ಟಿ-20 ವಿಶ್ವಕಪ್ ಆಡಬೇಕೆಂದಿದ್ದ ಧೋನಿ ಸಡನ್ ನಿವೃತ್ತಿ ಘೋಷಿಸಿದ್ದು ಯಾಕೆ?

Public TV
1 Min Read

ನವದೆಹಲಿ: ಟಿ-20 ವಿಶ್ವಕಪ್ ಆಡಿ ನಿವೃತ್ತಿ ಆಗಬೇಕು ಎಂದುಕೊಂಡಿದ್ದ ಭಾರತದ ಮಾಜಿ ನಾಯಕ ಎಂಎಸ್ ಧೋನಿ ಶನಿವಾರ ಸಂಜೆ ಡಿಢೀರ್‌ ನಿವೃತ್ತಿ ಘೋಷಣೆ ಮಾಡಿದ್ದಾರೆ.

ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ಧೋನಿಯವರು ತಮ್ಮ ನಿವೃತ್ತಿಯನ್ನು ಘೋಷಣೆ ಮಾಡಿದ್ದರು. ಈ ಮೂಲಕ ಟಿ-20 ವಿಶ್ವಕಪ್ ಆಡುತ್ತಾರೆ ಎಂದು ಅಂದುಕೊಂಡಿದ್ದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಆದರೆ ಟಿ-20 ವಿಶ್ವಕಪ್ ಆಡುವ ಪ್ಲಾನ್‍ನಲ್ಲಿ ಇದ್ದ ಧೋನಿ ಸಡನ್ ಆಗಿ ನಿವೃತ್ತಿ ಹೊಂದಲು ಕಾರಣ ತಿಳಿದು ಬಂದಿದೆ.

ಧೋನಿಯವರ ಅಪ್ತ ವಲಯದಿಂದ ಬಂದ ಮಾಹಿತಿ ಪ್ರಕಾರ, ಧೋನಿ ಈ ವರ್ಷ ನಡೆಯಬೇಕಿದ್ದ ಟಿ-20 ವಿಶ್ವಕಪ್‍ನಲ್ಲಿ ಆಡಲು ತೀರ್ಮಾನಿಸಿದ್ದರು. ಆದರೆ ಕೊರೊನಾ ವೈರಸ್ ಕಾರಣದಿಂದ ಟಿ-20 ವಿಶ್ವಕಪ್ ಅನ್ನು ಐಸಿಸಿ ಮುಂದೂಡಿತ್ತು. ಆದರೆ ಈಗ ಟಿ-20 ವಿಶ್ವಕಪ್ ಅನ್ನು ಐಸಿಸಿ 2022ಕ್ಕೆ ನಡೆಸಲು ತೀರ್ಮಾನ ಮಾಡಿದೆ. ಹೀಗಾಗಿ ಧೋನಿಯವರು ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಹೇಳಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವಿಶ್ವಕಪ್ ಸೈಮಿ ಫೈನಲ್ ಪಂದ್ಯದ ನಂತರ ಕ್ರಿಕೆಟ್‍ನಿಂದ ದೂರ ಉಳಿದಿದ್ದ ಧೋನಿಯವರು, ವಿದಾಯ ಘೋಷಿಸುವ ಯಾವುದೇ ಸುಳಿವನ್ನು ನೀಡಿರಲಿಲ್ಲ. ಆದರೆ ಶನಿವಾರ ಸಂಜೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಹಾಕುವ ಮೂಲಕ ವಿದಾಯ ಸುದ್ದಿ ನೀಡಿದ್ದಾರೆ. ಈ ಮೂಲಕ ಧೋನಿಯನ್ನು ಮತ್ತೆ ನೀಲಿ ಜೆರ್ಸಿಯಲ್ಲಿ ನೋಡ ಬಯಸಿದ್ದ ಅವರ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಆದರೆ ಅವರು ಈ ಬಾರಿಯ ಐಪಿಎಲ್‍ನಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಅಭಿಮಾನಿಗಳು ಧೋನಿಯನ್ನು ಮೈದಾನದಲ್ಲಿ ನೋಡು ಕಾತುರದಿಂದ ಕಾಯುತ್ತಿದ್ದಾರೆ.

ಧೋನಿ ಈ ವರೆಗೆ 350 ಏಕದಿನ ಹಾಗೂ 98 ಟಿ-20 ಪಂದ್ಯಗಳನ್ನು ಆಡಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ ಧೋನಿ 10,773 ರನ್‍ಗಳನ್ನು ಕಲೆ ಹಾಕಿದ್ದಾರೆ. 10 ಶತಗಳನ್ನು ಬಾರಿಸಿದ್ದಾರೆ. ಅಲ್ಲದೆ, 73 ಅರ್ಧ ಶತಕ ಹೊಡೆದಿದ್ದಾರೆ. ಅಲ್ಲದೆ 98 ಟಿ-20 ಪಂದ್ಯಗಳಲ್ಲಿ 1,617 ರನ್‍ಗಳನ್ನು ಗಳಿಸಿದ್ದು, ಎರಡು ಅರ್ಧ ಶತಕ ಬಾರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *