‘ಗ್ರೂಫಿ’ ಟ್ರೇಲರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ ಮೈಸೂರು ಮಹಾರಾಜ ಯದುವೀರ್

Public TV
2 Min Read

ವ ನಿರ್ದೇಶಕ ಡಿ.ರವಿ ಅರ್ಜುನ್ ನಿರ್ದೇಶನದ ‘ಗ್ರೂಫಿ’ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ. ಬಿಡುಗಡೆಯ ಸನಿಹದಲ್ಲಿರುವ ಈ ಚಿತ್ರ ಒಂದೊಂದೇ ಸ್ಯಾಂಪಲ್ ಗಳ ಮೂಲಕ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸುತ್ತಿದೆ. ಇದೀಗ ಚಿತ್ರದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ‘ಗ್ರೂಫಿ’ ಚಿತ್ರತಂಡ ಆ ಕುತೂಹಲವನ್ನು ದುಪ್ಪಟ್ಟು ಮಾಡಿದೆ. ಮೈಸೂರು ಮಹಾರಾಜರಾದ ಯದುವೀರ್ ಕೈಯಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿಸಿದ್ದು, ಟ್ರೇಲರ್ ನೋಡಿ ಮೆಚ್ಚಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ಮಹಾರಾಜ ಯದುವೀರ್.

ಹೆಜ್ಜೆ ಹೆಜ್ಜೆಗೂ ಕುತೂಹಲವನ್ನುಂಟು ಮಾಡುವ ‘ಗ್ರೂಫಿ’ ಸಿನಿಮಾದ ಇಂಟ್ರಸ್ಟಿಂಗ್ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿ ಸಿನಿರಸಿಕರು ಮೆಚ್ಚುಗೆ ನೀಡುತ್ತಿದ್ದಾರೆ. ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಗ್ರೂಫಿ ಸಿನಿಮಾ ಡಿ. ರವಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚೊಚ್ಚಲ ಸಿನಿಮಾ. ಲಿಯಾ ಗ್ಲೋಬಲ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಕೆ.ಜಿ.ಸ್ವಾಮಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ, ನಿರ್ಮಾಪಕರೊಳಗೊಂಡು ಚಿತ್ರದ ನಟ ನಟಿಯರಿಗೂ ಇದು ಮೊದಲ ಸಿನಿಮಾ. ಇದನ್ನೂ ಓದಿ: ‘ಗ್ರೂಫಿ’ ಚಿತ್ರದ ಆಡಿಯೋಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಾಥ್

ಹೊಸಬರ ತಂಡ ಕಟ್ಟಿಕೊಂಡು ಹೊಸತನದೊಂದಿಗೆ ಬಂದಿರುವ ಗ್ರೂಫಿ ಚಿತ್ರತಂಡ ಮನರಂಜನೆ ಜೊತೆಗೆ ಒಂದೊಳ್ಳೆ ಸಂದೇಶವನ್ನು ಸಿನಿಪ್ರಿಯರಿಗೆ ನೀಡಲಿದೆ. ಚಿತ್ರದ ಪ್ರಮುಖ ಹೈಲೈಟ್ ಅಂದ್ರೆ ಸಿನಿಮಾಟೋಗ್ರಫಿ. ಲಕ್ಷೀಕಾಂತ್ ಕ್ಯಾಮೆರಾ ಕಣ್ಣಲ್ಲಿ ಮಡಿಕೇರಿಯ ಗಾಳಿಬೀಡು, ಮಲ್ಲಳ್ಳಿ ವಾಟರ್ ಫಾಲ್ಸ್, ಹರಿಹರ ಸೇರಿದಂತೆ ಅನೇಕ ಸುಂದರ ಸ್ಥಳಗಳು ಅಧ್ಬುತವಾಗಿ ಸೆರೆಯಾಗಿದ್ದು, ಟ್ರೇಲರ್ ನಲ್ಲಿ ಅದರ ಚಿಕ್ಕ ಝಲಕ್ ಕಾಣಬಹುದು. ಚಿತ್ರದ ಮುಖ್ಯ ಭೂಮಿಕೆಯಲ್ಲಿ ಆರ್ಯನ್ ಹಾಗೂ ಪದ್ಮಶ್ರೀ ಜೈನ್ ನಟಿಸಿದ್ದಾರೆ. ಉಳಿದಂತೆ ಉಮಾ ಮಯೂರಿ, ಗಗನ್, ಪ್ರಜ್ವಲ್, ಸಂಧ್ಯಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ಕಲಾವಿದರಾದ ಸಂಗೀತ, ಶ್ರೀಧರ್, ಹನುಮಂತೇ ಗೌಡ್ರು, ರಘು ಪಾಂಡೇಶ್ವರ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ವಿಜೇತ್ ಕೃಷ್ಣ ಸಂಗೀತ ನಿರ್ದೇಶನದಲ್ಲಿ ಚಿತ್ರದ ಕಲರ್ ಫುಲ್ ಹಾಡುಗಳು ಮೂಡಿಬಂದಿದ್ದು, ಇತ್ತೀಚೆಗೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದರು. ಈಗಾಗಲೇ ಚಿತ್ರದ ಹಾಡುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್, ಹೃದಯ ಶಿವ ಅವರ ಸಾಹಿತ್ಯ ಚಿತ್ರದ ಹಾಡುಗಳಿಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಹೊಸತಂಡದ ‘ಗ್ರೂಫಿ’ ಚಿತ್ರ ಆಗಸ್ಟ್ 20ರಂದು ಬಿಡುಗಡೆಯಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *