ಡಿಆರ್‌ಎಸ್‌ ಎಡವಟ್ಟು – ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಸಿರಾಜ್

Public TV
1 Min Read

ಲಂಡನ್: ಮೊಹಮ್ಮದ್ ಸಿರಾಜ್ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೆ ಡಿಆರ್‌ಎಸ್‌ ತೆಗೆದುಕೊಳ್ಳುವುದರಲ್ಲಿ ಮಾತ್ರ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ.

ಭಾರತದ ಪರ ಯುವ ವೇಗಿ ಸಿರಾಜ್ ಕಳೆದ ಕೆಲ ಟೆಸ್ಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಭಾರತದ ಭರವಸೆಯ ಬೌಲರ್ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಡಿಆರ್‌ಎಸ್‌ ವಿಷಯದಲ್ಲಿ ಮಾತ್ರ ನಾಯಕ ವಿರಾಟ್ ಕೊಹ್ಲಿಯನ್ನು ತಬ್ಬಿಬ್ಬಾಗಿಸುತ್ತಿದ್ದಾರೆ. ಲಾಡ್ರ್ಸ್ ಟೆಸ್ಟ್ ನಲ್ಲೂ ಕೂಡ 2 ಬಾರಿ ಸಿರಾಜ್ ರಿವ್ಯೂ ಪಡೆದುಕೊಳ್ಳುವಂತೆ ಕೊಹ್ಲಿಗೆ ಸೂಚಿಸಿ ಎರಡರಲ್ಲೂ ವಿಫಲತೆ ಕಂಡರು. ಸಿರಾಜ್ ಬೌಲಿಂಗ್ ಮಾಡುತ್ತಿದ್ದಾಗ ಈವರೆಗೆ ಭಾರತ ತಂಡ 10 ಬಾರಿ ರಿವ್ಯೂ ಪಡೆದುಕೊಂಡಿದ್ದು, ಅದರಲ್ಲಿ 9 ಬಾರಿ ವಿಫಲತೆ ಅನುಭವಿಸಿ, 1 ಬಾರಿ ಮಾತ್ರ ಸಫಲತೆ ಕಂಡಿದೆ. ಹಾಗಾಗಿ ಸಿರಾಜ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಸಿರಾಜ್ ಬೌಲಿಂಗ್ ಮಾಡುತ್ತಿದ್ದಂತೆ ರಿವ್ಯೂ ತೆಗೆದುಕೊಳ್ಳುವ ಅವಕಾಶವನ್ನು ಕೊಹ್ಲಿ ತಿರಸ್ಕರಿಸದೆ ಪದೇ ಪದೇ ತೆಗೆದುಕೊಂಡು ಫೇಲ್ ಆಗುತ್ತಿದ್ದಾರೆ. ಇವರೊಂದಿಗೆ ವಿಕೆಟ್ ಕೀಪರ್ ರಿಷಬ್ ಪಂತ್ ಕೂಡ ಕೈಜೋಡಿಸಿ ಕೆಲ ಕೆಟ್ಟ ನಿರ್ಧಾರಕ್ಕೆ ಕಾರಣರಾಗುತ್ತಿದ್ದಾರೆ. ಹಾಗಾಗಿ ನೆಟ್ಟಿಗರು ನಾಯಕ ಸಹಿತ ಇವರಿಬ್ಬರನ್ನು ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: ದೇಶಕ್ಕೆ ಹೆಮ್ಮೆ ತಂದಿದ್ದೀರಿ – ಒಲಿಂಪಿಕ್ಸ್ ಕ್ರೀಡಾಪಟುಗಳಿಗೆ ಕೋವಿಂದ್ ಅಭಿನಂದನೆ

Share This Article
Leave a Comment

Leave a Reply

Your email address will not be published. Required fields are marked *