ಕ್ಯಾಪ್ಟನ್ ರೂಮ್‍ನಲ್ಲಿ ಪಾಸ್ ಆಗಿದ್ದೇನು ಶಮಂತ್ ಬಿಚ್ಚಿಟ್ರು ಸತ್ಯ..!

Public TV
2 Min Read

ಹಲವು ದಿನಗಳ ನಂತರ ಶಮಂತ್ ಬಿಗ್‍ಬಾಸ್ ಮನೆಯ ಕ್ಯಾಪ್ಟನ್ ರೂಂನಲ್ಲಿ ತಮಗಾದ ಅನುಭವವನ್ನು ಬಾಯ್ಬಿಟ್ಟಿದ್ದಾರೆ.

ಪ್ರಿಯಾಂಕ ತಿಮ್ಮೇಶ್‍ರನ್ನು ಬಾತ್ ರೂಮ್ ಏರಿಯಾಗೆ ಕರೆದುಕೊಂಡು ಹೋಗಿ ವೈಷ್ಣವಿ ಒಮ್ಮೆ ಕುಳಿತುಕೊಂಡಿದ್ದರು, ಬೆಡ್ ರೂಮ್ ಒಳಗೆ ಹೋದಾಗ ಡಿಎಸ್ ಮಲಗುವ ಜಾಗದಲ್ಲಿ ಡಿಯು ಮಲದ್ದಳು. ನಾನು ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡಿದ್ದೆ, ರಘು ಭೂತ ಕೋಲ ಎಂದು ಮಾತನಾಡುತ್ತಿದ್ದರು. ಆಗ ಕ್ಯಾಪ್ಟನ್ ರೂಮ್‍ನಲ್ಲಿ ಬ್ಲಾಕ್ ಕಲರ್ ಮಾದರಿ ಹೋಯಿತು. ಅದನ್ನು ನೋಡಿ 5 ನಿಮಿಷ ನಾನು ತಲೆ ಕೆಡಿಸಿಕೊಂಡು ಬಿಟ್ಟೆ ಎಂದಿದ್ದಾರೆ.

ಇದಕ್ಕೆ ಪ್ರಿಯಾಂಕ ಇದನ್ನು ನೀವು ಯಾರ ಬಳಿಯು ಹೇಳಲಿಲ್ಲವಾ ಎಂದು ಕೇಳಿದಾಗ, ಇಲ್ಲಿಯವರೆಗೂ ಇದನ್ನು ನಾನು ಯಾರಿಗೂ ಹೇಳಿಲ್ಲ. ನಿನಗೆ ಮೊದಲ ಬಾರಿಗೆ ಬಂದು ಹೇಳುತ್ತಿದ್ದೇನೆ. ಪ್ರಶಾಂತ್‍ರವರ ಬೆಡ್ ಮೇಲೆ ಕುಳಿತುಕೊಂಡು ವೈಷ್ಣವಿ, ಡಿಯುರನ್ನು ನೋಡುತ್ತಾ, ಬಾಟಲ್ ಇದ್ಯಾ ಎಂದು ನೋಡುತ್ತೇನೆ. ಆಗ ಕ್ಯಾಪ್ಟನ್ ರೂಮ್‍ನಿಂದ ಬ್ಲಾಕ್ ಕಲರ್‍ನಲ್ಲಿ ಹೀಗೆ ಏನೋ ಹೋಯಿತು ಇದನ್ನು ನಾನು ಯಾರಿಗೂ ಕೂಡ ಹೇಳಿಲ್ಲ ಎಂದು ಹೇಳಿದ್ದಾರೆ.

ನಂತರ ಪ್ರಿಯಾಂಕ ಹಾಗಾದರೆ ಇದನ್ನು ನನಗೆ ಯಾಕೆ ಹೇಳಿದ್ರಿ, ನಿಜವಾಗಲೂ ಹಾಗೆ ಹೋಯಿತಾ? ಹೆಂಗಿತ್ತು, ರೌಂಡ್ ಹಾಕಿಕೊಂಡು ಹೋಯಿತಾ ಎಂದು ಕೂತೂಹಲದಿಂದ ಕೇಳುತ್ತಾರೆ. ಆಗ ಶಮಂತ್ ರೌಂಡ್ ಅಲ್ಲ. ಏನೋ ಬ್ಲಾಕ್ ಕಲರ್ ಒಂದಿಷ್ಟು ನನ್ನ ಭುಜದಷ್ಟು ಎತ್ತರ ಇತ್ತು, ಒಳಗಡೆ ಪಾಸ್ ಆಯಿತು ಎನ್ನುತ್ತಾರೆ. ಇದು ಫ್ರ್ಯಾಂಕ್ ಅಲ್ಲ ತಾನೇ ದೇವರಾಣೆ ನಿನಗೆ ಹಾಗೆ ಅನಿಸಿತಾ ಎಂದು ಪ್ರಶ್ನಿಸಿದಾಗ, ಅನಿಸಿತಾ ಅಲ್ಲ, ನೋಡ್ದೆ ಎಂದು ಸತ್ಯ ಬಾಯ್ಬಿಟ್ಟಿದ್ದಾರೆ.

ಇದಕ್ಕೆ ಹೆದರಿ ಪ್ರಿಯಾಂಕ ಅಯ್ಯೋ ನಾನು ಸ್ನಾನ ಮಾಡಲು ಅಲ್ಲಿಗೆ ಹೋಗಿದ್ದೆ, ನನ್ನ ಪ್ರಕಾರ ಅಲ್ಲಿ ಇರುವ ಮೀರರ್‍ರನ್ನು ಯಾರೋ ಸರಿಸಿರಬಹುದು ಎಂದಾಗ ಶಮಂತ್ ಮೀರರ್ ಎಲ್ಲೋ ಇದೆ. ಆದರೆ ಒಂದು ಗ್ಲಾಸ್ ಡೋರ್ ಮುಚ್ಚಿತ್ತು, ಇನ್ನೊಂದು ಡೋರ್‍ನಿಂದ ಏನೋ ಬಾತ್ ರೂಂ ಕಡೆಗೆ ಪಾಸ್ ಆಯ್ತು. ನಾನು ಕ್ಯಾಪ್ಟನ್ ಆಗಿದ್ದಾಗಲು ಅಲ್ಲಿ ಮಲಗಿಕೊಂಡಾಗ ನಿದ್ದೆ ಬರುತ್ತಿರಲಿಲ್ಲ ಅಂದಾಗ, ಪ್ರಿಯಾಂಕ ತಿಮ್ಮೇಶ್ ಕೂಡ ಕ್ಯಾಪ್ಟನ್ ರೂಮ್‍ನಲ್ಲಿ ಯಾರಿಗೂ ನಿದ್ದೆ ಬರಲ್ಲ ಎನ್ನುತ್ತಾರೆ.

ಅದಕ್ಕೆ ಮಾತು ಜೋಡಿಸಿದ ಶಮಂತ್, ಹೌದು ಹಾಗಾದರೆ ಪಕ್ಕಾ ಎಂದು ಹೇಳುತ್ತಾ, ಈ ಬಗ್ಗೆ ಹೆಚ್ಚು ಮಾತನಾಡುವುದು ಬೇಡ ಎಂದು ಪ್ರಿಯಾಂಕರನ್ನು ಗಾರ್ಡನ್ ಏರಿಯಾಗೆ ಕರೆದುಕೊಂಡು ಹೋಗುತ್ತಾರೆ.

Share This Article
Leave a Comment

Leave a Reply

Your email address will not be published. Required fields are marked *