ಚಿರಂಜೀವಿ ಸರ್ಜಾ ನಿಧನ – ಶೋಭಾ ಡೇ ಎಡವಟ್ಟು

Public TV
2 Min Read

ಬೆಂಗಳೂರು: ಖ್ಯಾತ ಲೇಖಕಿ, ಅಂಕಣಗಾರ್ತಿ ಶೋಭಾ ಡೇ ಚಿರಂಜೀವಿ ಸರ್ಜಾ ನಿಧನ ಸುದ್ದಿಯನ್ನು ಟ್ವೀಟ್ ಮಾಡುವ ಸಂದರ್ಭದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ಸಂಜೆ 4 ಗಂಟೆ 8 ನಿಮಿಷಕ್ಕೆ ಮತ್ತೊಬ್ಬ ಶೈನಿಂಗ್ ಸ್ಟಾರ್ ಹೋಗಿದ್ದಾರೆ. ಎಂತ ದುರಂತ ಅಂತ್ಯ. ದು:ಖವನ್ನು ಬರಿಸುವ ಶಕ್ತಿ ಆ ಕುಟುಂಬ ಸದಸ್ಯರಿಗೆ ಸಿಗಲಿ ಎಂದು ಚಿರುಸರ್ಜಾ  ಟ್ಯಾಗ್ ಮಾಡಿ ಮೆಗಾ ಸ್ಟಾರ್ ಚಿರಂಜೀವಿ ಅವರ ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ.

ಈ ಟ್ವೀಟ್ ನೋಡಿದ ಕೂಡಲೇ ನೆಟ್ಟಿಗರು ಮೆಗಾಸ್ಟಾರ್ ಚಿರಂಜೀವಿ ಮೃತಪಟ್ಟಿಲ್ಲ. ಕನ್ನಡ ಚಿರಂಜೀವಿ ಸರ್ಜಾ ನಿಧನರಾಗಿದ್ದಾರೆ ಎಂದು ಹೇಳಿ ಶೋಭಾ ಡೇ ಅವರಿಗೆ ತಿಳಿಸಿದ್ದಾರೆ.

ಎಡವಟ್ಟು ತಿಳಿಯುತ್ತಿದ್ದಂತೆ ಶೋಭಾ ಡೇ ತಾವು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದಾದ ಬಳಿಕ ಚಿರ ಸರ್ಜಾಗೆ ಸಂಬಂಧಿಸಿದ ಯಾವುದೇ ಟ್ವೀಟ್ ಅನ್ನು ಶೋಭಾ ಡೇ ಮಾಡಿಲ್ಲ.

ಜನ ಸಾಮಾಜಿಕ ಜಾಲತಾಣದಲ್ಲಿ ಶೋಭಾ ಡೇ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬಾಲಿವುಡ್ ಸ್ಟಾರ್ ಗಳ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರುತ್ತದೆ. ಆದರೆ ದಕ್ಷಿಣ ಭಾರತ ಸ್ಟಾರ್ ಗಳ ಬಗ್ಗೆ ನಿಮಗೆ ಎಷ್ಟು ಪರಿಚಯವಿದೆ ಎನ್ನುವುದು ನಿಮ್ಮ ಟ್ವೀಟ್ ನಿಂದಲೇ ತಿಳಿಯುತ್ತದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

https://twitter.com/nbollapr/status/1269654209063944195

ಒಟ್ಟು 22 ಚಿತ್ರಗಳಲ್ಲಿ ನಟಿಸಿದ್ದ ಚಿರುಗೆ ಕೇವಲ 39 ವರ್ಷವಾಗಿತ್ತು. ಹಠಾತ್ ಆಗಿ ಇಷ್ಟು ಚಿಕ್ಕ ವಯಸ್ಸಿಗೇ ನಿಧನರಾಗಿರೋದು ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ಚಿತ್ರರಂಗದ ಎಲ್ಲಾ ಹಿರಿಯ, ಕಿರಿಯ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ, ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ರು. ಅಯ್ಯೋ.. ಇದೊಂದು ಅನ್ಯಾಯದ ಸಾವು, ಕ್ರೂರ ವಿಧಿಯಾಟ ಅಂತ ಹೃದಯ ಕಿತ್ತುಬರುವಂತೆ ಭಾವುಕರಾಗಿದ್ದಾರೆ. ಅದರಲ್ಲೂ 2 ವರ್ಷದ ಹಿಂದೆಯಷ್ಟೇ ಮದುವೆಯಾಗಿದ್ದ ಪತ್ನಿ ಮೇಘನಾ ಇದೀಗ ಗರ್ಭಿಣಿಯಾಗಿದ್ದು ಎಲ್ಲರೂ ಮರುಕಪಟ್ಟಿದ್ದಾರೆ.

https://twitter.com/Naveen_Guptaa/status/1269656507651469312

ಶನಿವಾರ ರಾತ್ರಿಯೇ ಚಿರುಗೆ ಎದೆನೋವು ಕಾಣಿಸಿಕೊಂಡಿತ್ತು. ಇಂದು ಮಧ್ಯಾಹ್ನ ಕೂಡ ಮತ್ತೆ ಎದೆನೋವು ಕಾಣಿಸಿಕೊಂಡಿದೆ. ಬಳಿಕ ಜಯನಗರದ ಖಾಸಗಿ ಆಸ್ಪತ್ರೆ ಸಾಗರ್ ಅಪೋಲೋಗೆ ದಾಖಲಿಸಿದಾಗ ಅಲ್ಲಿ ಹೃದಯಾಘಾತವಾಗಿ ನಿಧನರಾಗಿದ್ದಾರೆ.

ಜಯನಗರದ ಆಸ್ಪತ್ರೆಯಿಂದ ಬಸವನಗುಡಿಯ ಚಿರು ನಿವಾಸಕ್ಕೆ ಪಾರ್ಥಿವ ಶರೀರವನ್ನು 8.15ರ ಹೊತ್ತಿಗೆ ಶಿಫ್ಟ್ ಮಾಡಲಾಯಿತು. ಈಗ ಬಸವನಗುಡಿಯ ನಿವಾಸದ ಬಳಿ ಇಡಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *