ಕ್ವಾರಂಟೈನ್ ನಿಯಮ ಉಲ್ಲಂಘನೆ – 2 ವರ್ಷದ ಮಗುವಿಗೆ ನೋಟಿಸ್

Public TV
1 Min Read

ಗದಗ: 2 ವರ್ಷದ ಮಗು ಕ್ವಾರಂಟೈನ್ ನಿಯಮ ಉಲ್ಲಂಘನ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಮುಂಡರಗಿ ಪಟ್ಟಣದಲ್ಲಿ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

ಪಟ್ಟಣದ ಹುಡ್ಕೋ ಕಾಲೋನಿಯ 2 ವರ್ಷದ ಮಗವಿಗೆ ಮುಂಡರಗಿ ತಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಕುಟುಂಬದಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿರುವುದರಿಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಈ ವೇಳೆ ಕ್ವಾರಂಟೈನ್ ಅವಧಿಯಲ್ಲಿದ್ದ ಪೋಷಕರು ಜುಲೈ 6 ರಂದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.

ಇದು ವಿಪತ್ತು ನಿರ್ವಹಣಾ ಕಾಯ್ದೆ 2005ರ ನೇರೆ ಉಲ್ಲಂಘನೆ ಆಗಿದೆ. ಈ ಕಾಯ್ದೆಯ ಕಲಂ 51ರ ಅಡಿ ಹಾಗೂ ಐಪಿಸಿ ಸೆಕ್ಷನ್ ಕಲಂ 188ರ ಅಡಿ ಕಾರಗೃಹ ವಾಸ ಶಿಕ್ಷೆಗೆ ಒಳಪಡುವ ಶಿಕ್ಷಾರ್ಹ ಅಪರಾಧವಾಗಿದೆ. ಈ ನೋಟಿಸ್ ಎಚ್ಚರಿಕೆ ಎಂದು ಭಾವಿಸಿ, ಅವಧಿ ಮುಗಿಯುವವರೆಗೆ ಫೋನ್ ಸ್ವಿಚ್ ಆಫ್ ಮಾಡಬಾರದು. ಅವಧಿ ಮಗಿಯುವ ಮುನ್ನವೇ ಫೋನ್ ಸ್ವಿಚ್ ಆಫ್ ಮಾಡಿದರೆ ಸಾಂಸ್ಥಿಕ ಕ್ವಾರಂಟೈನ್ ಒಳಪಡಿಸುವುದಾಗಿ ಮಗುವಿನ ಹೆಸರಿನಲ್ಲಿ ದಿನಾಂಕ 7ರಂದು ಎಚ್ಚರಿಕೆ ನೋಟಿಸ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *