯ ಸಿದ್ಧಾರ್ಥ್ ಪಠಾಣಿಯನ್ನ ಬಂಧಿಸಿದೆ.

ಹೈದರಾಬಾದ್ ನಲ್ಲಿ ಸಿದ್ಧಾರ್ಥ್ ಬಂಧನವಾಗಿದ್ದು, ಅಧಿಕಾರಿಗಳ ತಂಡ ಬಂಧಿತನನ್ನು ಮುಂಬೈ ಕರೆತರುತ್ತಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಸಿದ್ಧಾರ್ಥ್ ವಿರುದ್ಧ ಸೆಕ್ಷನ್ 28, 29 ಮತ್ತು 27ರ ಅಡಿ ಪ್ರಕರಣ ದಾಖಲಾಗಿದ್ದು, ಮುಂಬೈನಲ್ಲಿ ಎನ್‍ಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

ಸುಶಾಂತ್ ಸಿಂಗ್ ಮನೆಯಲ್ಲಿಯೇ ಸಿದ್ಧಾರ್ಥ್ ವಾಸವಾಗಿದ್ದು, ನಟನ ಶವವನ್ನ ಮೊದಲು ನೋಡಿ ಮಾಹಿತಿ ನೀಡಿದ್ದರು. ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಸಿದ್ಧಾಥ್ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು. ಅಸಹಜ ಸಾವು ಕೇಸ್ ಡ್ರಗ್ಸ್ ಪ್ರಕರಣಕ್ಕೆ ತಿರುವು ಪಡೆದುಕೊಂಡಿತ್ತು. ಇದೇ ಪ್ರಕರಣದಲ್ಲಿ ಸುಶಾಂತ್ ಗೆಳತಿ, ನಟಿ ರಿಯಾ ಚಕ್ರವರ್ತಿ ಮತ್ತು ಶೌವಿಕ್ ಚಕ್ರವರ್ತಿ ಜೈಲುವಾಸ ಸಹ ಅನುಭವಿಸಿದ್ದು, ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದನ್ನೂ ಓದಿ: ನನಗೆ ಇಲ್ಲಿ ಇಬ್ಬರೇ ಗೆಳೆಯರು ಅಂದಿದ್ದ ಸುಶಾಂತ್ ಸಿಂಗ್ ರಜಪೂತ್

ಜೂನ್ 14, 2020ರಂದು ಸುಶಾಂತ್ ಸಿಂಗ್ ರಜಪೂತ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸುಶಾಂತ್ ಕುಟುಂಬಸ್ಥರು ನಟಿ ರಿಯಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೊನೆಯ ಮೂರು ಗಂಟೆ ಹೇಗಿತ್ತು? ಮನೆಯಲ್ಲಿದಿದ್ದು 3 ಜನ, ಬೆಳಗ್ಗೆ ಸೋದರಿಗೆ ಫೋನ್

Share This Article
Leave a Comment

Leave a Reply

Your email address will not be published. Required fields are marked *