ಚಿಕನ್ ನೋಡಿ ಕುಣಿದು ಕುಪ್ಪಳಿಸಿದ ಶುಭಾ ಪೂಂಜಾ!

Public TV
2 Min Read

ವಾರ ದೊಡ್ಮನೆ ಸ್ಪರ್ಧಿಗಳು ಲಕ್ಷುರಿ ಬಜೆಟ್ ಟಾಸ್ಕ್‍ನಲ್ಲಿ ನಾನ್ ವೆಜ್ ಕಳೆದುಕೊಂಡು ಬೇಸರದಲ್ಲಿದ್ದರು. ಆದರೆ ಈ ಮಧ್ಯೆ ಬಿಗ್‍ಬಾಸ್ ನಿನ್ನೆ ಶುಭಾ ಪೂಂಜಾರನ್ನು ಕನ್ಫೆಕ್ಷನ್ ರೂಮ್‍ಗೆ ಕರೆದು, ಊಟದಲ್ಲಿ ನೀವು ಏನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಕೇಳಿದ್ದಾರೆ. ಹೀಗೆ ಕೇಳಿದ ತಕ್ಷಣ ನಿಟ್ಟುಸಿರುಬಿಟ್ಟು ಬಹಳ ಖುಷಿಯಿಂದ ಫಿಶ್ ಫ್ರೈ, ಅಂಜಲ್ ಫಿಶ್ ಫ್ರೈನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅದರ ಜೊತೆ ಐಸ್ ಕ್ರೀಮ್ ಕೊಟ್ಟರೆ ಚೆಂದ ಎಂದು ನಗುತ್ತಾ ಬಾಯಿ ಚಪ್ಪರಿಸಿಕೊಂಡು ಹೇಳುತ್ತಾರೆ.

ಚಂಡೇಶ್ವರ ಶಿಕ್ಷೆಯಾಗಿ ನಿಮಗೆ ಚಿಕನ್ ಕಳೆದುಕೊಂಡಾಗ ಏನು ಅನಿಸಿತು ಎಂದು ಬಿಗ್‍ಬಾಸ್ ಕೇಳಿದಾಗ, ತುಂಬಾ ಬೇಜಾರ್ ಆಯ್ತು ಬಿಗ್‍ಬಾಸ್ ಪ್ರತಿದಿನ ಅನ್ನ-ಸಾಂಬಾರ್ ತಿನ್ನುತ್ತಿದ್ದೇವೆ. ಕನಿಷ್ಟಪಕ್ಷ ಚಿಕನ್ ಸಾಂಬರ್ ಆದರೂ ಬರುತ್ತಿತ್ತು ಈಗ ಅದು ಹೋಯಿತು ಎಂದು ಶುಭ ಅಲವತ್ತುಕೊಂಡಿದ್ದಾರೆ.

ಬಳಿಕ ನೀವು ಚಿಕನ್ ಕಳೆದುಕೊಂಡಾಗ ಬಹಳಷ್ಟು ಸಲ ಚಿಕನ್ ಬೇಕು ಎಂದಿದ್ದನ್ನು ಬಿಗ್‍ಬಾಸ್ ಗಮನಿಸಿದ್ದಾರೆ. ಹಾಗಾಗಿ ನಿಮಗೆ ಬಿಗ್‍ಬಾಸ್, ಇದೀಗ ಚಿಕನ್ ನೀಡಲು ಇಚ್ಛಿಸುತ್ತಾರೆ ಎನ್ನುತ್ತಾರೆ. ಇದನ್ನು ಕೇಳಿದ ತಕ್ಷಣ ಶುಭ ಸಂತಸದಿಂದ ಸೋಫಾದ ಮೇಲೆಯೇ ಕುಣಿದು ಕುಪ್ಪಳಿಸಿ ಬಿಗ್‍ಬಾಸ್‍ಗೆ ಧನ್ಯವಾದ ತಿಳಿಸುತ್ತಾರೆ.

ನಂತರ ನಿಮ್ಮ ಮುಂದೆ ಇರುವ ತಟ್ಟೆಯನ್ನು ತೆರೆದು ನೋಡಿ ಎಂದಾಗ ಶುಭ ತಟ್ಟೆಯನ್ನು ಓಪನ್ ಮಾಡಿ ನೋಡುತ್ತಾರೆ. ಈ ವೇಳೆ ತಟ್ಟೆ ತುಂಬಾ ಚಿಕನ್ ತುಂಬಿರುವುದನ್ನು ನೋಡಿ ಶುಭಾ ಅಚ್ಚರಿಗೊಂಡು ಕಿರುಚಾಡುತ್ತಾ ಫುಲ್ ಖುಷ್ ಆಗ್ತಾರೆ.

ಆದರೆ ಕೊನೆಗೆ ಬಿಗ್‍ಬಾಸ್, ನೀವು ಈ ಚಿಕನ್‍ನನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಬೇಕು. ಯಾವುದೇ ಕಾರಣಕ್ಕೂ ತಿನ್ನುವಂತಿಲ್ಲ ಹಾಗೂ ಕೆಳಗೆ ಇಡುವಂತಿಲ್ಲ ಎಂದು ಟ್ವಿಸ್ಟ್ ಕೊಡುತ್ತಾರೆ. ಮುಂದಿನ ಆದೇಶದವರೆಗೂ ಮನೆಯ ಎಲ್ಲಾ ಸ್ಪರ್ಧಿಗಳು ಒಬ್ಬೊಬ್ಬರಾಗಿ ಚಿಕನನ್ನು ವರ್ಗಾಯಿಸಿಕೊಂಡು ತಿನ್ನದಂತೆ ಹಾಗೂ ಕೆಳಗಿಡದಂತೆ ನೋಡಿಕೊಳ್ಳಬೇಕು. ಹೀಗೆ ನೋಡಿಕೊಂಡರೆ ನಾಳೆ ಚಿಕನ್ ಕಳುಹಿಸಿಕೊಡಲಾಗುತ್ತದೆ ಎಂದು ಹೇಳುತ್ತಾರೆ.

ಒಟ್ಟಾರೆ ಚಿಕನ್ ನೀಡಿದನ್ನು ನೋಡಿ ಸ್ವರ್ಗವೇ ಸಿಕ್ಕಿದಂತೆ ಆನಂದಿಸಿದ ಶುಭಾ ಪೂಂಜಾರಿಗೆ, ಚಿಕನ್ ತಿನ್ನದೇ ನೋಡಿಕೊಳ್ಳುವಂತೆ ಬಿಗ್‍ಬಾಸ್ ಟ್ವಿಸ್ಟ್ ನೀಡುವ ಮೂಲಕ ನಿರಾಸೆ ಮೂಡಿಸಿದ್ದರೆ ಎಂದರೆ ತಪ್ಪಾಗಲಾರದು.

Share This Article
Leave a Comment

Leave a Reply

Your email address will not be published. Required fields are marked *