ಚಕ್ರವರ್ತಿ ಔಟ್ ಆಗಲು ಬಲವಾದ ಕಾರಣವೇನು ಗೊತ್ತಾ?

Public TV
2 Min Read

ಬೆಂಗಳೂರು: ಬಿಗ್‍ಬಾಸ್ ಕನ್ನಡ ಸೀಸನ್ 8ನಲ್ಲಿ ಫಿನಾಲೆ ದಿನಗಳು ಹತ್ತಿರ ಆಗುತ್ತಿದ್ದಂತೆಯೇ ದೊಡ್ಮನೆಯಲ್ಲಿ ರೋಚಕತೆ ಹೆಚ್ಚಿದೆ. ಈ ವಾರ ಮನೆಯಿಂದ ಚಕ್ರವರ್ತಿ ಆಚೆ ಹೋಗಿದ್ದಾರೆ.

ಬಿಗ್‍ಬಾಸ್ ಮನೆಯ ಈ ವಾರಾದ ಎಲಿಮಿನೇಷನ್ ತುಂಬಾ ವಿಭಿನ್ನವಾಗಿರಲಿದೆ. ನಿಮ್ಮಲ್ಲಿಯೇ ಒಬ್ಬರು ಯಾರಿಗೂ ತಿಳಿಯದಂತೆ ಮನೆಯಿಂದ ಆಚೆ ಹೋಗುತ್ತಾರೆ. ಸಖತ್ ಟ್ವಿಸ್ಟ್ ಇರಲಿದೆ ಎಂದು ಸುದೀಪ್ ಹೇಳಿದ್ದರು. ಅದರಂತೆ ಚಕ್ರವರ್ತಿ ಆಚೆ ಬಂದಿದ್ದಾರೆ.

ಬಿಗ್‍ಬಾಸ್ ಮನೆಯಲ್ಲಿ ಒಂದು ಫೋನ್ ಬೂತ್ ಇಡಲಾಗಿತ್ತು. ಅದಕ್ಕೆ ಕರೆ ಮಾಡಿ ಒಂದು ಮೆಸೇಜ್ ನೀಡಲಾಯಿತು. ಶುಭಾ ಪೂಂಜಾ, ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಚಕ್ರವರ್ತಿ ಚಂದ್ರಚೂಡ್ ಅವರು ಫೋನ್‍ನಲ್ಲಿ ಮಾತನಾಡಿದರು. ಬಿಗ್‍ಬಾಸ್ ಪಯಣದ ಕುರಿತಾಗಿ ಹೇಳಲು ಪ್ರತಿಯೊಬ್ಬರಿಗೂ ಅವಕಾಶ ಮಾಡಿಕೊಟ್ಟರು. ಇಷ್ಟು ಜನರಲ್ಲಿ ಒಬ್ಬರಿಗೆ ಈಗ ಬಿಗ್‍ಬಾಸ್ ಪಯಣ ಕೊನೆ ಆಗಲಿದೆ ಎಂದು ಸೂಚನೆ ನೀಡಲಾಯಿತು. ಯಾರಿಗೆ ಬಿಗ್‍ಬಾಸ್ ಮನೆಯ ಮುಖ್ಯದ್ವಾರ ತೆರೆದುಕೊಳ್ಳುತ್ತದೆಯೋ ಅವರು ಹೊರಗೆ ಬರಬೇಕು ಎಂದು ಹೇಳಿದ್ದರು. ಈ ವೇಳೆ ಶಮಂತ್ ಮತ್ತು ಚಕ್ರವರ್ತಿ ಕೊನೆಯಲ್ಲಿ ಉಳಿದುಕೊಂಡಿದ್ದರು. ಆಗ ಬಿಗ್‍ಬಾಸ್ ಚಕ್ರವರ್ತಿ ನೀವು ಮುಖ್ಯದ್ವಾರ ಮೂಲಕವಾಗಿ ಹೊರಗೆ ಬನ್ನಿ ಎಂದು ಸೂಚನೆ ನೀಡದರು. ಈ ವೇಳೆ ಚಕ್ರವರ್ತಿ ಮನೆಯಿಂದ ಆಚೆ ಬಂದಿದ್ದಾರೆ. ಇದನ್ನೂ ಓದಿ: ವಿಕ್ರಾಂತ್ ರೋಣಾದಲ್ಲಿ ಜಾಕ್ವೆಲಿನ್ ಫಸ್ಟ್ ಲುಕ್ ರಿಲೀಸ್‍ಗೆ ದಿನಾಂಕ ನಿಗದಿ

ಪ್ರಿಯಾಂಕಾ ಎಲಿಮಿನೇಟ್ ಆದಾಗ ಚಕ್ರವರ್ತಿ ಚಂದ್ರಚೂಡ್ ನಡೆದುಕೊಂಡಿದ್ದ ರೀತಿ ಅನೇಕರಿಗೆ ಇಷ್ಟವಾಗಿರಲಿಲ್ಲ. ಕೆಲವು ಸ್ಪರ್ಧಿಗಳ ಜೊತೆಗೆ ಜಗಳ ಮಾಡಿಕೊಂಡಿದ್ದರು. ಅವರು ಪ್ರಿಯಾಂಕಾಗೆ ಅಶ್ಲೀಲ ಸನ್ನೆ ತೋರಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಚಕ್ರವರ್ತಿಯನ್ನು ಮನೆಯಿಂದ ಆಚೆ ಕಳುಹಿಸಿ ಎನ್ನುವ ಕೂಗು ಕೇಳಿ ಬರುತ್ತಿತ್ತು. ಈ ವಿಚಾರದ ಬಗ್ಗೆ ಚಕ್ರವರ್ತಿ ಕ್ಷಮೆಯನ್ನು ಕೇಳಿದ್ದರು. ಆದರೆ ಈ ವರ್ತನೆ ಜನರಿಗೆ ಇಷ್ಟವಾಗದ ಕಾರಣ ಇವರು ಕಡಿಮೆ ವೋಟ್ ಪಡೆದು ಔಟ್ ಆಗಿದ್ದಾರೆ.

ಸಾಮಾನ್ಯವಾಗಿ ವೀಕೆಂಡ್‍ನಲ್ಲಿ ಎಲಿಮಿನೇಟ್ ಆದವರನ್ನು ಸುದೀಪ್ ಅವರು ವೇದಿಕೆಗೆ ಕರೆಸಿ ಮಾತನಾಡಿಸುತ್ತಾರೆ. ಬಿಗ್‍ಬಾಸ್ ಮನೆಯ ಅನುಭವವನ್ನು ಹಂಚಿಕೊಳ್ಳಲು ಅವಕಾಶ ನೀಡುತ್ತಾರೆ. ಆದರೆ ವಾರದ ಮಧ್ಯೆ ಎಲಿಮಿನೇಷನ್ ನಡೆದ ಕಾರಣ ಸುದೀಪ್ ಅನುಪಸ್ಥಿತಿಯಲ್ಲೇ ಚಕ್ರವರ್ತಿ ಔಟ್ ಆಗಿದ್ದಾರೆ. ಅರವಿಂದ್ ಕೆ.ಪಿ, ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ವೈಷ್ಣವಿ ಹಾಗೂ ಶುಭಾ ಪೂಂಜಾ ಆಟ ಮುಂದುವರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *