ಜೀವದ ಜೊತೆಗೆ ಜೀವನಾನು ಕಟ್ಟಿಕೊಳ್ಳಿ: ಸಿಟಿ.ರವಿ

Public TV
1 Min Read

– ಡಿಕೆಶಿಗೆ ರವಿ ತಿರುಗೇಟು

ಬೆಂಗಳೂರು: ಕೊರೊನಾ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಹಂತ ಹಂತವಾಗಿ ತೆರೆಯುವುದು ಒಳ್ಳೆಯ ವಿಷಯವಾಗಿದೆ. ಜೀವದ ಜೊತೆ ಜೀವನಾನು ಕಟ್ಟಿಕೊಳ್ಳಬೇಕಾಗಿದೆ ಎಂದು ಸಚಿವ ಸಿಟಿ.ರವಿ ಹೇಳಿದ್ದಾರೆ.

ಹಾಸನಾಂಬೆ ದರ್ಶನ ಪಡೆಯಲು ಬಂದಿದ್ದ ಸಿಟಿ,ರವಿ ಅವರು ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ಶಿಕ್ಷಣ ಸಂಸ್ಥೆಗಳನ್ನು ತೆರೆಯುಲು ಸೂಕ್ತ ಸಮಯವಾಗಿದೆ. ಕಾಲೇಜಿಗೆ ಕಳುಹಿಸಿದ ನಂತರ ಯಾರ ಮೇಲೂ ದೂರಬಾರದು. ಮಕ್ಕಳನ್ನು ಶಾಲೆಗೆ ಕಳುಹಿಸುವ ತೀರ್ಮಾನ ಪೋಷಕರಿಗೆ ಬಿಟ್ಟಿದ್ದಾಗಿದೆ. ಕಾಲೇಜಿನ ವಿದ್ಯಾರ್ಥಿಗಳು ತಿಳುವಳಿಕೆ ಉಳ್ಳವರಾಗಿದ್ದಾರೆ. ನಾಳೆ ದೂರಬಾರದು ಎಂದಷ್ಟೇ ಪೋಷಕರ ಪತ್ರ ಪಡೆಯುತ್ತಿದ್ದೇವೆ. ಈ ವಿಷ್ಯದಲ್ಲಿ ಜವಬ್ದಾರಿ ಮರೆಯುವುದಿಲ್ಲ, ಆತಂಕ ಪಡುವ ಅವಶ್ಯಕತೆ ಇಲ್ಲ ಎಂದಿದ್ದಾರೆ.

ಅಧಿಕಾರ ದುರುಪಯೋಗ ಆಗುತ್ತಿದೆ ಎಂಬ ಡಿಕೆಶಿ ಹೇಳಿಕೆ ಕುರಿತಾಗಿ ಮಾತನಾಡಿದ ಸಿಟಿ.ರವಿ, ದುರುಪಯೋಗದ ಪರಮಾವಧಿ ಮುಟ್ಟಿದವರು ಡಿಕೆಶಿ ಆಗಿದ್ದಾರೆ. ಆ ಪರಮಾವಧಿ ಕಾರಣಕ್ಕೆ ಇಂದು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ಉಳಿದವರು ಹಾಗೇ ಇರುತ್ತಾರೆ ಎಂದು ಅವರು ಭಾವಿಸಿದ್ದಾರೆ. ಜನಸ್ನೇಹಿ ಆಡಳಿತ ನೀಡೋದು ಬಿಜೆಪಿಯ ಆಡಳಿತವಾಗಿದೆ. ಕಾಂಗ್ರೆಸ್ ಅವರಿಗಲ್ಲದೆ ಇನ್ಯಾರಿಗೂ ಅಧಿಕಾರ ದುರುಪಯೋಗದ ವಿಷಯದಲ್ಲಿ ನಂಬರ್ ಒನ್ ಸರ್ಟಿಫಿಕೇಟ್ ಸಿಗುವುದಿಲ್ಲ. ಎ ಯಿಂದ ಝಡ್ ವರೆಗೂ ಅಧಿಕಾರ ದುರುಪಯೋಗ ಪಡಿಸಿಕೊಂಡ ಕೀರ್ತಿ, ಅಪಕೀರ್ತಿ ಇದ್ದರೆ ಅದು ಕಾಂಗ್ರಸ್ಸಿಗೆ ಮಾತ್ರ ಇದನ್ನು ಅರ್ಥ ಮಾಡಿಕೊಂಡು ಡಿಕೆ.ಶಿವಕುಮಾರ್ ಮಾತನಾಡಬೇಕು ಎಂದು ತಿರುಗೇಟು ಕೊಟ್ಟಿದ್ದಾರೆ. ಇದನ್ನು ಓದಿ: ಬೆಳ್ಳಂಬೆಳಗ್ಗೆ ಪತ್ನಿ ಜೊತೆ ಹಾಸನಾಂಬೆಯ ದರ್ಶನ ಪಡೆದ ಡಿಕೆಶಿ

ಮುಖ್ಯಮಂತ್ರಿಗಳು ಪಕ್ಷಕ್ಕೆ ಬರುವ ಸಂದರ್ಭದಲ್ಲಿ ಯಾರ್ಯಾರಿಗೆ ವಾಗ್ದಾನ ನೀಡಿದ್ದಾರೋ ಅದನ್ನೆಲ್ಲ ಈಡೇರಿಸಿದ್ದಾರೆ. ಮುನಿರತ್ನ ಅವರಿಗೆ ಏನು ವಾಗ್ದಾನ ನೀಡಿದ್ದಾರೋ ನನಗೆ ಗೊತ್ತಿಲ್ಲ. ಕೊಟ್ಟಿರುವುದನ್ನು ಈಡೇರಿಸುತ್ತಾರೆ. ಹಾಸನಕ್ಕೂ ಸಚಿವ ಸ್ಥಾನ ಸಿಗಲಿ, ಚಿಕ್ಕಮಗಳೂರಿಗೂ ಸಚಿವ ಸ್ಥಾನ ಒಲಿದು ಬರಲಿ ಎಂದು ಆಶಿಸುತ್ತೇನೆ. ಸಚಿವ ಸಂಪುಟ ಪುನಾರಚನೆ ವಿಷಯದಲ್ಲಿ ಅಸಮಾಧಾನ ಎಂಬುದು ಮನಸ್ಥಿತಿ ಆಧರಿಸಿರುತ್ತೆ. ಅದನ್ನು ಸಮಾಧಾನ ಮಾಡಲು ಬರುತ್ತೆ ಸಮಾಧಾನ ಮಾಡ್ತೇವೆ ಎಂದು ಮುನಿರತ್ನ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರವಾಗಿ ಮಾತನಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *