ಗೋಕರ್ಣದ ಕಡಲ ಕಿನಾರೆಯಲ್ಲಿ ‘ಯುವರತ್ನ’ ಫಿಟ್ನೆಸ್ – ವೀಡಿಯೋ ವೈರಲ್

Public TV
2 Min Read

ಬೆಂಗಳೂರು: ಸ್ಯಾಂಡಲ್‍ವುಡ್ ಪುನೀತ್ ರಾಜ್‍ಕುಮಾರ್ ಗೋಕರ್ಣಕ್ಕೆ ಹೋಗಿ ಅಲ್ಲಿ ಸಮುದ್ರ ತಟದಲ್ಲಿ ಕಳೆದಿರುವ ಸುಂದರ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು. ಈ ವೀಡಿಯೋ ಒಂದನ್ನು ಟ್ವಿಟರ್ ಹಾಗೂ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಿಟ್ನೆಸ್‍ಗೆ ಹೆಚ್ಚಿನ ಆದ್ಯತೆಯನ್ನು ಕೊಡುತ್ತಾರೆ ಎಂಬುದು ತಿಳಿದಿರುವ ವಿಷಯವಾಗಿ. ಇತ್ತೀಚೆಗೆ ಗೋಕರ್ಣಕ್ಕೆ ಹೋಗಿದ್ದರು. ಈ ವೇಳೆ ತಾವು ಸಮುದ್ರದ ದಡದಲ್ಲಿ ಸ್ಟಂಟ್ ಮಾಡಿರುವ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಗೋಕರ್ಣದ ಕಡಲ ಕಿನಾರೆಯಲ್ಲಿ ಪುನೀತ್ ಬ್ಯಾಕ್ ಫ್ಲಿಪ್ ಮಾಡಿದ್ದಾರೆ. ಈ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ. ಯುವರತ್ನ ಸಿನಿಮಾ ಪವರ್ ಆಫ್ ಯೂತ್ ಹಾಡನ್ನ ಸೇರಿಸಿದ್ದಾರೆ. ಹಿಂದೆ ಸುಂದರವಾದ ಸಮುದ್ರ ಕಡಲು ಹಾಗೂ ಉಕ್ಕಿ ಬರುತ್ತಿರುವ ಅಲೆಗಳು ಮುಂದೆ ಪುನೀತ್ ಬ್ಯಾಕ್ ಫ್ಲಿಪ್ ಮಾಡಿರುವ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ಮತ್ತು ಕಮೆಂಟ್‍ಗಳ ಸುರಿಮಳೆಗೈದಿದ್ದಾರೆ.

ಪುನೀತ್ ಅವರನ್ನು ಹತ್ತಿರದಿಂದ ನೋಡಿದ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾದದಲ್ಲಿ ಹಂಚಿಕೊಳ್ಳುವ ಮೂಲಕವಾಗಿ ಖುಷಿಪಟ್ಟಿದ್ದರು. ಪುನೀತ್ ಹತ್ತಿರದಿಂದ ನೋಡಲು ಮುಗಿಬಿದ್ದ ಅಭಿಮಾನಿಗಳ ವಿಡಿಯೋಗಳು ಹಾಗೂ ಕಡಲ ಕಿನಾರೆಯಲ್ಲಿ ಅಡ್ಡಾಡುತ್ತಿದ್ದ ಪುನೀತ್ ಅವರ ಪೋಟೋಗಳು ಸಹ ಸಖತ್ ವೈರಲ್ ಆಗಿದ್ದವು.

ಪುನೀತ್ ರಾಜ್ ಕುಮಾರ್ ಹೊಸ ವರ್ಷಕ್ಕೆ ತಮ್ಮ ಯುವರತ್ನ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸುವ ಮೂಲಕವಾಗಿ ಅಭಿಮಾನಿಗಳಿಗೆ ಭರ್ಜರಿ ಉಡುಗೊರೆಯನ್ನೇ ನೀಡಿದರು. ಸದ್ಯ ಚಿತ್ರೀಕರಣದಿಂದ ಬ್ರೇಕ್ ಪಡೆದಿರುವ ಪುನೀತ್ ರಾಜ್ ಕುಮಾರ್, ಇತ್ತೀಚೆಗಷ್ಟೆ ತಮ್ಮ ಕಚೇರಿಯಲ್ಲಿ ಕೆಲ ಮಾಡುವ ಸಿಬ್ಬಂದಿಯ ಮದುವೆಗೆಂದು ಕುಮಟಾಗೆ ಹೋಗಿದ್ದರು. ಮದುವೆ ಮುಗಿಸಿಕೊಂಡು ಅಲ್ಲಿಂದ ಗೋರ್ಕಣಕ್ಕೆ ಹೋಗಿ ಅಲ್ಲಿ ಮಹಾಬಲೇಶ್ವರನ ದೇವಾಲಯದಲ್ಲಿ ವಿಶೇಷ ಪೂಜೆ ಮಾಡಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *