ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಇಂದು ಅಹಮ್ಮದಾಬಾದ್, ಹೈದರಾಬಾದ್ ಹಾಗೂ ಪೂನಾದಲ್ಲಿ ಸಿದ್ಧವಾಗಿರುವ ಕೋವಿಡ್ ವ್ಯಾಕ್ಸಿನ್ ಕೋಲ್ಡ್ ಸ್ಟೋರೇಜ್ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಬೆನ್ನಲ್ಲೇ ಮಧ್ಯಕರ್ನಾಟಕದ ಪ್ರಮುಖ ಜಿಲ್ಲೆ ಎನಿಸಿರುವ ಕೋಟೆನಾಡು ಚಿತ್ರದುರ್ಗದಲ್ಲೂ ಸಹ ರೀಜನಲ್ ವ್ಯಾಕ್ಸಿನ್ ಸ್ಟೋರೇಜ್ ಸೆಂಟರ್ ತೆರೆಯಲು ಆರೋಗ್ಯ ಇಲಾಖೆ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಚಿತ್ರದುರ್ಗದ ಡಿಹೆಚ್ ಓ ಕಚೇರಿಯಲ್ಲಿ ವ್ಯಾಕ್ಸಿನ್ ಸಂಗ್ರಹಣ ಘಟಕ ತೆರೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಈ ವ್ಯಾಕ್ಸಿನ್ ಸೆಂಟರ್ ನಲ್ಲಿ ಸುಮಾರು 30 ಲಕ್ಷ ದೋಸ್ ನಷ್ಟು ವ್ಯಾಕ್ಸಿನ್ ಸಂಗ್ರಹಿಸಿಡುವ ಸಾಮಥ್ರ್ಯವಿದೆ. ಅಲ್ಲದೇ ಚಿತ್ರದುರ್ಗದಿಂದ ಮಧ್ಯಕರ್ನಾಟಕದಲ್ಲಿರುವ ಶಿವಮೊಗ್ಗ, ಬಳ್ಳಾರಿ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ವ್ಯಾಕ್ಸಿನ್ ಸಪ್ಲೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕರ್ನಾಟಕದ ಮಧ್ಯಭಾಗದಲ್ಲಿರುವ ಚಿತ್ರದುರ್ಗದಿಂದ ಬಹುತೇಕ ಎಲ್ಲಾ ಜಿಲ್ಲೆಗಳಿಗೂ ವ್ಯಾಕ್ಸಿನ್ ಸಪ್ಲೆ ಮಾಡಲು ಅನುಕೂಲವಾಗಬಹುದೆಂಬ ಉದ್ದೇಶದಿಂದ ಇಲ್ಲಿ ವ್ಯಾಕ್ಸಿನ್ ಸಂಗ್ರಹಣ ಕೇಂದ್ರ ತೆರೆಯಲಾಗಿದೆ ಎಂದು ಚಿತ್ರದುರ್ಗ ಡಿಹೆಚ್ ಓ ಡಾ. ಪಾಲಾಕ್ಷ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.