‘ಟ್ವಿಟ್ಟರ್ ಕಿಲ್ಲರ್’ಗೆ ಮರಣ ದಂಡನೆ – 9 ಜನರನ್ನ ಕೊಂದು ತುಂಡು ತುಂಡಾಗಿ ಕತ್ತರಿಸಿದ್ದ

Public TV
1 Min Read

– ಮನೆಯಲ್ಲಿದ್ದ ಕೋಲ್ಡ್ ಸ್ಟೋರೇಜ್‍ನಲ್ಲಿ ಹೆಣಗಳ ಸಂಗ್ರಹಣೆ
– ಸಹಾಯಕ್ಕೆ ಬಂದವರನ್ನ ರೇಪ್‍ಗೈದು ಕೊಲ್ಲುತ್ತಿದ್ದ ಹಂತಕ

ಟೋಕಿಯೋ: 2017ರಲ್ಲಿ ಸದ್ದು ಮಾಡಿದ್ದ ಟ್ವಿಟ್ಟರ್ ಕಿಲ್ಲರ್ ಗೆ ಟೋಕಿಯೋದ ನ್ಯಾಯಾಲಯ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತಕಾಹಿರೋ ಶಿರೈಸಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲ್ಲ ಎಂದು ಸಹ ಹೇಳಿದ್ದಾನೆ. 2017ರಲ್ಲಿ ಇಡೀ ಜಪಾನ್ ದೇಶವನ್ನೇ ತಕಾಹಿರೋ ಬೆಚ್ಚಿ ಬೀಳುವಂತೆ ಮಾಡಿದ್ದನು.

ಅಪರಾಧಿ ತಕಾಹಿರೋ ಟೋಕಿಯೋ ನಗರದ ಝಾಮಾ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ದನು. ಈತನ ಮನೆಯಲ್ಲಿರುವ ಕೋಲ್ಡ್ ಸ್ಟೋರೇಜ್ ನಲ್ಲಿ 8 ಯುವತಿಯರು, ಓರ್ವ ಯುವಕನ ಶವ ಪೊಲೀಸರು ವಶಕ್ಕೆ ಪಡೆದುಕೊಂಡು ಬಂಧಿಸಿದ್ದರು. ಇದೀಗ ಟೋಕಿ ಯೋ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಎಲ್ಲ ಕೊಲೆಗಳ ಆಯ ಉದ್ದೇಶಪೂರ್ವಕ ಮಾಡಿದ್ದಾನೆ ಎಂದು ತೀರ್ಪಿನಲ್ಲಿ ಹೇಳಿದೆ.

ಟ್ವಿಟ್ಟರ್ ಕಿಲ್ಲರ್ ಹೆಸರು ಬಂದಿದ್ದೇಗೆ?: ತಕಾಹಿರೋ ಟ್ವಿಟ್ಟರ್ ನಲ್ಲಿ ಮಹಿಳೆಯರ ಜೊತೆ ಸ್ನೇಹ ಸಂಪಾದಿಸುತ್ತಿದ್ದನು. ನಂತರ ತನ್ನ ಖಾತೆಯಲ್ಲಿ ಆತ್ಮಹತ್ಯೆಗೆ ಸಂಬಂಧಿಸಿದ ಮೆಸೇಜ್, ಫೋಟೋ ಹಾಕಿಕೊಳ್ಳುತ್ತಿದ್ದನು. ಟ್ವಿಟ್ಟರ್ ನಲ್ಲಿ ಮೆಸೇಜ್ ಮಾಡುತ್ತಿದ್ದ ಯುವತಿಯರ ಬಳಿ ಸಹಾಯ ಕೇಳುತ್ತಿದ್ದನು. ಸಹಾಯಕ್ಕೆ ಬಂದ ಯುವತಿಯರನ್ನ ಅತ್ಯಾಚಾರ ಎಸಗಿ, ನಂತರ ಮೃತದೇಹವನ್ನ ತುಂಡು ತುಂಡಾಗಿ ಕತ್ತರಿಸಿ ಕೋಲ್ಡ್ ಸ್ಟೋರೇಜ್ ನಲ್ಲಿ ಇರಿಸುತ್ತಿದ್ದನು. ಓರ್ವ ಯುವತಿಯ ಗೆಳೆಯನನ್ನ ಸೇರಿದಂತೆ 9 ಜನರನ್ನ ತಕಾಹಿರೋ ಕೊಲೆ ಮಾಡಿದ್ದಾನೆ. ಹಾಗಾಗಿ ಈತನಿಗೆ ಟ್ವಿಟ್ಟರ್ ಕಿಲ್ಲರ್ ಎಂದೇ ಕರೆಯಾಲಾಗುತ್ತಿದೆ.

ಪ್ರಕರಣದ ಆರಂಭದಲ್ಲಿ ತಕಾಹಿರೋ ಪರ ವಾದ ಮಂಡಿಸಿದ್ದ ವಕೀಲರು, ಆತ ಯಾರನ್ನೂ ಕೊಂದಿಲ್ಲ. ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗ್ತಿದ್ದವರಿಗೆ ತಕಾಹಿರೋ ಸಹಾಯ ಮಾಡುತ್ತಿದ್ದನು ಎಂದಿದ್ರು. ಆದ್ರೆ ನ್ಯಾಯಾಲಯ ಜಗತ್ತಿನಲ್ಲಿ ಯಾರಿಗೂ ಯಾರ ಜೀವ ತೆಗೆದುಕೊಳ್ಳುವ ಹಕ್ಕಿಲ್ಲ. ಈತ ಕೊಲೆ ಮಾಡಿದ 9 ಜನರ ಸಾವಿಗೆ ತಕಾಹಿರೋ ಕಾರಣ ಎಂದು ಹೇಳಿ ಶಿಕ್ಷೆ ಪ್ರಕಟಿಸಿದೆ.

Share This Article
Leave a Comment

Leave a Reply

Your email address will not be published. Required fields are marked *