ಜಿಲ್ಲಾಸ್ಪತ್ರೆಯಲ್ಲಿ ಬೆಡ್ ಖಾಲಿನೇ ಇಲ್ವಂತೆ- ಸಿಬ್ಬಂದಿ ಕುಂಟು ನೆಪಕ್ಕೆ ರೋಗಿ ನರಳಾಟ

Public TV
2 Min Read

– ಇದು ಆರೋಗ್ಯ ಸಚಿವರ ಕ್ಷೇತ್ರದ ದುಸ್ಥಿತಿ

ಚಿತ್ರದುರ್ಗ: ಸರ್ಕಾರಿ ಆಸ್ಪತ್ರೆ ಬಡ ರೋಗಿಗಳ ಪಾಲಿಗೆ ಸಂಜೀವಿನಿ ಅಂತ ಎಲ್ಲರು ಭಾವಿಸಿದ್ದಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ತವರು ಜಿಲ್ಲೆಯ ಈ ಆಸ್ಪತ್ರೆ ದುಸ್ಥಿತಿ ನೋಡಿದ್ರೆ ಎಂಥವರೂ ಒಮ್ಮೆ ಬೆಚ್ಚಿ ಬೀಳ್ತಾರೆ.

ಹೌದು. ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಘಟಕದ ಮುಂಭಾಗದಲ್ಲೇ ನೋವು ನೋವು ಅಂತ ರೋಗಿಯೊಬ್ಬರು ನರಳಾಡಿದ್ದಾರೆ. ಬೆಡ್ ಖಾಲಿ ಇಲ್ಲ ಅಂತ ನೆಪ ಹೇಳಿ, ಅಪಘಾತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಯ ಮುಂಭಾಗದಲ್ಲಿಯೇ ಸ್ಟ್ರಚರ್‍ನಲ್ಲೇ ಬಿಟ್ಟು ಹೋಗಿ ಆಸ್ಪತ್ರೆ ಸಿಬ್ಬಂದಿ ಮೋಜು-ಮಸ್ತಿಯಲ್ಲಿ ತೊಡಗಿದ್ದಾರೆ.

ಒಟ್ಟಿನಲ್ಲಿ ಈ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಅಂತ ಬರೋ ರೋಗಿಗಳ ಪಾಲಿಗೆ ಇಲ್ಲಿನ ಸಿಬ್ಬಂದಿ ನರಕ ತೋರಿಸ್ತಿದ್ದಾರೆ. ಕೊರೊನಾ ನೆಪ ಹೇಳ್ಕೊಂಡು ರೋಗಿಗಳನ್ನೆಲ್ಲ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿ, ಆಸ್ಪತ್ರೆಯನ್ನೇ ಬಾರ್ ಮಾಡ್ಕೊಂಡು ಫುಲ್ ಎಂಜಾಯ್ ಮಾಡ್ತಿದ್ದಾರೆ. ಪಬ್ಲಿಕ್ ಟಿವಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿ ಎದ್ನೋ, ಬಿದ್ನೊ ಅಂತ ಆಸ್ಪತ್ರೆ ಸಿಬ್ಬಂದಿ ಓಡಿ ಹೋಗಿದ್ದಾರೆ. ಕಂಪ್ಯೂಟರ್ ಆಪರೇಟರ್ ಅಜಯ್ ಎಂಬ ನೌಕರ, ಎದ್ನೊ, ಬಿದ್ನೊ ಅಂತ ಓಡಿ ಹೋಗಿದ್ದು, ಕ್ಷಣಮಾತ್ರದಲ್ಲಿ ಪಾರ್ಟಿ ಬಿಟ್ಟು ಜಾಗ ಖಾಲಿ ಮಾಡಿದ. ಈ ವೇಳೆ ಆ ಸ್ಥಳದಲ್ಲಿದ್ದ ಸ್ಟಾಫ್ ನರ್ಸ್ ಮಹಾಲಿಂಗಪ್ಪ ಕೂಡ ಟೈಟಾಗಿ ಗೊಂದಲದ ಹೇಳಿಕೆ ನೀಡಿದ್ದು, ಕರ್ತವ್ಯ ಲೋಪಕ್ಕೆ ಸಾಕ್ಷಿಯಾಗಿದೆ.

ಪಬ್ಲಿಕ್ ಟಿವಿ ಕ್ಯಾಮರಾ ಕಂಡೊಡನೆ ಎಚ್ಚೆತ್ತ ಆಸ್ಪತ್ರೆ ಸಿಬ್ಬಂದಿ ತಮ್ಮ ಪಾಡಿಗೆ ತಾವು ಏನು ಆಗೇ ಇಲ್ಲವೆಂಬಂತೆ ತಮ್ಮ ತಮ್ಮ ಕರ್ತವ್ಯಕ್ಕೆ ಹಾಜರಾಗಿದ್ದು, ಬೀದಿಯಲ್ಲಿದ್ದ ರೋಗಿಯನ್ನು ತಕ್ಷಣ ಖಾಲಿ ಇದ್ದ ವಾರ್ಡ್‍ಗೆ ಶಿಫ್ಟ್ ಮಾಡಿದ್ದಾರೆ. ಇದರಿಂದಾಗಿ ರೋಗಿಯ ಸಂಬಂಧಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಸ್ಪತ್ರೆ ಸರ್ಜನ್ ಬಸವರಾಜ್, ಆಸ್ಪತ್ರೆಯಲ್ಲಿ ರಾತ್ರಿವೇಳೆ ಸರಿಯಾಗಿ ಕೆಲಸ ನಿರ್ವಹಿಸದೇ ಕರ್ತವ್ಯ ಲೋಪ ತೋರಿರುವ ಸಿಬ್ಬಂದಿ ವಿರುದ್ಧ ವಿಚಾರಣೆ ನಡೆಸಿ, ಅಂತವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಒಟ್ಟಾರೆ ರೋಗಿಗಳ ಹಿತ ಕಾಯಬೇಕಾದ, ಆಸ್ಪತ್ರೆ ಸಿಬ್ಬಂದಿ ಮಾಡೋ ಕೆಲಸ ಬಿಟ್ಟು ಜಿಲ್ಲಾಸ್ಪತ್ರೆಯಲ್ಲಿ ಮೋಜು-ಮಸ್ತಿ ಮಾಡಿ ಕರ್ತವ್ಯ ಲೋಪ ಎಸಗಿದ್ದಾರೆ. ಇನ್ನಾದರೂ ಆರೋಗ್ಯ ಸಚಿವರು ತಮ್ಮ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ನಡೆಯುತ್ತಿರೋ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕ್ತಾರಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *