ಗದರಿದ್ದ ತಂದೆಯನ್ನೇ ಕೊಂದ ಮಗ- ಸಾಕ್ಷ್ಯ ನಾಶ ಪಡಿಸಲು 100 ಬಾರಿ ಧಾರಾವಾಹಿ ವೀಕ್ಷಿಸಿದ

Public TV
2 Min Read

– ಮೊಬೈಲ್‍ನಲ್ಲಿ ಅಡಗಿತ್ತು ಸಾವಿನ ರಹಸ್ಯ

ಲಕ್ನೋ: 19 ವರ್ಷದ ಬಾಲಕನೊಬ್ಬ ಕೋಪದ ಬರದಲ್ಲಿ ತಂದೆಯನ್ನೇ ಕೊಲೆ ಮಾಡಿರುವ ಘಟನೆ ಮಥುರಾದಲ್ಲಿ ನಡೆದಿದೆ.

ಮನೋಜ್ ಮಿಶ್ರಾ ಮಗನಿಂದಲೇ ಕೊಲೆಯಾದ ತಂದೆಯಾಗಿದ್ದು, 12ನೇ ತರಗತಿ ಓದುತ್ತಿದ್ದ ಅಪ್ರಾಪ್ತ ಗದರಿದ ಎಂಬ ಕಾರಣಕ್ಕೆ ಅಸಮಾಧಾನಗೊಂಡು ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ತಂದೆಯನ್ನೇ ಕೊಲೆ ಮಾಡಿದ್ದ. ಅಲ್ಲದೇ ತಂದೆ ಸತ್ತ ವಿಷಯ ಖಚಿತ ಪಡಿಸಿಕೊಳ್ಳಲು ಬಟ್ಟೆಯಿಂದ ಕತ್ತು ಹಿಸುಕಿದ್ದ.

ಮೇ 2 ರಂದು ತಂದೆಯನ್ನು ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶಪಡಿಸಲು ತಾಯಿಯ ನೆರವು ಪಡೆದುಕೊಂಡಿದ್ದ. ಸ್ಕೂಟಿ ಮೂಲಕ ಮನೆಯಿಂದ ಕೆಲ ಕಿಮೀ ದೂರ ಮೃತದೇಹವನ್ನು ತೆಗೆದುಕೊಂಡು ಹೋಗಿ ಪೆಟ್ರೋಲ್ ಹಾಕಿ ದೇಹವನ್ನು ಸುಟ್ಟು ಹಾಕಿ ಏನು ತಿಳಿದಂತೆ ಮನೆಗೆ ವಾಪಸ್ ಆಗಿದ್ದ.

ಮೇ 3 ರಂದು ಪೊಲೀಸರಿಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿತ್ತು. ಇತ್ತ ಮೇ 27 ರಂದು ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಬಳಿಕ ಅನಾಥವಾಗಿ ಪತ್ತೆಯಾಗಿದ್ದ ಮೃತ ದೇಹವನ್ನು ಆತನೊಂದಿಗೆ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಗುರುತಿಸಿದ್ದರು. ಕೂಡಲೇ ಪ್ರಕರಣದ ವಿಚಾರಣೆಗೆ ವೇಗ ನೀಡಿದ ಪೊಲೀಸರು ಕೊನೆಗೂ ಕೊಲೆಗಾರ ಮೃತ ವ್ಯಕ್ತಿಯ ಮಗ ಎಂದು ಸಾಬೀತು ಮಾಡಿದ್ದರು.

ಪ್ರಕರಣದ ತನಿಖೆ ಸಂದರ್ಭದಲ್ಲಿ ಪೊಲೀಸರಿಗೆ ಸಹಕಾರ ನೀಡದ ಮನೋಜ್ ಪುತ್ರ, ಯಾವ ನಿಯಮಗಳ ಅಡಿಯಲ್ಲಿ ತನ್ನನ್ನು ವಿಚಾರಣೆ ಮಾಡುತ್ತಿದ್ದಾಗಿ ಪ್ರಶ್ನೆ ಮಾಡಿದ್ದ. ಇದರಿಂದ ಅನುಮಾನಗೊಂಡ ಪೊಲೀಸರು ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಸಂದರ್ಭದಲ್ಲಿ ಕೊಲೆಯ ಸತ್ಯಾಂಶವನ್ನು ಹೇಳಿದ್ದ ಎಂದು ಮಥುರಾ ಎಸ್‍ಪಿ ಉದಯ್ ಶಂಕರ್ ಸಿಂಗ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಸದ್ಯ ಪೊಲೀಸರು ಅಪ್ರಾಪ್ತ ಬಾಲಕ ಹಾಗೂ ಆತನ ತಾಯಿ 49 ವರ್ಷದ ಸಂಗೀತಾ ಮಿಶ್ರಾಗಳನ್ನು ಕೊಲೆ ಆರೋಪದ ಅಡಿ ಬಂಧಿಸಿದ್ದಾರೆ. ಕೊಲೆಯ ಬಳಿಕ ತಂದೆಯ ದೇಹವನ್ನು ನಾಶ ಮಾಡಲು ಬಾಲಕ 100 ಕ್ಕೂ ಹೆಚ್ಚು ಬಾರಿ ಕ್ರೈಂ ಪ್ಯಾಟ್ರೋಲ್ ಎಂಬ ಹಿಂದಿ ಧಾರಾವಾಹಿಯನ್ನು ನೂರಕ್ಕೂ ಹೆಚ್ಚು ಬಾರಿ ವೀಕ್ಷಣೆ ಮಾಡಿದ್ದ. ಅಪ್ರಾಪ್ತ ಬಾಲಕನ ಮೊಬೈಲ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಸಂಗತಿ ಬೆಳಕಿಗೆ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *