ಚಿಕ್ಕಬಳ್ಳಾಪುರ: ದೇಶಾದ್ಯಂತ ಕೊರೊನಾ ರೌದ್ರ ನರ್ತನ ಮುಂದುವರಿದಿದ್ದು, ರಾಜ್ಯದಲ್ಲೂ ನಿತ್ಯ ದಾಖಲೆಯ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಇದೀಗ ಖೈದಿಗಳಿಗೂ ಸೋಂಕು ವ್ಯಾಪಿಸುತ್ತಿದ್ದು, ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದ 7 ಜನ ಜನರಿಗೆ ಸೋಂಕು ತಗುಲಿದೆ.
ಅಣಕನೂರು ಗ್ರಾಮದ ಬಳಿಯ ಜಿಲ್ಲಾ ಕಾರಾಗೃಹದಲ್ಲಿನ 7 ಮಂದಿ ಖೈದಿಗಳಿಗೆ ಕೊರೊನಾ ಸೋಂಕು ತಗುಲಿದ್ದು, ಈ ಮೂಲಕ ಜೈಲಿಗೂ ಕೊರೊನಾ ಸೋಂಕು ಹಬ್ಬಿದಂತಾಗಿದೆ. ಇದರಿಂದಾಗಿ ಇತರೆ ಖೈದಿಗಳು ಹಾಗೂ ಜೈಲು ಸಿಬ್ಬಂದಿಗೆ ಆತಂಕ ಶುರುವಾಗಿದೆ.
ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಜಿಲ್ಲೆಯಲ್ಲಿ ಸಹ ಹೆಚ್ಚು ಕೇಸ್‍ಗಳು ಪತ್ತೆಯಾಗುತ್ತಿವೆ. ಶುಕ್ರವಾರ ಬರೋಬ್ಬರಿ 471 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1998 ಸಕ್ರಿಯ ಪ್ರಕರಣಗಳಿವೆ.