ಲಕ್ನೋ: ಅಕ್ರಮವಾಗಿ ಚಿನ್ನದ ಬೋಟ್ ಸಾಗಿಸುತ್ತಿದ್ದ ಐವರನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಪೊಲೀಸರು ಸುಮಾರು ಒಂದೂವರೆ ಕೆಜಿ ತೂಕದ ಬೋಟ್ ವಶಕ್ಕೆ ಪಡೆದುಕೊಂಡಿದ್ದಾರೆ.
ತಿಲಕ್ ಸಿಂಗ್, ಸೂರಜ್ ವರ್ಮಾ, ಧೀರೇಂದ್ರ ಪಾಲ್, ವಿಮಲೇಶ್ ಕುಮಾರ್ ಮತ್ತು ರಾಮಧನ್ ಬಂಧಿತರು. ಪ್ರಯಾಗ್‍ರಾಜ್ ಪೊಲೀಸರಿಗೆ ಕೆಲವರು ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಚಿನ್ನ ಸಹಿತ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರು ಪ್ರಯಾಗ್‍ರಾಜ್ ಮತ್ತು ಕೌಶಾಂಬಿ ನಿವಾಸಿಗಳು ಎಂದು ವರದಿಯಾಗಿದೆ. ಇದನ್ನೂ ಓದಿ: ಮಹಿಳೆಯ ಗುಪ್ತಾಂಗದಲ್ಲಿ 1.3 ಕೆಜಿ ಚಿನ್ನ ಪತ್ತೆ- ಮೂವರ ಬಂಧನ
ಅಸ್ಸಾಂನಿಂದ ಚಿನ್ನ ತಂದಿದ್ರು: ಬಂಧಿತರು ಚಿನ್ನವನ್ನು ಅಸ್ಸಾಂನಿಂದ ತಂದಿದ್ದರು ಎಂದು ತನಿಖೆ ವೇಳೆ ಹೇಳಿದ್ದಾರೆ. ಮೊದಲಿಗೆ ತಾವೇ ಹಣ ನೀಡಿ ಖರೀದಿಸಿದ್ದು ಎಂದು ಹೇಳಿದ್ದರು. ಆದ್ರೆ ಪೊಲೀಸರು ದಾಖಲೆ ಕೇಳಿದಾಗ ಉತ್ತರ ನೀಡಿಲ್ಲ. ಅಸ್ಸಾಂನಿಂದ ತಂದ ಚಿನ್ನವನ್ನು ಉತ್ತರ ಪ್ರದೇಶದಲ್ಲಿ ಮಾರಲು ಮುಂದಾಗಿದ್ದರು. ಅನುಮಾನ ಬರದಿರಲಿ ಎಂದು ಚಿನ್ನವನ್ನು ಬೋಟ್ ರೂಪದಲ್ಲಿ ಮಾಡಿಸಿಕೊಂಡಿದ್ದರು. ಇದನ್ನೂ ಓದಿ: ಮಂಚದಾಟಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಳು – ಮಂಕಿ ಕ್ಯಾಪ್‍ನಿಂದ ತಗ್ಲಾಕೊಂಡ ಗ್ಯಾಂಗ್