ಚಿಕ್ಕಬಳ್ಳಾಪುರದಲ್ಲಿ ಹಾಫ್ ಲಾಕ್‍ಡೌನ್ – ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್

Public TV
2 Min Read

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿ, ದಿನಸಿ, ಔಷಧ ಹಾಗೂ ಕಟ್ಟಡ ಸಾಮಗ್ರಿಗಳ ಮಾರಾಟ ಮಾಡುವ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಶಾಪ್ ಗಳನ್ನು ಬಂದ್ ಮಾಡಿಸಲಾಗಿದೆ.

ಜಿಲ್ಲೆಯಲ್ಲಿ ಕೊರೊನಾ ರಣಕೇಕೆ ಹಾಕುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆ ಸ್ವಯಂಪ್ರೇರಿತವಾಗಿ ಅತ್ಯವಶಕವಲ್ಲದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದೆ. ನಗರ ಪ್ರದೇಶಗಳಲ್ಲಿರುವ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡುತ್ತಿರುವರುವ ಪೊಲೀಸರು, ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಜನರ ದಟ್ಟಣೆ ತಡೆಯುವ ಹಾಗೂ ಕೊರೊನಾ ಸೋಂಕಿಗೆ ಕಡಿವಾಣ ಹಾಕುವ ಸಲುವಾಗಿ ಜಿಲ್ಲಾಡಳಿತ ಈ ತೀರ್ಮಾನ ಕೈಗೊಂಡಿದೆ. ಸರ್ಕಾರದ ಆದೇಶದಂತೆ ಈ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗುತ್ತಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಮಾಹಿತಿ ನೀಡಿದ್ದಾರೆ

ಚಿಕ್ಕಬಳ್ಳಾಪುರ ನಗರದ ಗಂಗಮ್ಮ ಗುಡಿ ಬಜಾರ್ ರಸ್ತೆಯಲ್ಲಿರುವ 150 ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳನ್ನು ಸಂಪೂರ್ಣ ಬಂದ್ ಮಾಡಿಸಲಾಗಿದೆ. ಮೇ 4 ರವರೆಗೆ ಪುನಃ ತೆರೆಯದಂತೆ ಸೂಚನೆ ನೀಡಲಾಗಿದೆ. ಆದರೆ ಏಕಾಏಕಿ ಬಂದು ಯಾವುದೇ ಮನ್ಸೂಚನೆ ಆದೇಶ ಇಲ್ಲದೆ ಜ್ಯುವೆಲ್ಲರಿ ಶಾಪ್ಸ್ ಬಂದ್ ಮಾಡಿಸ್ತಿರೋದಕ್ಕೆ ಜ್ಯುವೆಲ್ಲರಿ ಅಂಗಡಿ ಮಾಲೀಕರು ಆಕ್ರೋಶ ಹೊರಹಾಕಿದ್ದಾರೆ. ಮದುವೆಗೆ ಅನುಮತಿ ಕೊಟ್ಟು ನಮ್ಮನ್ನು ಬಂದ್ ಮಾಡಿಸಿದರೆ ಮದುವೆ ಮಾಡುವವರು ತಾಳಿ, ಕಾಲು ಉಂಗುರ ಖರೀದಿಗೆ ಎಲ್ಲಿಗೆ ಹೋಗಬೇಕು? ಈಗಾಗಲೇ ಅರ್ಡರ್ ಮಾಡಿರುವ ಒಡವೆ ತೆಗೆದುಕೊಂಡು ಹೋಗಲು ಬಂದರೆ ನಾವು ಏನು ಮಾಡಬೇಕು. ಜಿಲ್ಲಾಡಳಿತ 2-3 ದಿನ ಕಾಲಾವಕಾಶ ಕೊಟ್ಟು ಅಥವಾ ಮಧ್ಯಾಹ್ನದರೆಗೆ ಅನುಮತಿ ಕೊಟ್ಟರೆ ಅನೂಕೂಲ ಆಗುತ್ತದೆ ಎಂದು ಜ್ಯುವೆಲ್ಲರಿ ಶಾಪ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಅತ್ಯವಶ್ಯಕವಲ್ಲದ ಎಲ್ಲಾ ಅಂಗಡಿಗಳ ಬಂದ್
ಅವಶ್ಯಕ ವಸ್ತುಗಳಾದ ದಿನಸಿ, ಹಾಲು, ಹಣ್ಣು, ತರಕಾರಿ, ಔಷಧಿ, ಬೇಕರಿ, ಹೋಟೆಲ್‍ಗಳಲ್ಲಿ ಪಾರ್ಸೆಲ್ ವ್ಯವಸ್ಥೆ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಾಗ್ರಿಗಳ ಮಾರಾಟ ಮಳಿಗೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದಂತೆ ಕಾಫಿ, ಟೀ ಮಾರಾಟ ಮಾಡುವ ಕಾಂಡಿಮೆಂಟ್ಸ್, ಬಟ್ಟೆ, ಚಪ್ಪಲಿ, ಸೇರಿದಂತೆ ಅತ್ಯವಶಕವಲ್ಲದ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿದೆ. ಮೇ 4 ರವರೆಗೆ ಈ ನಿಯಮಗಳು ಅನ್ವಯವಾಗಲಿವೆ.

Share This Article
Leave a Comment

Leave a Reply

Your email address will not be published. Required fields are marked *