ಚೆನ್ನೈ, ಡೆಲ್ಲಿ ತಂಡಗಳ ಬಲಾಬಲ- ಧೋನಿ ಬ್ಯಾಟಿಂಗ್ ಕ್ರಮಾಂಕ ಬದಲಾಗುತ್ತಾ?

Public TV
2 Min Read

ದುಬೈ: ಐಪಿಎಲ್ 2020ರ ಆವೃತ್ತಿಯಲ್ಲಿ ಗೆಲುವು ಮತ್ತು ಸೋಲಿನ ರುಚಿ ಪಡೆದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಂದು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಿಯ ಡೆಬ್ಯು ಪಂದ್ಯದಲ್ಲಿ ಸೂಪರ್ ಓವರ್ ನಲ್ಲಿ ಗೆಲುವು ಪಡೆದಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೂ 21 ಬಾರಿ ಚೆನ್ನೈ ತಂಡದೊಂದಿಗೆ ಮುಖಾಮುಖಿಯಾಗಿದೆ. ಇದರಲ್ಲಿ ಚೆನ್ನೈ ತಂಡ 15 ಪಂದ್ಯಗಳಲ್ಲಿ ಗೆಲುವು ಪಡೆದುಕೊಂಡಿದೆ.

ಕಳೆದ ಪಂದ್ಯದಲ್ಲಿ ನಂ.7 ಬ್ಯಾಟಿಂಗ್ ಕ್ರಮದಲ್ಲಿ ಕಣಕ್ಕಿಳಿದು ಭಾರೀ ಟೀಕೆಗೆ ಗುರಿಯಾಗಿದ್ದ ಧೋನಿ ಈ ಪಂದ್ಯದಲ್ಲಿ ಬಡ್ತಿ ಪಡೆಯುತ್ತಾರಾ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ. ಹರ್ಭಜನ್ ಸಿಂಗ್ ಗೈರು ಹಾಜರಿಯಲ್ಲಿ ಚೆನ್ನೈ ತಂಡದ ಬೌಲಿಂಗ್ ಪಡೆ ಬಲಗೈ ಬ್ಯಾಟ್ಸ್ ಮನ್‍ಗಳನ್ನು ಹೇಗೆ ಎದುರಿಸಲಿದೆ ಎಂಬ ಪ್ರಶ್ನೆಗೆ ಉತ್ತರ ಲಭಿಸಬೇಕಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ಬೌಲಿಂಗ್‍ಗಳು ದುಬಾರಿಯಾಗಿದ್ದರು.

ಸ್ಯಾಮ್ ಕರ್ರನ್ ಚೆನ್ನೈ ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದಾರೆ. ಇವರ ಬೌಲಿಂಗ್ ತಂಡದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದೆ. ಐಪಿಎಲ್ ಟೂರ್ನಿಯ ಪವರ್ ಪ್ಲೇಗಳಲ್ಲಿ ಹೆಚ್ಚು ವಿಕೆಟ್ ಪಡೆದಿರುವ ಚಹರ್ ತಮ್ಮ ಫಾರ್ಮ್ ಗೆ ಮರಳಬೇಕಿದ್ದು, ಚೆನ್ನೈ ಭರವಸೆಯನ್ನಟ್ಟಿದೆ.

ಕಳೆದ ಪಂದ್ಯದಲ್ಲಿ ಧೋನಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸುವ ಮೂಲಕ ತಮ್ಮ ಸಾಮಥ್ರ್ಯವನ್ನು ತೋರಿದ್ದು, ಅಯ್ಯರ್ ಹೇಗೆ ಅವರನ್ನು ನಿಯಂತ್ರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ರಾಯುಡು ಅಲಭ್ಯರಾಗಿರುವ ಕಾರಣ ಮತ್ತೊಮ್ಮೆ ಗಾಯಕ್ವಾಡ್ ಅವರಿಗೆ ಅವಕಾಶ ಲಭಿಸುವ ಸಾಧ್ಯತೆ ಇದೆ. ಡುಪ್ಲೆಸಿಸ್ ಚೆನ್ನೈ ಪರ ಏಕಾಂಗಿ ಹೋರಾಟ ನಡೆಸುತ್ತಿದ್ದು, ರೈನಾ ಅನುಪಸ್ಥಿತಿ ತಂಡವನ್ನು ಕಾಡುತ್ತಿದೆ.

ಇತ್ತ ಶ್ರೇಯರ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ತಂಡ ಉತ್ತಮ ಆತ್ಮವಿಶ್ವಾಸವನ್ನು ಹೊಂದಿದೆ. ಆಲ್‍ರೌಂಡರ್ ಸ್ಟೋಯ್ನಿಸ್, ರಬಾಡ ಉತ್ತಮ ಪ್ರದರ್ಶನ ನೀಡಿ ಭರವಸೆ ಮೂಡಿಸಿದ್ದಾರೆ. ಆದರೆ ಕಳೆದ ಪಂದ್ಯದಲ್ಲಿ ಗಾಯಗೊಂಡಿರುವ ಅಶ್ವಿನ್ ಅಲಭ್ಯರಾಗಿದ್ದು, ತಂಡಕ್ಕೆ ಬಹುದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಧವನ್ ಚೆನ್ನೈ ವಿರುದ್ಧ 122.56ರ ಸ್ಟ್ರೈಕ್ ರೇಟ್‍ನಲ್ಲಿ 641 ರನ್ ಗಳಿಸಿದ್ದಾರೆ. ಉಳಿದಂತೆ ಐಪಿಎಲ್ ಟೂರ್ನಿಯಲ್ಲಿ ಇದುವರೆಗೂ ಡೆಲ್ಲಿ ತಂಡದ ಒಮ್ಮೆಯೂ ಫೈನಲ್ ಪ್ರವೇಶ ಮಾಡಿಲ್ಲ. 4 ಬಾರಿ ಸೆಮಿಸ್/ಪ್ಲೇಅಫ್ ತಲುಪಿದ್ದರೆ, ಚೆನ್ನೈ 3 ಬಾರಿ ಪ್ರಶಸ್ತಿಯನ್ನು ಗೆದ್ದಿದೆ.

ಸಂಭಾವ್ಯ ತಂಡ:
ಚೆನ್ನೈ: ಧೋನಿ (ನಾಯಕ), ವಾಟ್ಸನ್, ಮುರಳಿ ವಿಜಯ್, ಡುಪ್ಲೆಸಿಸ್, ಕರ್ರನ್, ಋತುರಾಜ್ ಗಾಯಕ್ವಾಡ್, ಕೇದಾರ್ ಜಾದವ್, ಜಡೇಜಾ, ಚಹರ್, ಪಿಯೂಷ್ ಚಾವ್ಲಾ, ಲುಂಗಿ ಎನ್’ಗಿಡಿ.

ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಅಯ್ಯರ್ (ನಾಯಕ), ರಿಷಬ್ ಪಂತ್, ಧವನ್, ಪೃಥ್ವಿ ಶಾ, ಅಕ್ಷರ್, ರಬಡಾ, ಸ್ಟೋಯ್ನಿಸ್, ಮೋಹಿತ್ ಶರ್ಮಾ/ಅವೇಶ್ ಖಾನ್, ಹೆಟ್ಮಾಯರ್, ಅಕ್ಷರ್ ಪಟೇಲ್, ಅನ್ರಿಕ್.

Share This Article
Leave a Comment

Leave a Reply

Your email address will not be published. Required fields are marked *