ಚಂದನವನಕ್ಕೆ ಬುಲೆಟ್ ಪ್ರಕಾಶ್ ಪುತ್ರನ ಎಂಟ್ರಿ

Public TV
1 Min Read

ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಈಗಾಗಲೇ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿಕೊಂಡು ಬಂದಿರು ರಕ್ಷಕ್ ಮುಂದಿನ ಕೆಲಸಕ್ಕೆ ಸಜ್ಜಾಗ್ತಿದ್ದಾರೆ.

ಗುರುಶಿಷ್ಯರು ಹಿರಿಯನಟ ದ್ವಾರಕೀಶ್ ನಟಿಸಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿರುವ ಸೂಪರ್ ಹಿಟ್ ಸಿನಿಮಾ. ಈ ಟೈಟಲ್‍ನಲ್ಲಿ ಶರಣ್ ಮತ್ತು ತಂಡದವರು ಹೊಸ ಕಥೆ ಹೇಳು ಹೊರಟಿದ್ದಾರೆ. ಜಡೇಶ್ ಗುರುಶಿಷ್ಯರು ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತರುಣಿ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರ ಮಾಡ್ತಿದ್ದಾರೆ ರಕ್ಷಕ್. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ ಕೂಡ ಗುರುಶಿಷ್ಯರು ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಬಹಳಷ್ಟು ಕಲಾವಿದರು ಮಕ್ಕಳು ಗುರುಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೊ ಮಾಹಿತಿ ಸಿಕ್ಕಿದೆ.

ಯಾವ ಯಾವ ಸ್ಟಾರ್ ಮಕ್ಕಳು ಯಾವ ಪಾತ್ರ ಮಾಡುತ್ತಿದ್ದಾರೆ ಅನ್ನೋದು ಈ ತಿಂಗಳ ಅಂತ್ಯದಲ್ಲಿ ಚಿತ್ರತಂಡ ಹೇಳಲಿದೆ. ಮಗನನ್ನ ಹೀರೋ ಮಾಡಬೇಕು ಅಂತ ಬುಲೆಟ್ ಪ್ರಕಾಶ್ ಬಹಳ ಯೋಚನೆ ಮಾಡಿದ್ದರು. ಫೈಟ್, ಡ್ಯಾನ್ಸ್, ಜಿಮ್ ಅಂತ ಆಗಲೇ ತಯಾರಿ ಆರಂಭಿಸಿದ್ದರು. ಆದ್ರೆ ಮಗ ಬಣ್ಣ ಹಚ್ಚುವ ಮೊದಲೇ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ನಿಧನರಾಗಿದ್ದಾರೆ. ಅಪ್ಪನ ಆಸೆಯಂತೆ ಬುಲೆಟ್ ಸ್ನೇಹಿತರ ಮಾರ್ಗದರ್ಶನದಂತೆ ಮೊದಲ ಸಿನಿಮಾಗೆ ರಕ್ಷಕ್ ಬಣ್ಣ ಹಚ್ಚಿದ್ದಾರೆ. ಮುಂದಿನ ತಿಂಗಳು ಗುರುಶಿಷ್ಯರು ಸಿನಿಮಾ ಮತ್ತೊಂದು ಶೆಡ್ಯೂಲ್ ಪ್ಲಾನ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *