ಚಿಕ್ಕಮಗಳೂರು: ಡೆತ್ ನೋಟ್ ಬರೆದಿಟ್ಟು, ವೀಡಿಯೋ ಮಾಡಿ ಶ್ರೀಗಂಧದ ಬೆಳೆಗಾರ ನಾಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಕಣ್ಮರೆಯಾದವರನ್ನು ವಿಶುಕುಮಾರ್ ಎಂದು ಗುರುತಿಸಲಾಗಿದ್ದು, ಇವರು ತರೀಕೆರೆ ಪಟ್ಟಣದ ನಿವಾಸಿ. ಕುಟುಂಬದವರನ್ನ ಉದ್ದೇಶಿಸಿ ವೀಡಿಯೋ ಮಾಡಿದ್ದಾರೆ. ನಿಮಗೆಲ್ಲಾ ಮೋಸ ಮಾಡಿ ಹೋಗುತ್ತಿದ್ದೇನೆ ಎಂದು ಕಣ್ಣೀರು ಹಾಕಿ ವಿಶುಕುಮಾರ್ ನಾಪತ್ತೆಯಾಗಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗಾಗಿ ರೈತರು ಬೆಳೆದ ಶ್ರೀಗಂಧದ ಮರಗಳನ್ನು ಕಡಿಯಲಾಗಿದೆ. ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದೆ. ಕೋರ್ಟ್ ಸೂಚಿಸಿದ್ರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ವಹಿಸಿದೆ. 22 ಮಂದಿ ರೈತರಿಗೆ ಪರಿಹಾರ ನೀಡಲು ಮೀನಾಮೇಷ ಎಣಿಸುತ್ತಿದೆ. ಪರಿಹಾರದ ಹಣಕ್ಕಾಗಿ ಅಲೆದು ಅಲೆದು ಸಂತ್ರಸ್ತರು ಸುಸ್ತಾಗಿದ್ದಾರೆ. 3 ದಿನದ ಹಿಂದೆ ತುಮಕೂರಿನ ಪ್ರಾಧಿಕಾರ ಕಚೇರಿಯೆದುರು ಪ್ರತಿಭಟನೆ ನಡೆಸಿದ್ರು.
ಸದ್ಯ ಮರಣ ಪತ್ರ ಬರೆದಿಟ್ಟಿದ್ದಾರೆ. ಅಲ್ಲದೆ ವೀಡಿಯೋ ಮಾಡಿ ಶ್ರೀಗಂಧ ಬೆಳೆಗಾರ ವಿಶುಕುಮಾರ್ ನಾಪತ್ತೆಯಾಗಿದ್ದಾರೆ.