ಜ್ಞಾನ ದೀವಿಗೆ- ಮಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಸುರೇಶ್ ಕುಮಾರ್ ಟ್ಯಾಬ್ ವಿತರಣೆ

Public TV
1 Min Read

ಮಂಗಳೂರು: ಪಬ್ಲಿಕ್ ಟಿವಿ ಮತ್ತು ರೋಟರಿ ಸಂಸ್ಥೆಯ ಮಹತ್ವಾಕಾಂಕ್ಷೆಯ ಯೋಜನೆ ಜ್ಞಾನ ದೇವಿಗೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದ್ದು, ಇಂದು ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಿದರು.

ಮಂಗಳೂರಿನ ವಿವಿಧ ನಾಲ್ಕು ಶಾಲೆಯ 114 ವಿದ್ಯಾರ್ಥಿಗಳಿಗೆ 57 ಟ್ಯಾಬ್ ಗಳನ್ನು ವಿತರಿಸಲಾಯಿತು. ಮಂಗಳೂರು ಮೇಯರ್ ದಿವಾಕರ್ ಪಾಂಡೇಶ್ವರ, ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಎಂಎಲ್ ಸಿ ಭೋಜೇಗೌಡ, ರೋಟರಿ ಜಿಲ್ಲೆ 3181ರ ಗವರ್ನರ್ ರಂಗನಾಥ್ ಭಟ್, ರೋಟರಿ ಜಿಲ್ಲೆ 3181 ಲಿಟ್ರಸಿ ಕಮಿಟಿ ಚೇರ್ಮೆನ್, ಜ್ಞಾನ ದೀವಿಗೆಯ ರೂವಾರಿ ಹೆಚ್.ಆರ್.ಕೇಶವ್, ಡಿಡಿಪಿಐ ಮಲ್ಲೇಸ್ವಾಮಿ ಉಪಸ್ಥಿತರಿದ್ದರು.

ಕಾರ್ಕಳದಲ್ಲಿ 306 ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು. ಟ್ಯಾಬ್‍ಗಳನ್ನು ದೇಣಿಗೆಯಾಗಿ ನೀಡಿದ ರೋಟರಿ ಕ್ಲಬ್ ಪರವಾಗಿ ರೋಟೇರಿಯನ್ ಹೆಚ್.ಆರ್.ಕೇಶವ್ ಉಪಸ್ಥಿತರಿದ್ದರು. ಚಿತ್ರದುರ್ಗದ ಹೊಸದುರ್ಗದಲ್ಲಿ 298 ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಯಿತು. ಈ ವೇಳೆ ದಾನಿ, ಶಾಲೆಯ ಹಳೆ ವಿದ್ಯಾರ್ಥಿಗಳ ಪರವಾಗಿ ಮಂಜುನಾಥ್ ಉಪಸ್ಥಿತರಿದ್ದರು. ಶಾಸಕ ಅಮರೇಗೌಡ ಬಯ್ಯಾಪುರ ಮತ್ತು ಗ್ರಾಮಸ್ಥರ ವತಿಯಿಂದ ಕುಷ್ಟಗಿಯ ಚಳಗೇರಿಯಲ್ಲಿ 64 ಮಕ್ಕಳಿಗೆ ಟ್ಯಾಬ್ ಹಂಚಲಾಯಿತು.

Share This Article
Leave a Comment

Leave a Reply

Your email address will not be published. Required fields are marked *