ಗಂಟುಮೂಟೆ ಸಮೇತ ಗೆಳತಿ ಜೊತೆ ಯುವತಿ ಪಲಾಯನ

Public TV
1 Min Read

– ಸಿಕ್ಕ ಮೇಲೆ ಬಯಲಾಯ್ತು ಸತ್ಯ

ಲಕ್ನೋ: ಮನೆಯಿಂದ ಓಡಿ ಹೋಗಿದ್ದ ಯುವತಿಯರಿಬ್ಬರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್ಪುರಲ್ಲಿ ನಡೆದಿದೆ. ಪೊಲೀಸರು ಮುಂದೆ ಇಬ್ಬರು ಮನೆಯಿಂದ ಓಡಿ ಹೋದ ಕಾರಣವನ್ನು ರಿವೀಲ್ ಮಾಡಿದ್ದಾರೆ.

ಗೀತಾ ಮತ್ತು ರಚನಾ (ಇಬ್ಬರ ಹೆಸರು ಬದಲಾಯಿಸಲಾಗಿದೆ) ಮನೆಯಿಂದ ಓಡಿಹೋದ ಯುವತಿಯರು. ಗೀತಾ ಪೋಷಕರು ಯಾವುದೇ ವಿಷಯಕ್ಕೆ ಬೈದು ಥಳಿಸಿದ್ದಾರೆ. ಇದರಿಂದ ಕೋಪಗೊಂಡ ಗೀತಾ ಗೆಳತಿ ರಚನಾಳನ್ನ ಕರೆದುಕೊಂಡು ಗಂಟುಮೂಟೆ ಸಮೇತ ಮನೆಯಿಂದ ಪರಾರಿಯಾಗಿದ್ದಳು. ಇತ್ತ ಗೀತಾ ಕಾಣೆಯಾಗಿರುವ ಬಗ್ಗೆ ಸೋದರ ಶಹಜಹಾನ್ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಇತ್ತ ರಚನಾ ಪೋಷಕರು ಸಹ ದೂರು ದಾಖಲಿಸಿದ್ದರು.

ಯುವತಿಯರು ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗುತ್ತಿದ್ದಂತೆ ತಡಮಾಡದ ಪೊಲೀಸರು ಅಖಾಡಕ್ಕೆ ಇಳಿದಿದ್ದರು. ಮೊದಲಿಗೆ ಇಬ್ಬರ ಮೊಬೈಲ್ ಲೋಕೇಶನ್ ಲಕ್ನೋ ನಗರದಲ್ಲಿ ಪತ್ತೆಯಾಗಿದೆ. ಪೊಲೀಸರ ತಂಡ ಲಕ್ನೋ ತಲುಪವಷ್ಟರಲ್ಲಿ ಗೀತಾ ಮತ್ತು ರಚನಾ ತಮ್ಮ ಮೊಬೈಲ್ ಸ್ವಿಚ್ಛ್ ಆಫ್ ಮಾಡಿಕೊಂಡಿದ್ದರು. ಕೊನೆಗೆ ಇಬ್ಬರು ಹತ್ರಾಸ್ ನಲ್ಲಿರುವ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರ ಸಹಾಯದೊಂದಿಗೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬಯಲಾಯ್ತು ಸತ್ಯ: ಇಬ್ಬರನ್ನ ವಶಕ್ಕೆ ಪಡೆದ ಪೊಲೀಸರು ಗೀತಾ ಮತ್ತು ರಚನಾಳನ್ನ ಹತ್ರಾಸ್ ನಿಂದ ಶಹಜಹಾನ್ಪುರಕ್ಕೆ ಕರೆ ತಂದಿದ್ದಾರೆ. ಪೊಲೀಸರ ಮುಂದೆ ಮನೆ ಬಿಟ್ಟು ಹೋಗಿದ್ಯಾಕೆ ಎಂಬುದರ ಬಗ್ಗೆ ಹೇಳಿದ್ದಾರೆ. ಮನೆಯಲ್ಲಿ ಥಳಿಸಿದ ಮೇಲೆ ಗೀತಾ ಮನೆಯಿಂದ ಓಡಿ ಹೋಗಲು ಪ್ಲಾನ್ ಮಾಡಿದ್ದಳು. ನಾನು ಆಕೆಯ ಆಪ್ತೆ ಸ್ನೇಹಿತೆಯಾಗಿದ್ದರಿಂದ ಗೆಳೆತನಕ್ಕಾಗಿ ನಾನು ಆಕೆಯ ಜೊತೆಯಲ್ಲಿಯೇ ಹೋದೆ ಎಂದು ರಚನಾ ಹೇಳಿದ್ದಾಳೆ.

ಇಬ್ಬರ ಹೇಳಿಕೆಯನ್ನ ದಾಖಲಿಸಿಕೊಂಡಿರುವ ಪೊಲೀಸರು ಪೋಷಕರ ವಶಕ್ಕೆ ನೀಡಿದ್ದಾರೆ. ಗೆಳತಿಗಾಗಿ ಮತ್ತೊಬ್ಬ ಸ್ನೇಹಿತೆ ಓಡಿ ಹೋಗಿರುವುದನ್ನ ಕಂಡು ಪೊಲೀಸರು ಕೂಡ ಆಶ್ವರ್ಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *