ಚೊಚ್ಚಲ ಸಿನಿಮಾಗೆ ಪ್ರೋತ್ಸಾಹ – ಪ್ರೇಕ್ಷಕರಿಗೆ ಧನ್ಯವಾದ ಹೇಳಿದ ರಿಷಭ್ ಶೆಟ್ಟಿ

Public TV
2 Min Read

ಬೆಂಗಳೂರು: ರಿಷಭ್ ಶೆಟ್ಟಿ ನಿರ್ದೇಶನದ ಮೊದಲ ಸಿನಿಮಾ ರಿಕ್ಕಿ ಬಿಡುಗಡೆಯಾಗಿ 5 ವರ್ಷ ಪೂರೈಸಿದೆ. ಈ ಸಂತೋಷವನ್ನು ರಿಷಭ್ ಶೆಟ್ಟ ಟ್ವೀಟ್ ಮಾಡುವ ಮೂಲಕವಾಗಿ ಹಂಚಿಕೊಂಡಿದ್ದಾರೆ.

ಬಹುವರ್ಷದ ಕನಸು, ಚೊಚ್ಚಲ ಕೂಸು, ರಿಕ್ಕಿ ಬಿಡುಗಡೆಯಾಗಿ ಇಂದಿಗೆ 5 ವರ್ಷ. ಮೊದಲ ಸಿನಿಮಾ ಕಲಿಸಿದ ಪಾಠ, ಕೊಟ್ಟ ಅನುಭವ ಅಪಾರ. ರಕ್ಷಿತ್, ಹರಿಪ್ರಿಯ, ಪ್ರಮೋದ್, ಅಚ್ಯುತಣ್ಣ ರಂತಹ ಅದ್ಭುತ ನಟರ ಜೊತೆ ಕೆಲಸ ಮಾಡಿದ್ದು ಅದೃಷ್ಟ. ಅವರೆಲ್ಲ ಇಂದಿಗೂ ಜೀವದ ಗೆಳೆಯರು. ನಿರ್ಮಾಪಕರಾದ ಎಸ್‍ವಿ ಬಾಬು ಅವರಿಗೆ ಸದಾ ಋಣಿ. ಎಲ್ಲಕ್ಕಿಂತ ಮಿಗಿಲಾಗಿ ಚಿತ್ರವನ್ನು ಮೆಚ್ಚಿ, ಬೆನ್ನುತಟ್ಟಿದ ಪ್ರೇಕ್ಷಕ ಪ್ರಭುಗಳಿಗೆ ಧನ್ಯವಾದಗಳು ಎಂದು ರಿಷಭ್ ಟ್ವೀಟ್ ಮಾಡಿದ್ದಾರೆ.

ರಿಕ್ಕಿ ಸಿನಿಮಾ 5 ವರ್ಷ ಪೂರೈಸಿದ ಸಂತೋಷನ್ನು ನಾವು ಹಂಚುಕೊಳ್ಳುತ್ತಿದ್ದೇವೆ. ಈ ಸಿನಿಮಾದಿಂದ ನಾವು ಕಲಿತಿರುವ ಪಾಠ ಮತ್ತು ಅನುಭವವನ್ನು ನಾವು ನೆನೆಪಿಸಿಕೊಳ್ಳುತ್ತೇನೆ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಡಿದ್ದಾರೆ.

ರಿಕ್ಕಿ ಸಿನಿಮಾ 2016, ಜನವರಿ 22 ರಂದು ತೆರೆಯ ಮುಂದೆ ಬಂದಿತ್ತು. ಈ ಸಿನಿಮಾಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಈ ಸಿನಿಮಾ ಪರದೆ ಮೇಲೆ ಅಭಿಮಾನಿಗಳನ್ನು ರಂಜಿಸಿ 5 ವರ್ಷಗಳನ್ನು ಪೂರೈಸಿದೆ.

ಎಸ್‍ವಿ ಬಾಬು ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ಹರಿಪ್ರಿಯ ಮುಖ್ಯ ಭುಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ರವಿ ಕಾಳೆ, ವೀಣಾ ಸುಂದರ್, ಸಾಧು ಕೋಕಿಲಾ ಸೇರಿದಂತೆ ತಾರಾಬಳಗವೇ ಸಿನಿಮಾದಲ್ಲಿ ಕಾಣಿಸಿಕೊಂಡಿತ್ತು. ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದರು. ಚಿತ್ರಕ್ಕೆ ಕಿಚ್ಚ ಸುದೀಪ್ ಧ್ವನಿ ನೀಡಿದ್ದರು. ಕಥೆ-ಚಿತ್ರಕಥೆ ಬರೆದು ರಿಷಭ್ ಶೆಟ್ಟಿ ನಿರ್ದೇಶಿಸಿದ್ದರು.

ರಿಕ್ಕಿ ಸಿನಿಮಾ ಅಂದು ತಂದು ಕೊಟ್ಟಿರುವ ಹಿಟ್ ಅನ್ನು ಹರಿಪ್ರಿಯಾ ರಿಷಭ್ ಶೆಟ್ಟವರ ಟ್ವೀಟ್‍ಗೆ ರೀಟ್ವೀಟ್ ಮಾಡಿ ಹಾರ್ಟ್ ಸಿಂಬಲ್ ಹಾಕಿದ್ದಾರೆ. ರಿಷಭ್ ಶೆಟ್ಟ, ರಕ್ಷಿತ್ ಶೆಟ್ಟಿ ಟ್ವೀಟ್ ಮಾಡುವ ಮೂಲಕವಾಗಿ ತಮ್ಮ ಸಿನಿಮಾದ ಯಶಸ್ಸಿನ ಹಾದಿಯ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *