ಗಂಭೀರವಾಗಿ ಆಶೀರ್ವದಿಸಲು ಬಂದ ಪಾದ್ರಿಗೆ ಹೈ ಫೈ ನೀಡಿದ ಬಾಲಕಿ- ವಿಡಿಯೋ ವೈರಲ್

Public TV
2 Min Read

ನವದೆಹಲಿ: ತಾಯಿ-ಮಗಳು ಚರ್ಚ್‍ಗೆ ತೆರಳಿದ ವೇಳೆ ಪಾದ್ರಿ ಪುಟ್ಟ ಬಾಲಕಿಗೆ ಆಶೀರ್ವದಿಸಲು ಮುಂದಾಗಿದ್ದು, ಪಾದ್ರಿ ಕೈ ಮುಂದೆ ತರುತ್ತಿದ್ದಂತೆ ತನ್ನ ಕೈ ಸೇರಿಸಿ ಬಾಲಕಿ ಹೈ ಫೈ ಮಾಡಿದ್ದಾಳೆ. ಈ ಕ್ಯೂಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಪ್‍ಮಾನ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಫಾದರ್ ಆಶೀರ್ವದಿಸಲು ಕೈ ಮುಂದೆ ತಂದರೆ, ಮುಗ್ಧ ಬಾಲಕಿ ಹೈ ಫೈ ಮಾಡುತ್ತಾಳೆ. ಆಗ ಫಾದರ್ ನಗು ತಡೆಯಲು ಯತ್ನಿಸುತ್ತಾರೆ. ತುಂಬಾ ಒಳ್ಳೆಯದನ್ನು ನೀವು ಇಂದು ನೋಡುತ್ತಿದ್ದೀರಿ ಎಂದು ಬರೆದುಕೊಂಡಿದ್ದಾರೆ.

ವಿಡಿಯೋದಲ್ಲಿ ಏನಿದೆ?
ಪುಟ್ಟ ಬಾಲಕಿ ತನ್ನ ತಾಯಿಯೊಂದಿಗೆ ಚರ್ಚ್‍ಗೆ ತೆರಳಿದ್ದಾಳೆ. ಈ ವೇಳೆ ಚರ್ಚ್‍ನ ಫಾದರ್ ಆಶೀರ್ವಾದ ಪಡೆಯಲು ತೆರಳಿದ್ದಾರೆ. ಅದೇ ರೀತಿ ಫಾದರ್ ಸಹ ಬಾಲಕಿಗೆ ಆಶೀರ್ವಾದ ಮಾಡಲು ಕೈ ಮುಂದೆ ತಂದಿದ್ದು, ಇದನ್ನು ಗಮನಿಸಿದ ಕ್ಯೂಟ್ ಬೇಬಿ ಸಹ ತನ್ನ ಕೈ ಮುಂದೆ ತಂದಿದ್ದಾಳೆ. ಅಲ್ಲದೆ ಅವರಿಗೆ ಹೈ ಫೈ ಮಾಡಿದ್ದಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಕಮೆಂಟ್ ಮಾಡುವ ಮೂಲಕ ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಾಲಕಿಯ ಮುಗ್ಧತೆ ಕಂಡು ಫಾದರ್ ಬೆರಗಾಗಿದ್ದು, ನಗುವಿನಲ್ಲಿ ತೇಲುವಂತೆ ಮಾಡಿದೆ. ನಂತರ ಮುಖವನ್ನು ಕೈಯಿಂದ ಮುಚ್ಚಿಕೊಂಡು ಬಾಲಕಿಗೆ ಆಶೀರ್ವದಿಸುತ್ತಾರೆ.

ಈ ವಿಡಿಯೋ ನಿರೀಕ್ಷೆಯಂತೆ ಸಖತ್ ವೈರಲ್ ಆಗಿದ್ದು, 22 ಲಕ್ಷ ಬಾರಿ ವೀಕ್ಷಣೆಯಾಗಿದೆ. 29,100ಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಅಲ್ಲದೆ 6,300ಕ್ಕೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ. ಬಾಲಕಿ ಹೈ ಫೈ ಮಾಡಿರುವುದು, ಫಾದರ್ ನಗುವಿನಲ್ಲಿ ತೇಲಿರುವ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಚಿಕ್ಕ ವಯಸ್ಸಿನಲ್ಲಿ ಪ್ರತಿಯೊಬ್ಬರಿಗೂ ಹೈ ಫೈ ಮಾಡುವುದು ಕಲಿಸಿಲ್ಲ ಎಂದಾದರೆ ನೀವು ಸರಿಯಾಗಿ ಬೆಳೆದಿಲ್ಲ ಎಂದರ್ಥ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಚರ್ಚ್‍ನಲ್ಲಿ ಗಂಭೀರ ಕ್ಷಣದ ಮಧ್ಯೆ ನಗುವುದಕ್ಕಿಂತ ಇನ್ನಾವುದೇ ನಗುವನ್ನು ಹಿಡಿದಿಡಲು ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

ಮಗುವಿನ ಕಣ್ಣಿನ ಮೂಲಕ ಪ್ರಪಂಚ ನೋಡುವುದು ಅದ್ಭುತ ಕ್ಷಣ ಎಂದು ಮೂರನೇಯವರು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೋಡಿ ಚರ್ಚ್‍ನ ವ್ಯವಸ್ಥೆಯಲ್ಲಿಯೂ ನಮಗೆ ಸ್ವಲ್ಪ ಮಟ್ಟಿನ ಅವಶ್ಯಕತೆ ಇದೆ. ಒಳ್ಳೆಯ ಫಾದರ್ ತಮ್ಮ ಇತರ ಅನುಯಾಯಿಗಳಿಗೂ ಇದೇ ರೀತಿ ಹೇಳಿಕೊಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *