ಟಿ20 ಕ್ರಿಕೆಟ್‍ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುವ ಸನಿಹದಲ್ಲಿ ಕೊಹ್ಲಿ

Public TV
1 Min Read

ಅಬುಧಾಬಿ: ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ.

ಐಪಿಎಲ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿರುವ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ದಾಖಲೆ ಬರೆಯುವ ಸನಿಹದಲ್ಲಿದೆ. ಕೊಹ್ಲಿ 82 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ 9 ಸಾವಿರ ಗಳಿಸಿದ ಮೊದಲ ಟೀಂ ಇಂಡಿಯಾ ಆಟಗಾರ ಎನಿಸಿಕೊಳ್ಳಲಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ಕೊಹ್ಲಿ ಈ ಸಾಧನೆ ಮಾಡಿದ 7ನೇ ಆಟಗಾರ ಎನಿಸಿಕೊಳ್ಳಲಿದ್ದಾರೆ.

ಕೊಹ್ಲಿ 269 ಇನ್ನಿಂಗ್ಸ್ ಗಳಲ್ಲಿ ಇದುವರೆಗೂ 134.24 ಸ್ಟ್ರೈಕ್ ರೇಟ್‍ನಲ್ಲಿ 9,918 ರನ್ ಗಳಿಸಿದ್ದು, ಇದರಲ್ಲಿ 5 ಶತಕ, 64 ಅರ್ಧ ಶತಕಗಳು ಸೇರಿದೆ. ಐಪಿಎಲ್‍ನಲ್ಲಿ 180 ಪಂದ್ಯಗಳಲ್ಲಿ ಕೊಹ್ಲಿ 5,430 ರನ್ ಗಳಿಸಿದ್ದಾರೆ.

ಐಪಿಎಲ್ 2020ರ ಆವೃತ್ತಿಯಲ್ಲಿ ಇದುವರೆಗೂ ಆರ್‌ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಇದುವರೆಗೂ ಆಡಿರುವ ಮೂರು ಪಂದ್ಯಗಳಲ್ಲಿ 18 ರನ್ (3, 1, 14) ಗಳಷ್ಟೇ ಗಳಿಸಿದ್ದಾರೆ. ಇಂದು ಆರ್‌ಸಿಬಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಿಯಲ್ಲಿ ಆರ್‌ಸಿಬಿ ಸೋಲು, ಗೆಲುವಿನ ರುಚಿ ಸವಿದಿದ್ದು, ಹೈದರಾಬಾದ್ ಮತ್ತು ಮುಂಬೈ ಎದುರು ಗೆಲುವು ಪಡೆದಿದೆ. ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಸೋಲುಂಡಿತ್ತು. ಇಂದಿನ ಪಂದ್ಯದಲ್ಲಿ ಉಭಯ ತಂಡಗಳ ಬಲಿಷ್ಠ ನಾಯಕರ ನಡುವಿನ ಸೆಣಸಾಟ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರ ನಡುವೆ ಯಾರು ಉತ್ತಮರು ಎಂಬ ಪ್ರಶ್ನೆ ವಿಶ್ವ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಕಾರಣ ಇಬ್ಬರಿಗೂ ಈ ಪಂದ್ಯ ಪ್ರತಿಷ್ಠೆಯ ಕಣವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *