ಡಬಲ್ ಮರ್ಡರ್ ಕೇಸ್‍ನಲ್ಲಿ ಅರೆಸ್ಟ್- ಬಿಚ್ಚಿಟ್ಟಿದ್ದು ಮತ್ತೊಂದು ಮರ್ಯಾದಾ ಹತ್ಯೆಯ ರಹಸ್ಯ

Public TV
2 Min Read

– ತಮ್ಮ ಜೊತೆ ಗೆಳೆಯನ ಅಣ್ಣನನ್ನ ಜೈಲಿಗೆ ಕರೆದೊಯ್ದ ಆರೋಪಿಗಳು
– ಇಬ್ಬಿಬ್ಬರನ್ನ ಪ್ರೀತಿಸಿದ್ದ ಸೋದರಿಯ ಉಸಿರು ನಿಲ್ಲಿಸಿದ್ದ ಅಣ್ಣ

ಲಕ್ನೋ: ಡಬಲ್ ಮರ್ಡರ್ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳಿಬ್ಬರು ಪೊಲೀಸರ ಮುಂದೆ ಈ ಹಿಂದೆ ನಡೆದಿದ್ದ ಮರ್ಯಾದಾ ಹತ್ಯೆಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಜೈಲಿಗೆ ಹೋಗುವಾಗ ತಮ್ಮಿಬ್ಬರ ಜೊತೆ ಗೆಳೆಯನ ಅಣ್ಣನನ್ನು ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಉತ್ತರ ಪ್ರದೇಶದ ಮುರಾದಾಬಾದ್ ಪೊಲೀಸರು ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನವೆಂಬರ್ 6ರಂದು ಮುರಾದಾಬಾದ್ ನಾಗ್ಫಾನಿಯ ಕಿಸರೌಲ್ ನಲ್ಲಿ ಜೋಡಿ ಕೊಲೆ ನಡೆದಿತ್ತು. ದುಷ್ಕರ್ಮಿಗಳು ಪ್ರಾಪರ್ಟಿ ಡೀಲರ್ ನಜರತ್ ಹುಸೈನ್ ಮತ್ತು ಅವರ ಪುತ್ರಿ ಸಮ್ರೀನ್ ಳನ್ನು ಕೊಲೆಗೈದಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅದೇ ಏರಿಯಾದ ಮನ್ನಾನ್ ಮತ್ತು ಯೂನಸ್ ಎಂಬ ಇಬ್ಬರು ಯುವಕರನ್ನ ಬಂಧಿಸಿದ್ದರು. ಆರೋಪಿಗಳನ್ನು ತೀವ್ರ ವಿಚಾರಣೆ ನಡೆಸಿದಾಗ ಈ ಹಿಂದೆ ಗೆಳೆಯನ ಮನೆಯಲ್ಲಿ ನಡೆದ ಮರ್ಯಾದಾ ಹತ್ಯೆಯ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಮರ್ಯಾದಾ ಹತ್ಯೆ – ಕಿಡ್ನಾಪ್ ಮಾಡಿ 4 ತಿಂಗ್ಳ ಹಿಂದೆ ಮದ್ವೆಯಾಗಿದ್ದ ಯುವಕನ ಹತ್ಯೆ

ಕತ್ತು ಹಿಸುಕಿ ಕೊಲೆ: ಒಮ್ಮೆ ನಶೆಯಲ್ಲಿದ್ದ ಗೆಳೆಯ ಟಿಂಕು ತನ್ನ ಅಣ್ಣನೇ ಸೋದರಿ ಅಕ್ಷಾಳ ಕತ್ತು ಹಿಸುಕಿ ಕೊಲೆಗೈದಿರುವ ವಿಚಾರವನ್ನು ಮನ್ನಾನ್ ಮತ್ತು ಯೂನಿಸ್ ಗೆ ಹೇಳಿದ್ದನು. ಅಕ್ಷಾಳ ಕತ್ತು ಹಿಸುಕಿ ಕೊಲೆಗೈದಿದ್ದ ಸೋದರ ತಾರೀಖ್ ಬೆಳಗ್ಗೆ ಕುಟುಂಬಸ್ಥರಿಗೆ ಹಾರ್ಟ್ ಅಟ್ಯಾಕ್ ಎಂದು ನಂಬಿಸಿ ಅಂತ್ಯಕ್ರಿಯೆ ಸಹ ನೆರವೇರಿಸಿದ್ದನು. ಆದ್ರೆ ಕೊಲೆಯ ರಹಸ್ಯ ಮಾತ್ರ ಸೋದರರಿಬ್ಬರಲ್ಲಿಯೇ ಉಳಿದುಕೊಂಡಿತ್ತು. ಪ್ರಕರಣದ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ತನಿಖೆಗೆ ಇಳಿದಿದ್ದರು. ಇದನ್ನೂ ಓದಿ: ನೆಚ್ಚಿನ ನಟನನ್ನು ನೋಡಲು ಹೋಗಿ ಮರ್ಯಾದಾ ಹತ್ಯೆಗೆ ಬಲಿಯಾಯ್ತು ಯುವ ಜೋಡಿ..?

ಅಕ್ಷಾಳ ಕೊಲೆ ಬಗ್ಗೆ ಪತಿ ಇರ್ಫಾನ್ ಅನುಮಾನ ವ್ಯಕ್ತಪಡಿಸಿರುವ ವಿಷಯ ತಿಳಿದಾಗ ಪೊಲೀಸರ ಅನುಮಾನ ಮತ್ತಷ್ಟು ಬಲವಾಗಿತ್ತು. ಅಕ್ಷಾಳ ಮೃತದೇಹ ಹೊರ ತೆಗೆದು ಮರಣೋತ್ತರ ಶವ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅಕ್ಷಾಳ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಅದು ಸಹಜ ಸಾವಲ್ಲ ಎಂದು ವೈದ್ಯರು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಡಿಸಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ: ಗರ್ಭಿಣಿ ಪತ್ನಿಯ ಎದುರೇ ಪತಿಯ ತಲೆಗೆ ಮಚ್ಚಿನಿಂದ ಏಟು

ಇಬ್ಬಿಬ್ಬರ ಜೊತೆ ಲವ್: ಮೃತ ಅಕ್ಷಾ ಇರ್ಫಾನ್ ಎಂಬವನನ್ನು ಪ್ರೀತಿಸಿ ಮದುವೆ ಆಗಿದ್ದಳು. ದಂಪತಿಗೆ ಒಂದು ಮಗು ಸಹ ಇತ್ತು. ಆದರೆ ಮದುವೆ ಬಳಿಕ ಮತ್ತೋರ್ವನ ಪ್ರೇಮದ ಬಲೆಯಲ್ಲಿ ಸಿಲುಕಿದ ಅಕ್ಷಾ ಪತಿಯನ್ನು ಬಿಟ್ಟು ಓಡಿ ಹೋಗಿದ್ದಳು. ಕೆಲ ದಿನಗಳ ಬಳಿಕ ಹಿಂದಿರುಗಿದಾಗ ಇರ್ಫಾನ್ ಪತ್ನಿಯನ್ನ ಮನೆಗೆ ಸೇರಿಸಿಕೊಂಡಿರಲಿಲ್ಲ. ಹಾಗಾಗಿ ಅಕ್ಷಾ ತವರು ಮನೆ ಸೇರಿದ್ದಳು. ಸೋದರಿಯ ಈ ವರ್ತನೆಯಿಂದ ಅಕ್ಷಾ ಕುಟುಂಬಸ್ಥರು ಸಮಾಜದಲ್ಲಿ ಅವಮಾನಿತರಾಗಿದ್ದರು. ಅಕ್ಷಾಳ ನಡವಳಿಕೆಯಿಂದ ಬೇಸತ್ತಿದ್ದ ತಾರೀಖ್ ಸಮಯ ನೋಡಿಕೊಂಡು ಕತ್ತು ಹಿಸುಕಿ ಕೊಲೆ ಮಾಡಿದ್ದನು. ಕೊಲೆಯ ಬಳಿಕ ಎಲ್ಲರಿಗೂ ಹಾರ್ಟ್ ಅಟ್ಯಾಕ್ ಎಂದು ಹೇಳಿ ನಂಬಿಸಿ, ಅವಸರದಲ್ಲಿಯೇ ಅಂತ್ಯಕ್ರಿಯೆ ಮಾಡಿದ್ದನು. ದಿಢೀರ್ ಅಂತ್ಯಕ್ರಿಯೆ ನಡೆಸಿದ್ದರಿಂದ ಅಕ್ಷಾಳ ಪತಿ ಇರ್ಫಾನ್ ಅನುಮಾನ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮತ್ತೆ ಮರ್ಯಾದಾ ಹತ್ಯೆಗೆ ಸುದ್ದಿಯಾದ ಮಂಡ್ಯ – ಯುವತಿ ಸಾವು, ಪ್ರಿಯತಮ ಆಸ್ಪತ್ರೆ ಪಾಲು

Share This Article
Leave a Comment

Leave a Reply

Your email address will not be published. Required fields are marked *