ಟ್ರ್ಯಾಕ್ಟರ್ ಪಲ್ಟಿ- 4 ವರ್ಷದ ಮಗು ಸಾವು

Public TV
1 Min Read

ತುಮಕೂರು: ಚಿಕ್ಕನಾಯಕನಹಳ್ಳಿ ತಾಲೂಕು ಬೆಳಗೀಹಳ್ಳಿ ಸಮೀಪ ಟ್ರ್ಯಾಕ್ಟಾರ್ ಪಲ್ಟಿಯಾದ ಪರಿಣಾಮ 4 ವರ್ಷದ ಮಗು ಮೃತಪಟ್ಟಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಹಂದನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಬೆಳಿಗ್ಗೆಹಳ್ಳಿ ಕ್ರಾಸ್ ರಸ್ತೆಯಲ್ಲಿ ಟ್ರ್ಯಾಕ್ಟಾರ್ ಪಲ್ಟಿ ಹೊಡೆದ ಪರಿಣಾಮ 4 ವರ್ಷದ ಮಗು ಶ್ರೇಯಸ್ ಸಾವನ್ನಪಿದೆ. ಮಗು ಊರು ಕಮಲಾಪುರ ಎಂದು ತಿಳಿದು ಬಂದಿದ್ದು, ಟ್ರ್ಯಾಕ್ಟಾರ್ ನಲ್ಲಿ ಸುಮಾರು 15 ಜನ ಇದ್ದರು, 5 ಜನಕ್ಕೆ ಸಣ್ಣ ಗಾಯಗಳಾಗಿದ್ದು, ಹುಳಿಯಾರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಎಲ್ಲರೂ ಟ್ರಾಕ್ಟಾರ್ ನಲ್ಲಿ ಬೆಳಗುಲಿ ರಂಗನಾಥಸ್ವಾಮಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಅವಘಡ ಸಂಭವಿಸಿದೆ. ಸ್ಥಳಕ್ಕೆ ಹಂದನಕೆರೆ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *